Thursday, January 23, 2025

ಪ್ರೀತಿಸಿ ಮದುವೆಯಾದ ನವವಿವಾಹಿತೆ ಸಾವು..!

ಚಿಕ್ಕಬಳ್ಳಾಪುರ : ಖಾಸಗಿ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದ ಅನುಷಾ, ಕಳೆದ 1 ವರ್ಷದ ಹಿಂದೆ ಚಿಕ್ಕಬಳ್ಳಾಪುರ ತಾಲೂಕಿನ ಕರಿಗಾನಪಾಳ್ಯ ಗ್ರಾಮದ ಅಭಿಲಾಷ್‍ನನ್ನು ಪ್ರೀತಿಸಿ ಮದುವೆಯಾಗಿದ್ದಳು. ಮದುವೆಯಾದ ನಂತರ ನಗರದ 9ನೇ ವಾರ್ಡಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆದರೆ ಇದಕ್ಕಿಂದಂತೆ ಅನುಷಾ ಶವವಾಗಿ ಪತ್ತೆಯಾಗಿದ್ದಾಳೆ.

ನೇಣು ಬಿಗಿದ ಸ್ಥಿತಿಯಲ್ಲಿ ಅನುಷಾಳ ಮೃತದೇಹ ಪತ್ತೆಯಾಗಿದ್ದು, ಅನುಷಾಳ ಒಂದು ಕಿವಿ ಸಹ ಕಟ್ ಆಗಿದೆ. ಇದ್ರಿಂದ ಕೊಲೆಯ ಅನುಮಾನ ಬಲವಾಗಿದೆ.ಅಳಿಯ ಅಭಿಲಾಷ್ ಕಲ್ಲು ಕ್ವಾರಿಯೊಂದರಲ್ಲಿ ರೈಟರ್ ಆಗಿ ಕೆಲಸ ಮಾಡುತ್ತಿದ್ದು, ಲಾರಿ ತೆಗೆದುಕೊಳ್ಳುವುದಕ್ಕೆ 2 ಲಕ್ಷ ಹಣ ನೀಡುವಂತೆ ಕೇಳಿದ್ದು, ಇದೇ ವಿಚಾರವಾಗಿ ಗಂಡ, ಹೆಂಡತಿ ಮಧ್ಯೆ ಜಗಳ ಆಗಿ ಅಭಿಲಾಷ್ ತಮ್ಮ ಮಗಳನ್ನು ಕೊಲೆ ಮಾಡಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ. ಆದರೆ ಇತ್ತ ಅಭಿಲಾಷ್ ಅನುಷಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಾನು ಕೊಲೆ ಮಾಡಿಲ್ಲ .ಮನೆಯಲ್ಲಿ ನಾಯಿ ಸಾಕಿದ್ದು ನಾಯಿ ತನ್ನ ಪತ್ನಿಯ ಕಿವಿ ತಿಂದಿದೆ ಅಂತ ಹೇಳಿದ್ದಾನೆ.

ಸದ್ಯ ಅಭಿಲಾಷ್ ನನ್ನ ವಶಕ್ಕೆ ಪಡೆದಿರುವ ಚಿಕ್ಕಬಳ್ಳಾಪುರ ನಗರ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES