Monday, December 23, 2024

ಕನ್ನಡಕ್ಕೆ ಕಿಂಗ್​ ಖಾನ್​​.. ನಾನ್​ ರೆಡಿ ಅಂದ್ರು ಶಾರೂಖ್​..!

ಕನ್ನಡ ಅಂದ್ರೆ ಮೂಗು ಮುರಿತಿದ್ದ ಕಾಲ  ಸುಟ್ಟು, ಭಸ್ಮವಾಗಿದೆ. ದೇಶ, ವಿದೇಶಗಳಲ್ಲಿ ಕನ್ನಡ ಸಿನಿಮಾಗಳ ಕೀರ್ತಿ ಪತಾಕೆ ರಾರಾಜಿಸುತ್ತಿದೆ. ಯೆಸ್​​.. ಬಾಲಿವುಡ್​ ಬಾದ್​ಷಾ, ಕಿಂಗ್​​ ಖಾನ್​ ಶಾರುಖ್​​ ಅವ್ರ ಜವಾನ್​ ಚಿತ್ರದ ಟೀಸರ್​ಗೆ ಫ್ಯಾನ್ಸ್​ ಸ್ಟನ್​ ಆಗಿದ್ದಾರೆ. ಅಸಲಿಗೆ  ಶಾಕಿಂಗ್​ ನೀವ್ಸ್​ ಏನಂದ್ರೆ, ಈ ​ಚಿತ್ರದ ಮೂಲಕ ಶಾರುಖ್​ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.

  • ಕನ್ನಡಕ್ಕೆ ಕಿಂಗ್​ ಖಾನ್​​.. ನಾನ್​ ರೆಡಿ ಅಂದ್ರು ಶಾರೂಖ್​..!
  • ಮೈನವಿರೇಳಿಸೋ ಆ್ಯಕ್ಷನ್​ ಚಿತ್ರಕ್ಕೆ ಶಾರೂಖ್ ​ ರಗಡ್​ ಲುಕ್​
  • ಶಾರೂಖ್ ​ ಬ್ಯಾಂಡೇಜ್​ ಅವತಾರಕ್ಕೆ  ಫ್ಯಾನ್ಸ್​ ಶಾಕ್​​..!
  • ಅಭಿಮಾನಿಗಳ ಎದೆಯಲ್ಲಿ ‘ಜವಾನ್’​ ರೋಮಾಂಚನ

ಸೋಶಿಯಲ್ ಮೀಡಿಯಾದ ಮೂಲೆ ಮೂಲೆಗಳಲ್ಲೂ ಕಿಂಗ್​ ಖಾನ್​​ ಶಾರುಖ್​ ಸೌಂಡ್​ ಮಾಡ್ತಿದ್ದಾರೆ. ಒನ್ಸ್​ ಅಗೈನ್​​, ಕಿಂಗ್ ಇಸ್​ ಬ್ಯಾಕ್​ ಅಂತಿದಾರೆ ಕ್ರೇಜಿ ಫ್ಯಾನ್ಸ್​. ಸದ್ಯ ರಿಲೀಸ್​ ಆಗಿರೋ ಚಿಕ್ಕ ಟೀಸರ್​ ಈ ಪಾಟಿ ಗುಲ್ಲೆಬ್ಬಿಸಿದೆ. ಈ ಸಣ್ಣ ಝಲಕ್​ಗೆ ಸ್ಟನ್​ ಆಗಿರೋ ಚಿತ್ರರಸಿಕರು ಮೂಖವಿಸ್ಮಿತರಾಗಿದ್ದಾರೆ. ಅಭಿಮಾನಿಗಳ ಎಗ್ಸೈಟ್​ಮೆಂಟ್​ ಕಂಟ್ರೋಲ್​ ಮಾಡೋಕೆ ಸಾಧ್ಯವೇ ಇಲ್ಲ. ಯೆಸ್​​.. ಜವಾನ್​ ಚಿತ್ರದ ಟೀಸರ್​ನ ಶಾರುಖ್​ ಖಾನ್​ ರಾ ಆಂಡ್​ ರಗಡ್​ ಲುಕ್​ಗೆ ಇಡೀ ಚಿತ್ರರಂಗ ಥಂಡಾ ಹೊಡೆದಿದೆ.

ರಾಜ ರಾಣಿ, ತೇರಿ, ಮರ್ಸೆಲ್​, ಬಿಗಿಲ್​ ಹೀಗೆ ಬ್ಲಾಕ್​ಬಸ್ಟರ್​ ಚಿತ್ರಗಳ ಮೂಲಕ ಕಾಲಿವುಡ್​ನಲ್ಲಿ ಹೊಸ ಸಂಚಲನ ಕ್ರಿಯೇಟ್​ ಮಾಡಿರೋ ಡೈರೆಕ್ಟರ್​ ಅಟ್ಲಿ. ಇದೀಗ ಬಾಲಿವುಡ್​ ಬಾದ್​ಷಾ ಶಾರುಖ್​ ಅಭಿನಯದ ಜವಾನ್​ ಚಿತ್ರಕ್ಕೆ ಆ್ಯಕ್ಷನ್ ಕಟ್​ ಹೇಳ್ತಿದ್ದಾರೆ. ಹೊಸ ಇತಿಹಾಸಕ್ಕೆ ನಾಂದಿ ಹಾಡಲಿರುವ ಈ ಸಿನಿಮಾದಲ್ಲಿ ಪ್ರತಿ ಫ್ರೇಮಿನಲ್ಲೂ ವಾವ್ಹ್ ಫೀಲ್​ ಕೊಡೋ ಆ್ಯಕ್ಷನ್​ ಥ್ರಿಲ್​ ಇರಲಿದೆ. ಇದ್ರ ಜೊತೆಗೆ ಕನ್ನಡಿಗರು ಹೆಮ್ಮೆ ಪಡೋ ವಿಚಾರ ಅಂದ್ರೆ, ಈ ಸಿನಿಮಾ ಕನ್ನಡದಲ್ಲೂ ತಯಾರಾಗ್ತಿದೆ.  ಈ ಕುರಿತು ಟ್ವಿಟರ್ ಖಾತೆಯಲ್ಲಿ ​ ಶಾರುಖ್​ ಮಾಹಿತಿ ಹಂಚಿಕೊಂಡಿದ್ದಾರೆ.

