Thursday, January 23, 2025

ಹೊಂಡಾ ಕಂಪೆನಿಯ ಕಾರ್ಮಿಕರ ಪ್ರತಿಭಟನೆ

ಕೋಲಾರ : ಹೊಂಡಾ ಕಂಪೆನಿಯ ಕಾರ್ಮಿಕರು ಸಂಬಳ ಹೆಚ್ಚಳಕ್ಕಾಗಿ ಹೋರಾಟಕ್ಕೆ ಇಳಿದಿದ್ದಾರೆ. ಹತ್ತು ವರ್ಷಗಳಿಂದ ಸಂಬಳ ಹೆಚ್ಚಳವಾಗಿಲ್ಲ. ಕಂಪೆನಿಗೆ ಕಾರ್ಮಿಕರನ್ನ ಒದಗಿಸಿರೋ ಏಜೆನ್ಸಿಗಳ ದೌರ್ಜನ್ಯ ಮೀತಿ ಮೀರಿದೆ. ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ನಮಗೆ ಸಂಬಳ ಹೆಚ್ಚಳ ಮಾಡಿಸಲಿ, ಇಲ್ಲವೇ ದಯಾಮರಣ ಕೊಡಿ. ಇಲ್ವಾ ನಾವೇ ಸೂಸೈಡ್ ಮಾಡಿಕೊಂಡು ಸಾಯ್ತೀವಿ ಅಂತಾ ನೌಕರರು ಎಚ್ಚರಿಸಿದ್ದಾರೆ.

ಹೊಂಡಾ ಕಂಪೆನಿಯ ಗುತ್ತಿಗೆ ಕಾರ್ಮಿಕರು ಸಂಬಳ ಹೆಚ್ಚಳಕ್ಕಾಗಿ ಜನಪ್ರತಿನಿಧಿಗಳು ಸೇರಿದಂತೆ ಹಲವರ ಬಳಿ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ. ಹತ್ತು-ಹದಿನೈದು ದಿನಗಳ ಹಿಂದೆ ಕಂಪೆನಿಯ ಒಳಗಡೆಯ ಕೆಲಸವನ್ನ ಸ್ಥಗಿತಗೊಳಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ.

ಅದಲ್ಲದೇ, ಈ ವೇಳೆ ಆಡಳಿತ ಮಂಡಳಿ ಹಾಗೂ ಗುತ್ತಿಗೆ ಏಜೆನ್ಸಿಯವ್ರನ್ನ ಸಭೆ ನಡೆಸಿ ಸಂಬಳ ಹೆಚ್ಚಳದ ಸಮಸ್ಯೆಯನ್ನ ಮೂರ್ನಾಲ್ಕು ದಿನಗಳಲ್ಲಿ ಬಗೆ ಹರಿಸುವ ಭರವಸೆ ನೀಡಿತ್ತು. ಆದ್ರೆ, ಕಂಪೆನಿಯವ್ರು ಕೊಟ್ಟ ಭರವಸೆ ಈಡೇರದ ಹಿನ್ನಲೆಯಲ್ಲಿ ಇಂದು 1800ಕ್ಕೂ ಹೆಚ್ಚು ಕಾರ್ಮಿಕರು ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಲು ಮುಂದಾದ್ರೂ. ಆದ್ರೆ, ಜಿಲ್ಲಾಡಳಿತ ಅನುಮತಿ ನಿರಾಕರಿಸಿದ ಹಿನ್ನಲೆಯಲ್ಲಿ ಮನವಿ ಕೊಟ್ಟು ವಾಪಸ್ಸು ಹೋದರು.

RELATED ARTICLES

Related Articles

TRENDING ARTICLES