Monday, December 23, 2024

ಜೂನ್ ಕೊನೆ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

ಬೆಂಗಳೂರು: ಜೂನ್ 3 ಅಥವಾ 4ನೇ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ.

ತಾತ್ಕಾಲಿಕ ದಿನಾಂಕ ಸಿದ್ದಪಡಿಸಿರುವ ಪಿಯು ಬೋರ್ಡ್ ಜೂ.24, ಕೊನೆ ವಾರವಾದ್ರೆ ಜೂ.28ಕ್ಕೆ ಫಲಿತಾಂಶ ನೀಡಲು ಸಿದ್ದತೆ ಮಾಡಲಾಗಿದೆ. SSLC ಫಲಿತಾಂಶದ ರೀತಿಯೇ ವಿದ್ಯಾರ್ಥಿಗಳ ಮೊಬೈಲ್ ಗೆ ದ್ವಿತೀಯ ಪಿಯುಸಿ ಫಲಿತಾಂಶ ಮೆಸೇಜ್ ಮೂಲಕ ಫಲಿತಾಂಶ ರವಾನಿಸಲಾಗುತ್ತದೆ.

ಏ.22 ರಿಂದ ಮೇ 18ರವರೆಗೆ ನಡೆದಿದ್ದ ದ್ವಿತೀಯ ಪಿಯು ಪರೀಕ್ಷೆ ಸದ್ಯ ಮೌಲ್ಯಮಾಪನ ಕಾರ್ಯ ಅರ್ಧದಷ್ಟು ಮುಗಿದಿದೆ. ಒಟ್ಟು 6,84,255 ವಿದ್ಯಾರ್ಥಿಗಳು ಈ ಬಾರೀ ಪರೀಕ್ಷೆಗೆ ನೊಂದಣಿ ಮಾಡಿದ್ದು, ಫಲಿತಾಂಶ ನೀಡುವ ವಿಚಾರದಲ್ಲಿ ವಿಳಂಬ ಆಗೋದಿಲ್ಲ. ಹೆಚ್ಚು ಉಪನ್ಯಾಸಕರನ್ನ ಬಳಸಿಕೊಂಡು ಮೌಲ್ಯಮಾಪನ ಕಾರ್ಯ ಮಾಡಲಾಗಿದ್ದು, ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ಯಾವುದೇ ತೊಂದರೆ ಆಗೊಲ್ಲ. ಎಲ್ಲ ಅಂದುಕೊಂಡಂತೆ ಆದ್ರೆ ಜೂನ್ 3ನೇ ವಾರವೇ ಫಲಿತಾಂಶ ಪ್ರಕಟವಾಗಲಿದೆ.

RELATED ARTICLES

Related Articles

TRENDING ARTICLES