ಕಿಂಗ್​ ಖಾನ್​ ಶಾರುಖ್​ ,ಜವಾನ್​ ಚಿತ್ರದ ಮೂಲಕ ಸೌತ್​ ಸಿನಿಮಾಗಳ ಕಡೆ ಹೆಜ್ಜೆ ಇಟ್ಟಿದ್ದಾರೆ. ಕೆಜಿಎಫ್​​ ಚಿತ್ರದ ನಂತ್ರ ಸ್ಯಾಂಡಲ್​ವುಡ್​ ಗತ್ತು, ತಾಕತ್ತು ಇಡೀ ವಿಶ್ವಕ್ಕೆ ಗೊತ್ತಾಗಿದೆ. ಇತ್ತೀಚಿನ ಕನ್ನಡ ಪ್ಯಾನ್​ ಇಂಡಿಯಾ ಸಿನಿಮಾಗಳು ಅದನ್ನ ಪ್ರೂವ್​ ಮಾಡಿವೆ. ಇದೀಗ ಜವಾನ್​ ಚಿತ್ರದ ಮೂಲಕ ಶಾರುಖ್​ ದಿಕ್ಕು ಕೂಡ ಬದಲಾಗಿದೆ. ಕಮರ್ಷಿಯಲ್​​, ಡ್ರಾಮ, ಎಮೋಷನಲ್​ ಕಂಟೆಂಟ್​ ಇರೋ ಹೊಸ ಸಿನಿಮಾ ಜವಾನ್​. ಇದೀಗ ಶಾರುಖ್​ ಲುಕ್​, ಚಿತ್ರದ ಕುರಿತು ಮತ್ತಷ್ಟು ಕೌತುಕ ಸೃಷ್ಠಿ ಮಾಡಿದೆ.

ಕನ್ನಡ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ಜವಾನ್​ ಸಿನಿಮಾ 2023 ಜೂನ್​ 02ಕ್ಕೆ ದೊಡ್ಡ ಮಟ್ಟದಲ್ಲಿ ತೆರೆಗೆ ಬರಲಿದೆ. ಪ್ಯಾನ್​ ಇಂಡಿಯಾ ಲೆವೆಲ್​ನಲ್ಲಿ ಪಕ್ಕಾ ವಿಶ್ಯುಯೆಲ್​ ಟ್ರೀಟ್​ ಸಿನಿಮಾ ನಿರ್ಮಾಣ ಮಾಡೋಕೆ ಚಿತ್ರತಂಡ ಸಜ್ಜಾಗಿದೆ. ಇನ್ನೂ ಜವಾನ್​ ಸಿನಿಮಾದಲ್ಲಿ ಯಾರೆಲ್ಲಾ ಆ್ಯಕ್ಟ್​ ಮಾಡ್ತಾರೆ ಅನ್ನೋದು ಮಾತ್ರ ಕನ್ಫರ್ಮ್​ ಆಗಿಲ್ಲ.  ಸದ್ಯ ಪಠಾಣ್​ ಚಿತ್ರದಲ್ಲಿ ಬ್ಯುಸಿ ಇರೋ ಶಾರುಖ್​, ಜವಾನ್​ ಚಿತ್ರದ ಟೀಸರ್​ ರಿಲೀಸ್​ ಮಾಡಿ ಎಲ್ಲರಿಗೂ ಶಾಕ್​ ಕೊಟ್ಟಿದ್ದಾರೆ.

ರೆಡ್​ ಚಿಲ್ಲಿ ಎಂಟರ್​ಟೈನ್​ಮೆಂಟ್​ ಬ್ಯಾನರ್​ ಅಡಿಯಲ್ಲಿ ಕೋಟಿ ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗ್ತಿರೋ ಈ ಚಿತ್ರ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಹುಟ್ಟಿಸಿದೆ. ಈ ಚಿತ್ರವನ್ನು ಗೌರಿ ಖಾನ್​ ನಿರ್ಮಾಣ ಮಾಡ್ತಿದ್ದು, ಎಲ್ಲರ ಹಬ್ಬೇರಿಸುವಂತೆ ಮಾಡಿದೆ ಟೀಸರ್​. ಒಟ್ಟಾರೆಯಾಗಿ ಮೈತುಂಬಾ ಬ್ಯಾಂಡೇಜ್ ಹಾಕಿ, ಕೈಯಲ್ಲಿ ಗನ್ ಹಿಡಿದು ಎಲ್ಲರಿಗೂ ನಾನ್​ ರೆಡಿ ಅನ್ನೋ ಎಚ್ಚರಿಕೆ ಕೊಟ್ಟಿದ್ದಾರೆ ಕಿಂಗ್​ ಖಾನ್​​​​​​.

ರಾಕೇಶ್​ ಆರುಂಡಿ, ಫಿಲ್ಮ್ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES