Monday, December 23, 2024

ಇಂದು ವಿಶ್ವ ಪರಿಸರ ದಿನಾಚರಣೆ

ವಿಶ್ವ ಪರಿಸರ ದಿನ ಬಂತೆಂದರೆ ಸಾಕು ಬಾಲ್ಯದ ಜೀವನ ನೆನಪಾಗುವುದಂತು ಸಹಜ ಅದರಲ್ಲೂ ಶಾಲಾ ದಿನಗಳಲ್ಲಿ ಪರಿಸರ ದಿನಾಚರಣೆಯ ಮುಂಚೆಯೇ ಪ್ರಬಂಧ ಸ್ಪರ್ಧೆಗಳು ಮುಖ್ಯವಾಗಿ ಪರಿಸರ ಗೀತೆಗಳು ಹಾಗೂ ಇನ್ನಿತರ ಸ್ಪರ್ಧೆಗಳನ್ನು ಏರ್ಪಡಿಸುತ್ತಾರೆ. ಹಾಗಾದರೆ ವಿಶ್ವ ಪರಿಸರ ದಿನಾಚರಣೆಯನ್ನು ಏಕೆ ಆಚರಿಸುತ್ತಾರೆ ನೋಡೋಣ ಬನ್ನಿ.

ಪರಿಸರವು ಪ್ರತಿಯೊಂದು ಜೀವರಾಶಿಗೆ ಅತ್ಯಂತ ಅಮೂಲ್ಯ ಕೊಡುಗೆಯಾಗಿದೆ. ಪರಿಸರದಲ್ಲಿನ ಗಾಳಿ, ನೀರು, ಮಣ್ಣು, ಮರಗಳು, ಕಾಡುಗಳು ಸಾಗರಗಳು ಇತ್ಯಾದಿಗಳು ಎಂದೆಂದಿಗೂ ಉಳಿಯುವುದು ಬಹಳ ಮುಖ್ಯ.

ಇಂದು ಜೂನ್​ 5 ಮತ್ತು ಪ್ರತಿ ವರ್ಷ ಈ ದಿನದಂದು ನಾವು ವಿಶ್ವ ಪರಿಸರ ದಿನವನ್ನು ಆಚರಿಸುತ್ತೇವೆ. ವಿಶ್ವ ಪರಿಸರ ದಿನವು ವಿಶ್ವಾದ್ಯಂತ ಜಾಗೃತಿ ಮತ್ತು ನಮ್ಮ ಪರಿಸರದ ರಕ್ಷಣೆಗಾಗಿ ಕ್ರಮವನ್ನು ಉತ್ತೇಜಿಸಲು ಯುಎನ್​ನ ಪ್ರಮುಖ ದಿನಗಳಲ್ಲಿ ಒಂದಾಗಿಗೆ. ವಿಶ್ವ ಪರಿಸರ ದಿನವನ್ನು ಮೊದಲು 1972ರಲ್ಲಿ ಯುಎನ್​ಎ ಪ್ರಸ್ತಾಪಿಸಿತು ಮತ್ತು ಇದನ್ನು ಮೊದಲು 1974ರಲ್ಲಿ ಆಚರಿಸಲಾಯಿತು. ಅಂದಿನಿಂದ ಇದು ಜಾಗತಿಕ ವೇದಿಕೆಯಾಗಿದೆ ಮತ್ತು ಅದರೆ ಜನಪ್ರಿಯತೆಯನ್ನು ಗಳಿಸಿದೆ ಮತ್ತು ಈಗ 100ಕ್ಕೂ ಹೆಚ್ಚು ರಾಪ್ಟ್ರಗಳು ಈ ವಿಶ್ವ ದಿನವನ್ನು ಆಚರಿಸುತ್ತಿವೆ. ಜೀವಿಗಳ ಪೋಷಣೆಯಲ್ಲಿ ಪರಿಸರ ಪ್ರಮುಖ ಪಾತ್ರ ವಿವಿಧ ಜೀವಿಗಳ ನೆಲೆಯಾಗಿದೆ ಮತ್ತು ನಾವೆಲ್ಲರೂ ಆಹಾರ, ಗಾಳಿ, ನೀರು ಮತ್ತು ಇತರ ಅಗತ್ಯಗಳಿಗಾಗಿ ಪರಿಸರದ ಮೇಲೆ ಅವಲಂಬಿತರಾಗಿದ್ದೇವೆ.

ಪ್ರತಿ ವರ್ಷ ಬೇರೆ ಬೇರೆ ಧ್ಯೇಯವಾಕ್ಯದೊಂದಿಗೆ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಈ ಧ್ಯೇಯವಾಕ್ಯದ ಮೂಲ ಉದ್ದೇಶ ಏನೆಂದರೆ ಪರಿಸರದ ಪ್ರತಿ ಎಲ್ಲರಲ್ಲೂ ಜಾಗೃತಿ ಮೂಡಿಸುವುದು ಮತ್ತು ಪರಿಸರವನ್ನು ಹಾಳು ಮಾಡುವುದನ್ನು ತಡೆಯುವುದಾಗಿದೆ.

ಉಸಿರಿಗಾಗಿ ಪರಿಸರ ರಕ್ಷಿಸೋಣ ವಿಶ್ವ ಪರಿಸರ ದಿನದ ಹಾರ್ದಿಕ ಶುಭಾಶಯಗಳು

RELATED ARTICLES

Related Articles

TRENDING ARTICLES