Monday, December 23, 2024

ದಸರಾ ದಂಗಲ್​ಗೆ  ‘ಮಾರ್ಟಿನ್’​ V/S  ‘ಕಾಂತಾರ’ ​

ನವರಾತ್ರಿ ದಸರಾ ಜಂಬೂ ಸವಾರಿ ನಡುವೆ ಕನ್ನಡ ಚಿತ್ರಗಳ ದಂಗಲ್​ ಜಟಾಪಟಿ ನಡೆಯಲಿದೆ. ಕನ್ನಡದ ಬಿಗ್​ ಸ್ಟಾರ್​ ಜೊತೆ ಬಿಗ್​ ಬ್ಯಾನರ್​ ಪೈಪೋಟಿ ನಡೆಯಲಿದೆ. ಈ ದಸರಾಗೆ  ಚಿತ್ರರಸಿಕರಿಗೆ ಮನರಂಜನೆಯ ರಸದೌತಣ ಪಕ್ಕಾ ಆಗಲಿದೆ. ಯೆಸ್​.. ಕನ್ನಡದ ಎರಡು ಬಿಗ್​ ಸಿನಿಮಾಗಳು ಏಕಕಾಲಕ್ಕೆ ಮುಖಾಮುಖಿಯಾಗ್ತಾ ಇವೆ. ಅಖಾಡದಲ್ಲಿ ತೊಡೆ ತಟ್ಟೋ ಸಿನಿಮಾಗಳು ಯಾವುದು ಅಂತೀರಾ..? ಈ  ಸ್ಟೋರಿ ಓದಿ.

  • ಬಿಗ್​ ಪ್ರೊಡಕ್ಷನ್​​ ಜೊತೆ ಬಿಗ್​ಸ್ಟಾರ್​ ಧ್ರುವ ಫೈಟಿಂಗ್​

ಆ್ಯಕ್ಷನ್​ ಪ್ರಿನ್ಸ್​ ದ್ರುವ ಅಭಿನಯದ ಮಾರ್ಟಿನ್​ ಚಿತ್ರದ ಕ್ರೇಜ್​ ಬಗ್ಗೆ ಜಾಸ್ತಿ ಹೇಳಬೇಕಾಗಿಲ್ಲ. ಜಿಮ್​ನಲ್ಲಿ ದ್ರುವ ಸರ್ಜಾ ದೇಹ ದಂಡಿಸಿ ಬೆವರಿಳಿಸೋದು  ನೋಡಿದ್ರೆ ಗೊತ್ತಾಗುತ್ತೆ. ಚಿತ್ರದಲ್ಲಿ ಆ್ಯಕ್ಷನ್​​ ಸೀಕ್ವೆನ್ಸ್​ ಕಾಳಗ ಯಾವ ಲೆವೆಲ್​ನಲ್ಲಿ ಇರುತ್ತೆ ಅಂತಾ. ಏನೇ ಇರಲಿ, ಸೆ.30ಕ್ಕೆ ತೆರೆ ಮೇಲೆ ಬರೋಕೆ ನಾವ್​ರೆಡಿ ಅಂದಿತ್ತು ಮಾರ್ಟಿನ್​ ಟೀಂ. ಟೀಸರ್​ ರಿಲೀಸ್​ ಆದಾಗ್ಲೇ, ಸೈಲೆಂಟ್​ ಆಗಿ ಎಲ್ರೂ ದಾರಿ ಬಿಟ್ಬಿಡಿ. ಐ ಯಾಮ್​ ಕಮಿಂಗ್​ ಎಂಬ ಎಚ್ಚರಿಕೆ ಕೂಡ ಕೊಟ್ಟಿತ್ತು.

ಅದ್ದೂರಿ ಚಿತ್ರದಲ್ಲಿ ಒಂದಾಗಿದ್ದ  ನಿರ್ದೇಶಕ ಎ.ಪಿ ಅರ್ಜುನ್​ ಮಾರ್ಟಿನ್​ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಮಾರ್ಟಿನ್​ ಚಿತ್ರದ ಮೇಲೆ ಚಿತ್ರಪ್ರೇಮಿಗಳ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಈ ನಡುವೆ ಮಾರ್ಟಿನ್​ ಜೊತೆ ಅಖಾಡಕ್ಕಿಳಿಯೋಕೆ ಬಿಗ್​ ಬ್ಯಾನರ್​ ಸಿನಿಮಾ ರೆಡಿಯಾಗಿದೆ. ಯೆಸ್​​.. ಸೆ.30ಕ್ಕೆ ಸಿಲ್ವರ್​ ಸ್ಕ್ರೀನ್​ಗೆ ಎಂಟ್ರಿ ಕೊಡ್ತಿದೆ ರಿಷಭ್​ ನಟನೆಯ ಕಾಂತಾರ ಸಿನಿಮಾ. ಹೊಂಬಾಳೆ ಬ್ಯಾನರ್​ ಅಡಿಯಲ್ಲಿ ನಿರ್ಮಾಣವಾಗಿರೋ ಅದ್ಧೂರಿ ಚಿತ್ರ ಇದು. ಎರಡು ಘಟಾನುಘಟಿ ಕನ್ನಡ ಸಿನಿಮಾಗಳು  ಒಂದೇ ದಿನ ಮುಖಾಮುಖಿ ಆಗ್ತಿರೋದ್ರಿಂದ ಪ್ರೇಕ್ಷಕರು ಸಖತ್​ ಥ್ರಿಲ್ ಆಗಿದ್ದಾರೆ.

  • ನವರಾತ್ರಿ ದಸರಾ  ದಂಗಲ್​ನಲ್ಲಿ ಗೆಲ್ಲೋದು ಯಾರು..?
  • ಬಾಕ್ಸ್​ ಆಫೀಸ್​ ಕ್ಲ್ಯಾಶ್​ನಲ್ಲಿ ರಿಷಭ್​​ ಕ್ಲಾಸ್​, ಧ್ರುವ ಮಾಸ್​

ಕನ್ನಡ ಚಿತ್ರರಂಗದಲ್ಲಿ ಸೂಪರ್​ ಹಿಟ್​ ಸಿನಿಮಾಗಳನ್ನು ಕೊಟ್ಟ ಹೆಗ್ಗಳಿಕೆಯ ಸಂಸ್ಥೆ ಹೊಂಬಾಳೆ ಫಿಲಂಸ್​​. ಹೊಂಬಾಳೆ ಬ್ಯಾನರ್​ ಅಡಿಯಲ್ಲಿ ಮೂಡಿ ಬರ್ತಿರೋ ಕಾಂತಾರ ಚಿತ್ರವನ್ನು ರಿಷಬ್​ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಸ್ವತಃ ಕಂಬಳ ಕಲಿತು ಕೋಣ ಸವಾರಿ ಮಾಡಲಿರೋ ರಿಷಬ್​​ ನಾಯಕನಾಗಿ ಮಿಂಚಲಿದ್ದಾರೆ. ಕರಾವಳಿಯ ಹಳ್ಳಿಗಾಡಿನ ವಿಭಿನ್ನ ಕಥೆ ಇರೋ ಕಾಂತಾರ ಚಿತ್ರಕ್ಕಾಗಿ ಇಡೀ ಕರುನಾಡೇ ಕಾಯ್ತಿದೆ.

ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಹುಟ್ಟುಹಾಕಿರೋ ಕಂಬಳದ ದಂತ ಕತೆಗೆ ಮಾರ್ಟಿನ್​ ಸೆಡ್ಡು ಹೊಡೆಯೋಕೆ ರೆಡಿಯಾಗಿದ್ದಾನೆ. ಸ್ವಾಭಾವಿಕವಾಗಿ ಎರಡು ಸಿನಿಮಾಗಳು ದೊಡ್ಡ ಮಟ್ಟದ ಭರವಸೆ ಕ್ರಿಯೇಟ್​ ಮಾಡಿರೋದ್ರಿಂದ, ಪ್ರೇಕ್ಷಕನ ಮನಸ್ಸು ಯಾರ ಕಡೆ ವಾಲುತ್ತೋ ಕಾದು ನೋಡಬೇಕು. ಮೊದಲೇ ಮಾರ್ಟಿನ್​ ಚಿತ್ರತಂಡ ರಿಲೀಸ್​ ಡೇಟ್ ಅನೌನ್ಸ್​  ಮಾಡಿದ್ರೂ ಕೂಡ ಕಾಂತಾರ ಚಿತ್ರ ಸೆ.30 ಡೇಟ್​ ಫಿಕ್ಸ್​ ಮಾಡಿದೆ. ಹಾಗಾಗಿ ಕೂತೂಹಲ ಹೆಚ್ಚಾಗಿದೆ. ಎದುರಾಳಿ ಯಾರೆ ಇದ್ರೂ, ಧೈರ್ಯವಾಗಿ ಪಿಚ್​​ಗೆ ಇಳಿಯೋಕೆ ಕಾಂತಾರ ಸಿನಿಮಾ ಸಜ್ಜಾಗಿದೆ.

ರಿಷಬ್​ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರ್ತಿರೋ ಕಾಂತಾರ ಚಿತ್ರಕ್ಕೆ ಅರವಿಂದ್​.ಎಸ್​.ಕಶ್ಯಪ್​ ಕ್ಯಾಮೆರಾ ಕೈಚಳಕ ಮ್ಯಾಜಿಕ್​ ಮಾಡಲಿದೆ. ವಿಜಯ್​ ಕಿರಗಂದೂರು ಅದ್ಧೂರಿ ವೆಚ್ಚದಲ್ಲಿ ವಿಜಯ್​ ಕಿರಗಂದೂರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇನ್ನೂ ಮಾರ್ಟಿನ್​ ಚಿತ್ರಕ್ಕೆ  ಎ.ಪಿ ಅರ್ಜುನ್​ ಆ್ಯಕ್ಷನ್​ ಕಟ್​ ಹೇಳಿದ್ದು, ಉದಯ್​ ಕೆ ಮೆಹ್ತಾ ನಿರ್ಮಾಣದಲ್ಲಿ ಸಖತ್​ ನಿರೀಕ್ಷೆ ಮೂಡಿಸಿದೆ.  ಒಟ್ಟಾರೆ ಈ ಕಾಳಗದಲ್ಲಿ ಗೆಲುವು ಯಾರಿಗೆ ಅನ್ನೋದು ಮಾತ್ರ ದಸರಾ ಸಿನಿದಂಗಲ್​ ನಡೆಯೋವರೆಗೂ ಕಾಯಬೇಕು.

ರಾಕೇಶ್​​ ಆರುಂಡಿ, ಫಿಲ್ಮ್ ಬ್ಯುರೋ, ಪವರ್ ಟಿವಿ

RELATED ARTICLES

Related Articles

TRENDING ARTICLES