Wednesday, January 22, 2025

ಕಾಲಕ್ಕೆ ತಕ್ಕಂತೆ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದ ಉದಾಹರಣೆಗಳು ಇವೆ : ಕೋಟಾ ಶ್ರೀನಿವಾಸ ಪೂಜಾರಿ

ಬಾಗಲಕೋಟೆ : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ಬಂದಾಗ ಒಂದು ನಿರ್ಧಾರ ತೆಗೆದುಕೊಳ್ಳುತ್ತೆ ಎಂದು ಬಾಗಲಕೋಟೆಯಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ಬಂದಾಗ ಒಂದು ನಿರ್ಧಾರ ತೆಗೆದುಕೊಳ್ಳುತ್ತೆ. ಕಾಲಕಾಲಕ್ಕೆ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದ ಉದಾಹರಣೆಗಳು ಇವೆ. ಈಗ ನಮ್ಮ ಸರ್ಕಾರ ಬಂದಿದೆ. ನಾವು ಮಾಡಿದ್ದೇವೆ. ಅನೇಕರು ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ. ಪಠ್ಯಪುಸ್ತಕ ವಿರೋಧಿಸುವ ಭರದಲ್ಲಿ ಬಿಜೆಪಿ ಸರ್ಕಾರವನ್ಮ ವಿರೋಧಿಸಲಿಕ್ಕೆ. ಪರಿವಾರದ ವಿಚಾರ ಉಲ್ಲೇಖ ಮಾಡಲು ಹಾಗೂ ಬೊಮ್ಮಾಯಿ ಸರ್ಕಾರದ ಮೇಲೆ ದಾಳಿ ಮಾಡಲು ಕಾಂಗ್ರೆಸ್ ಒಂದು ವೇದಿಕೆ ಬಳಸಿಕೊಂಡಿರಬಹುದು ಎಂದರು.

ಅದಲ್ಲದೇ, ಬಿಜೆಪಿ ಬಂದಾಗ ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಸೂತ್ರ ಹಿಡಿದಾಗ.ಕೆಲವರು ಅಸಹಿಷ್ಣುತೆ ಎಂದು ಪ್ರಶಸ್ತಿ ವಾಪಸ್ಸು ಕೊಡ್ತೇವೆ ಅಂದ್ರು. ಯಾರೂ ಪ್ರಶಸ್ತಿ ವಾಪಸ್ಸು ಕೊಡಲಿಲ್ಲ. ಬರೀ ಝರಾಕ್ಸ್ ಪ್ರತಿ ಮಾತ್ರ ಕೊಟ್ಟಿದ್ರು. ಪ್ರಶಸ್ತಿ, ಪದಕ, ಹಣ ತಾರೂ ವಾಪಸ್ಸು ಕೊಡದೇ ಝರಾಕ್ಸ್ ಮಾತ್ರ ಕೊಟ್ಟಿದ್ರು. ಅಸಹಿಷ್ಣುತೆ ಹೆಸರಿನಲ್ಲಿ ವೈಭವಿಕರಿಸಯವುದು ನಡೆದಿತ್ತು. ಈಗಲೂ ಸಹ ಅದನ್ನೆ ಮಾಡ್ತಿದ್ದಾರೆ. ಯಾರಿಗೂ ಸಹ ಪಠ್ಯಪುಸ್ತಕದಲ್ಲಿ ಏನಿದೆ ಅಂತ ಓದುವ ಅವಶ್ಯಕತೆ ಇದ್ದಂತಿಲ್ಲ. ಏನಾದರೂ ಮಾಡಿ ಸರ್ಕಾರದ ಮೇಲೆ ಆಪಾದನೆ ಮಾಡುವ ಪ್ರಯತ್ನ ಮಾಡ್ತಿದ್ದಾರೆ ಎಂದು ಹೇಳಿದರು.

ಇನ್ನು, ಹೆಡಗೆವಾರ್ ವಿಚಾರದಲ್ಲಿ ಪುಸ್ತಕದಲ್ಲಿ ಇರುವುದನ್ನು ಯಾವುದನ್ನೂ ತೆಗೆಯುವುದಿಲ್ಲ. ನಮ್ಮ ರಾಷ್ಟ್ರದ ಗೌರವದ ಸಂಕೇತ ಅಂತ ನಮ್ಮ ಸಿಎಂ ಹೇಳಿದ್ದಾರೆ. ಮುಖ್ಯಮಂತ್ರಿಗಳ ವಿಚಾರಕ್ಕೆ ಬಂಧಿಸಿದಂತೆ ಇಡೀ ಸಂಘಟನೆ ಹಾಗೂ ಇಡೀ ಪಾರ್ಟಿ ಒಟ್ಟಾಗಿ ನಿಂತಿದೆ. ಮುಖ್ಯಮಂತ್ರಿಗಳ ಅಂತಿಮ ತೀರ್ಮಾನವೇ ನಮ್ಮ ಸರ್ಕಾರದ ತೀರ್ಮಾನ ಎಂದರು.

RELATED ARTICLES

Related Articles

TRENDING ARTICLES