Wednesday, January 22, 2025

ಮದುವೆಯಾಗಿ ಮಗು ಕೊಟ್ಟು ಯುವಕ ಪರಾರಿ

ರಾಯಚೂರು: ಆ ನಯವಂಚಕ ನೀನೆ ಚಿನ್ನ. ನೀನೇ ರನ್ನ ಅಂತ ಪುಸಲಾಯಿಸಿ ಬುಟ್ಟಿಗೆ ಬೀಳಿಸಿಕೊಂಡಿದ್ದ. ಆದ್ರೆ, ಈ ನಾಟಕದ ಜಾಲಕ್ಕೆ ಬಿದ್ದು ಆ ಹೆಣ್ಣು ಮಗಳು ಈಗ ಒದ್ದಾಡುತ್ತಿದ್ದಾಳೆ.. ಅಂದಹಾಗೆ ಈಕೆ ಹೆಸ್ರು ಮಾನಸ..ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಗ್ರಾಮದವಳು.

ಈಕೆ ತಾಯಿ ಜೊತೆ ಬೆಂಗಳೂರಿನ ಪ್ರತಿಷ್ಠಿತ ಮಾಲ್‌ವೊಂದರಲ್ಲಿ ಕೆಲಸ ಮಾಡ್ತಿದ್ಲು. ಅಲ್ಲಿ ಈಕೆಗೆ ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ನಿಡಿಗೋಳ ಗ್ರಾಮದ ವೆಂಕನಗೌಡ@ವೆಂಕಿ ಎಂಬ ವ್ಯಕ್ತಿಯ ಪರಿಚಯವಾಗಿತ್ತು. ಈತನೂ ಅದೇ ಮಾಲ್‌ನಲ್ಲಿ ಕೆಲಸ ಮಾಡ್ತಿದ್ದ. ಇಬ್ಬರು ಪರಸ್ಪರ ಪ್ರೀತಿಸೋಕೆ‌ ಶುರು ಮಾಡಿದ್ದರು. ನಂತರ 2020ರ ಜನವರಿಯಲ್ಲಿ ಆತನ ಬರ್ತಡೇ ಪಾರ್ಟಿಗೆಂದು ಕರೆದೊಯ್ದು, ಆಕೆಯ ಮೇಲೆ ಅತ್ಯಾಚಾರವೆಸಗಿದ್ನಂತೆ. ನಂತರ ಆ ಕೃತ್ಯದ ವಿಡಿಯೋ ಮಾಡಿ,ಬ್ಲಾಕ್ ಮೇಲ್ ಕೂಡ ಮಾಡಿ, ನಿರಂತರ ಅತ್ಯಾಚಾರವೆಸಗಿದ್ದಾನೆಂಬ ಆರೋಪ ಮಾಡಲಾಗ್ತಿದೆ.

2020 ರ ಫೆಬ್ರವರಿ 14ರ ವ್ಯಾಲಂಟೈನ್ಸ್ ಡೇ ದಿನ ಆಕೆ ಜೊತೆ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದ. ನಂತರ ಕೆಲವು ತಿಂಗಳು ಸಂಸಾರ ನಡೆಸಿದ್ದ. ಇದ್ರ ಪ್ರತಿಫಲವಾಗಿ ಒಂದು ಮಗು ಕೂಡ ಹುಟ್ಟಿದೆ. ಆ ಮಗು ಹುಟ್ಟುತ್ತಲೇ ತಂದೆಗೆ ಅನಾರೋಗ್ಯ, ಹಾರ್ಟ್ ಅಟ್ಯಾಕ್ ಆಗಿದೆ ಅಂತ ಹೇಳಿ ಆಕೆಗೆ ಕೈಕೊಟ್ಟು ಬೆಂಗಳೂರಿನಿಂದ ಕಾಲ್ಕಿತ್ತಿವ ಹಿಂದಿರುಗಲೇ ಇಲ್ಲ.

ಹೀಗೆ ಕಂಕಳಲ್ಲಿ‌ ಒಂದೂವರೆ ವರ್ಷದ ಮಗು ಎತ್ಕೊಂಡು ಆಕೆ ಸುತ್ತದ ಊರಿಲ್ಲ, ಭೇಟಿಯಾಗದ ಜನರಿಲ್ಲ. ಬೆಂಗಳೂರಿನಿಂದ ಸೀದಾ ಆತನ ಊರಿಗೆ ಹೋಗಿದ್ದಾಳೆ.ಅಲ್ಲಿ ಪತಿ ವೆಂಕಿ ಸಿಕ್ಕಿದ್ದಾನೆ. ಪ್ರೀತಿಸಿ ಮದುವೆಯಾಗಿ ಹೀಗೆ ಕೈಕೊಟ್ರೆ ಹೇಗೆ ಅಂತ ಪ್ರಶ್ನಿಸಿದ್ದಾಳೆ. ಆಗ ವೆಂಕಿ ಹಾಗೂ ಕುಟುಂಬಸ್ಥರು ಸೇರಿ ಮಾನಸಳ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿ 2 ಎಕರೆ ಜಮೀನು, ಒಂದು ಸೈಟ್, 5 ತೊಲೆ ಬಂಗಾರ, 5 ಲಕ್ಷ ಹಣ ತೆಗೆದುಕೊಂಡು ಬಾ ಅಂತ ಒತ್ತಾಯಿಸಿದ್ದಾರಂತೆ. ಈ ವಿಷಯ ತಿಳಿದು ಸಂಘಟನೆಯೊಂದು ಸಂತ್ರಸ್ತೆ ನೆರವಿಗೆ ಧಾವಿಸಿದೆ. ನಂತರ ಸಂತ್ರಸ್ತೆ ತನಗಾಗಿರೋ ಅನ್ಯಾಯದ ಬಗ್ಗೆ ದೂರು ನೀಡಿದ್ದಾಳೆ.

ಸದ್ಯ ಸಂತ್ರಸ್ತೆ ಮಾನಸ ನೀಡಿರೋ ದೂರಿನನ್ವಯ ತುರ್ವಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..ಮಗು ಜೊತೆ ಸಂತ್ರಸ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರೆ, ದೂರು ದಾಖಲಾಗ್ತಿದ್ದಂತೆಯೇ ಆ ಪುಣ್ಯಾತ್ಮ ಎಸ್ಕೇಪ್ ಆಗಿದ್ದಾನೆ.

RELATED ARTICLES

Related Articles

TRENDING ARTICLES