Monday, December 23, 2024

ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ಮಾಡಿದ ಎಂ.ಲಕ್ಷ್ಮಣ್

ಮೈಸೂರು: ಸಂಸದ ಪ್ರತಾಪ್ ಸಿಂಹ ಆಕ್ಸ್‌ಫರ್ಡ್ ವಿವಿಯಲ್ಲಿ ಎಕನಾಮಿಕ್ಸ್ ಮಾಡಿರೋ ರೀತಿ ಮಾತನಾಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಸುದ್ದಿಗೋಷ್ಟಿ ಹೇಳಿದ್ದಾರೆ.

ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ 14 ಜನಪ್ರಿಯ ಬಜೆಟ್ ಮಂಡನೆ ಮಾಡಿರೋದು ಎಲ್ಲರಿಗೂ ಗೊತ್ತಿದೆ‌. ಸಿದ್ದರಾಮಯ್ಯ ಬಿಎಸ್ಸಿ ಎಲ್ ಎಲ್ ಬಿ ಮಾಡಿದ್ದಾರೆ. ತಾಲೂಕು ಕೋರ್ಟ್ ನಲ್ಲಿ ಪ್ರಾಕ್ಟಿಸ್ ಮಾಡ್ತಾ ಇದ್ರು ಅವ್ರಿಗೆ ಎಕಾನಮಿ ಎನ್ ಗೊತ್ತು ಅಂದಿದ್ದಾರೆ. ತಾಲೂಕು ಕೇಂದ್ರದಲ್ಲಿ ಪ್ರಾಕ್ಟಿಸ್ ಮಾಡಿರೋರು ಲಾಯರ್ಸ್ ಅಲ್ವ ತಾಲೂಕು ಕೇಂದ್ರದಲ್ಲಿ ಜಡ್ಜ್ ಆಗಿರೋರೊ ಜಡ್ಜ್ ಅಲ್ವ ಪ್ರತಾಪ್ ಸಿಂಹ ವಕೀಲರಿಗೆ ಅವಮಾನ ಮಾಡಿದ್ದಾರೆ. ವಕೀಲರ ಸಂಘಕ್ಕೆ ಈ ಬಗ್ಗೆ ಮನವಿ ಮಾಡುತ್ತೇನೆ ಎಂದರು.

ಅದಲ್ಲದೇ, ಯಡಿಯೂರಪ್ಪ 6 ಬಜೆಟ್ ಮಂಡಿಸಿದ್ದಾರೆ. ಯಡಿಯೂರಪ್ಪ ಕ್ವಾಲಿಫಿಕೇಷನ್ ಏನು.? ಬೊಮ್ಮಾಯಿ ಕ್ವಾಲಿಫಿಕೇಷನ್ ಏನು. ಆರ್ ಎಸ್ ಎಸ್ ನಲ್ಲಿ ಪ್ರತಾಪ್ ಸಿಂಹ ಗುರುತಿಸಿಕೊಳ್ಳಲು ಈ ರೀತಿ ಮಾತನಾಡುತ್ತಿದ್ದಾರೆ. ಪ್ರತಾಪ್ ಸಿಂಹ ತಮ್ಮ ಅಸ್ಥಿತ್ವ ಉಳಿಸಿಕೊಳ್ಳಲು ಸಿದ್ದರಾಮಯ್ಯ ಬಗ್ಗೆ ಮಾತನಾಡುತ್ತಾರೆ. ಮುಂದಿನ ಚುನಾವಣೆಯಲ್ಲಿ ಪ್ರತಾಪ್ ಸಿಂಹ ಅವ್ರಿಗೆ ಟಿಕೇಟ್ ಇಲ್ಲ ಅಂತಾ ಗೊತ್ತಿದೆ. ಹೀಗಾಗಿಯೇ ಆರ್ ಎಸ್ ಎಸ್ ಒಲೈಕೆಗೆ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಸುದ್ದಿಗೋಷ್ಟಿಯಲ್ಲಿ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES