Monday, May 20, 2024

ಕಲುಷಿತ ನೀರಿಗೆ 3 ಬಲಿ: ರಾಯಚೂರು ಬಂದ್‌ಗೆ ಕರೆ

ರಾಯಚೂರು : ನಗರಸಭೆಯ ನಿರ್ಲಕ್ಷ್ಯದಿಂದಾಗಿ ಕಲುಷಿತ ನೀರಿನ ಸೇವನೆಯಿಂದ ಆಟೋ ಚಾಲಕರೊಬ್ಬರು ಮೃತಪಟ್ಟಿದ್ದು, ಇದುವರಗೆ ಮೃತಪಟ್ಟವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.ಆಟೋ ಚಾಲಕರಾಗಿದ್ದ ಅರಬ್ ಮೊಹಲ್ಲಾ ನಿವಾಸಿ ಮೊಹಮ್ಮದ್ ನೂರ್ ಕಲುಷಿತ ನೀರು ಸೇವಿಸಿ ಮೃತಪಟ್ಟಿದ್ದಾರೆ.

ಅದಲ್ಲದೇ, ಈಗಾಗಲೇ ನಗರದ ಮಲ್ಲಮ್ಮ ಮತ್ತು ಅಬ್ದುಲ್ ಗಫಾರ್​ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿದ್ದಾರೆ. ನೂರಾರು ಜನ ಹಾಗೂ ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಾವಿನ ಸರಣಿ ಮುಂದುವರೆದಿದ್ದರೂ ಎಚ್ಚೆತ್ತುಕೊಳ್ಳದ ನಗರಸಭೆ ವಿರುದ್ಧ ಸಾರ್ವಜನಿಕರಲ್ಲಿ ಆಕ್ರೋಶ ಹೆಚ್ಚಾಗಿದೆ. ಇದರಿಂದ ನಾಗರಿಕ ವೇದಿಕೆಯಿಂದ ರಾಯಚೂರು ಬಂದ್‌ಗೆ ಕರೆ ನೀಡಲಾಗಿದೆ.

ಇನ್ನು ಈ ವಿಷಯದ ಕುರಿತು ಮಾತನಾಡಿದ ಸಿಎಂ ರಾಯಚೂರಿನಲ್ಲಿ ಕಲುಷಿತ‌ ನೀರು ಸೇವಿಸಿ ಮೂವರ ದುರ್ಮರಣ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದರ ಬಗ್ಗೆ ಸಂಪೂರ್ಣ ವರದಿ ತರಿಸಿಕೊಂಡು ಪರಿಶೀಲಿಸುತ್ತೇನೆ. ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಕೊಡ್ತೇವೆ ಎಂದು ಘೋಷಣೆ

RELATED ARTICLES

Related Articles

TRENDING ARTICLES