Thursday, December 26, 2024

ಗಾಳಿ ಸಹಿತ‌ ಮಳೆಗೆ ಹಸುಗೂಸು ಸಾವು

ಬೆಂಗಳೂರು ಗ್ರಾಮಾಂತರ : ಸುತ್ತ-ಮುತ್ತ ಬಿರುಗಾಳಿ ಸಹಿತ ಮಳೆಗೆ ಹಸುಗೂಸು ಸಾವನಪ್ಪಿರುವ ದೇವನಹಳ್ಳಿ ಪಟ್ಟಣದ ನೀರುಗುಂಟೆಪಾಳ್ಯದಲ್ಲಿ ಘಟನೆ ನಡೆದಿದೆ.

ಗಾಳಿ‌‌ ಮಳೆಯ ಅಬ್ಬರಕ್ಕೆ ಮನೆಯ ಮೇಲ್ಚಾವಣಿ ಶೀಟ್ ಮುರಿದು ಬಿದ್ದು 9 ತಿಂಗಳ ಮುದ್ದು ಕಂದಮ್ಮ ದುರ್ಮರಣ ಹೊಂದಿದೆ. ಶ್ವೇತ ಮತ್ತು ಜರ್ನಾಧನ್ ದಂಪತಿಯ ಮಗುವಾಗಿದೆ.

ಅಕಾಲಿಕ ಮಳೆಯಿಂದಾಗಿ ರಾಜ್ಯದಲ್ಲಿ ಬಿರುಗಾಳಿ ಸಹಿತ ಮಳೆ ಆರಂಭವಾಗಿದೆ. ಈ ವೇಳೆ ಮಗುವಿನ ತಲೆ ಮೇಲೆ ಮನೆಯ ಮೇಲ್ಛಾವಣಿಯ ಶೀಟ್ ಮಲಗಿದ್ದ ಮಗುವಿನ ತಲೆಗೆ ಬಿದ್ದು ತೀವ್ರ ರಕ್ತಸಾವ್ರಗೊಂಡಿದೆ.

ಮಗುವಿನ ತಲೆಯಲ್ಲಿ ರಕ್ತಸಾವ್ರ ಹೆಚ್ಚಾದ ಹಿನ್ನೆಲೆ ಅಸ್ವತ್ರೆಗೆ‌ ಸಾಗಿಸುವ ಮಾರ್ಗಮಧ್ಯೆಯೇ ಮೃತಪಟ್ಟಿದೆ.

ಈ ಘಟನೆಯು ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

RELATED ARTICLES

Related Articles

TRENDING ARTICLES