Monday, November 18, 2024

ಒಂದೇ ಸೂರಿನಡಿ ಹತ್ತಾರು ಕಾಲೇಜುಗಳ ಸಮಾಗಮ

ಬೆಂಗಳೂರು : ಪಿಯುಸಿ ಮುಗೀತು, ಡಿಗ್ರಿ ಮುಗೀತು ನೆಕ್ಸ್ಟ್​ ಏನು ಮಾಡಬೇಕು , ಯಾವ ಕೋರ್ಸ್ ಗೆ ಡಿಮ್ಯಾಂಡ್ ಜಾಸ್ತಿ ಇದೆ . ಯಾವ ಕಾಲೇಜು ಚೆನ್ನಾಗಿದೆ ಅಂತ ಗೊತ್ತಿಲ್ಲದೆ ವಿದ್ಯಾರ್ಥಿಗಳು ಗೊಂದಲದಲ್ಲೇ ಇರ್ತಾರೆ . ಹೀಗಾಗಿ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿ ಅಂತ ಇಂದು ಪವರ್ ಟಿವಿ ಹಾಗೂ ರೆಡ್ FM ಸಹಯೋಗದಲ್ಲಿ ರೆಡ್ ಯು ಫೇರ್ ಹೆಸರಲ್ಲಿ ಶಿಕ್ಷಣ ಮೇಳ ನಡೆಸಲಾಯಿತು.

ಪಿಯುಸಿ ಮುಗಿಸಿದ ವಿದ್ಯಾರ್ಥಿಗಳಿಗಾಗಿ ಇಂದು ಹಾಗೂ ನಾಳೆ ಶಿಕ್ಷಣ ಮೇಳ ನಡೆಯುತ್ತಿದೆ .ನಗರದ ಧಣಿಸಂದ್ರದ ಭಾರತೀಯ ಸಿಟಿ ಮಾಲ್ ಆಫ್ ಬೆಂಗಳೂರಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ . ಈ ಕಾರ್ಯಕ್ರಮಕ್ಕೆ ಸುಮಾರು 30 ಕ್ಕೂ ಹೆಚ್ಚು ಕಾಲೇಜುಗಳು ಹಾಗೂ 3 ಕ್ಕೂ ಹೆಚ್ಚು ಯೂನಿವರ್ಸಿಟಿಗಳು ಭಾಗಿಯಾಗಿ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ್ರು .

ಇನ್ನು ಇವತ್ತಿನ ರೆಡ್ಯೂ ಯು ಫೇರ್ ಗೆ , ಸ್ಯಾಂಡಲ್ವುಡ್ ನಟ ಶರಣ್ , ರಾಬರ್ಟ್ ರಾಣಿ ಆಶಾ ಭಟ್ , AFKCCI ಅಧ್ಯಕ್ಷ ಪ್ರಸಾದ್, ಮಣಿಪಾಲ್ ಅಕಾಡೆಮಿಯ ರಿಜಿಸ್ಟರ್ ಆಗಿರುವಂತಹ ಡಾಕ್ಟರ್ ವಿದ್ಯಾ ಶೆಟ್ಟಿ , ನಿಮಾನ್ಸ್ ಆಸ್ಪತ್ರೆಯ ಪಬ್ಲಿಕ್ ಹೆಲ್ತ್ HOD ಪ್ರದೀಪ್ ಬಾಣಂದೂರ್ ಸೇರಿದಂತೆ ಹಲವರು ಭಾಗಿಯಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು .

ಇನ್ನು ಇವತ್ತಿನ ಈ ಕಾರ್ಯಕ್ರಮದಲ್ಲಿ ಕೃಷಿ, ತೋಟಗಾರಿಕೆ, ಆ್ಯನಿಮೇಶನ್‌, ಮೀಡಿಯಾ ಮತ್ತು ಗೇಮಿಂಗ್‌, ಆರ್ಕಿಟೆಕ್ಚರ್‌, ಕೋಚಿಂಗ್‌ ಸೆಂಟರ್‌ಗಳು, ವಾಣಿಜ್ಯ ಸಂಸ್ಥೆಗಳು, ಎಂಜಿನಿಯರಿಂಗ್‌, ವೈದ್ಯ , ದಂತವೈದ್ಯ , ಹೋಟೆಲ್‌ ಮ್ಯಾನೇಜ್‌ಮೆಂಟ್‌, ಕಾನೂನು, ಎಂಬಿಎ ಕಾಲೇಜುಗಳು ಪಾಲ್ಗೊಂಡು ತಮ್ಮಲ್ಲಿರುವ ಆಯ್ಕೆಗಳ ಬಗ್ಗೆ ಮಾಹಿತಿ ನೀಡಿದ್ರು .

ಇನ್ನು, ಕಾಮೆಡ್‌ ಕೆ ಕೌನ್ಸೆಲಿಂಗ್‌, ಉನ್ನತ ಶಿಕ್ಷಣ, ಸಿಇಟಿ ಕೌನ್ಸೆಲಿಂಗ್‌ ಎದುರಿಸುವ ವಿಧಾನ, ಹೀಗೆ ಬಹುತೇಕ ಎಲ್ಲಾ ವಿಚಾರಗಳ ಬಗ್ಗೆ ಇಂದು ಚರ್ಚೆ ನಡೆಯಿತು .

ಒಟ್ಟಾರೆ ‘ರೆಡ್ ಯು ಫೇರ್’ ಗೆ ಇಂದು ಒಳ್ಳೆಯ ರೆಸ್ಪಾನ್ಸ್ ಸಿಕ್ತು . ನಾಳೆಯು ಕೂಡ ಈ ಫೇರ್ ನಡೆಯಲಿದ್ದು . ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿ ಮಾಹಿತಿ ಪಡೆಯಬಹುದು.

RELATED ARTICLES

Related Articles

TRENDING ARTICLES