Sunday, November 24, 2024

“ಸ್ವಚ್ಛ ಭಾರತ ಅಭಿಯಾನದ” ಕನಸಿನ ಕೂಸು ಮೂಗನೂರು ಗ್ರಾಮದಲ್ಲಿ ಸಕಾರಗೊಂಡಿದಿಯೇ..!?

ಕುಷ್ಟಗಿ: ತಾಲೂಕಿನ ಹಿರೆಗೊಣ್ಣಾಗರ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಗನೂರ ಗ್ರಾಮ ಈ ಗ್ರಾಮ ಜಿಲ್ಲೆಯ ಗಡಿರೇಖೆಯ ಕೊನೆಯ ಅಂಚಿಗೆ ಹೊಂದಿಕೊಂಡಿದೆ. ಈ ಗ್ರಾಮದಲ್ಲಿ ಗ್ರಾಮ ಪಂಚಾಯತಿಯ ನೇತೃತ್ವದಲ್ಲಿ ಗ್ರಾಮಗಳಿಗೆ ಒದಗಿಸಬೇಕಾದ ಮೂಲತಃ ಸೌಕರ್ಯಗಳನ್ನು ಒದಗಿಸಿರುವುದಿಲ್ಲ ಸ್ವಚ್ಛ ಭಾರತ ಹಾಗೂ ಗ್ರಾಮದ ನೈರ್ಮಲ್ಯ ಅವ್ಯವಸ್ಥೆ ಸರಿಪಡಿಸಲು ಲಕ್ಷ ಲಕ್ಷ ರೂಪಾಯಿ ವೆಚ್ಚ ಬರಿಸಿ ಗ್ರಾಮದ ನೈರ್ಮಲ್ಯಕ್ಕೆ ಒತ್ತು ನೀಡಲಾಗಿದೆ ಎಂದು ಲೆಕ್ಕ ಪತ್ರಗಳಲ್ಲಿ ನೋಡಬಹುದೆ ವಿನಹ , ವಾಸ್ತವವಾಗಿ ಇದಾವುದು ಹಿರೇಗೊಣ್ಣಾಗರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ನೋಡಲು ಅಸಾಧ್ಯ.

ಮೂಗನೂರು ಗ್ರಾಮದಲ್ಲಿ ಇಲ್ಲಿರುವ ಪೋಟೋ ದಲ್ಲಿ ಕಾಣಸಿಗುವ ಸ್ಥಳದಲ್ಲಿ ಮೂರು ವರ್ಷಗಳ ಹಿಂದೆ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿತ್ತು. ಅದು ಹೆಸರಿಗೆ ಮಾತ್ರ ಎಂಬುದು ಎಲ್ಲಿರಿಗೂ ಗೊತ್ತಿರುವ ವಿಷಯ ಇದರ ಫಲಶೃತಿಯೇ ಗ್ರಾಮದ ಹೃದಯ ಭಾಗದಲ್ಲಿ ನೀರು ತುಂಬಿ – ವಿಷಯುಕ್ತ ಜಂತುಗಳು , ಗ್ರಾಮದ ಸಾರ್ವಜನಿಕರಿಗೆ ಸಂಚರಿಸಲು ಸಮಸ್ಯೆಗಳನ್ನು ಸೃಷ್ಟಿಸಿದೆ.

ಇದನ್ನು ಬಗೆಹರಿಸಲು ಗ್ರಾಮದ ಹಿರಿಯರು- ಯುವಕರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿಸರು ಏನು ಉಪಯೋಗ ಆಗಲಿಲ್ಲ.

ಇಂದು ಗ್ರಾಮದ ಬಸ್ ಸ್ಟಾಪ್ ಹತ್ತರ ಗ್ರಾಮದ ಹೃದಯ ಭಾಗದ ರಸ್ತೆಯಲ್ಲಿ ಗುಂಡಿಯಲ್ಲಿ ನಿಂತ ಕೊಳಕು ನೀರಿನಲ್ಲಿದ್ದ ಹಾವು ಸಾರ್ವಜನಿಕ ನೀರಿನ ಟ್ಯಾಂಕ್ ಗೆ ನೀರು ತರಲು ತೆರಳಿದ್ದ ಒಬ್ಬ ಬಾಲಕನಿಗೆ ಹಾವು ಕಚ್ಚಿದೆ , ಆ ರಸ್ತೆಗೆ ಹೊಂದಿಕೊಂಡಂತೆ ಕುಡಿಯುವ ನೀರಿನ ಟ್ಯಾಂಕ್ ಇದ್ದು ನೀರಿನ ಕೊಡಗಳನ್ನು(ಬಿಂದಿಗೆ) ಗಲಿಜು ಮೇಲೆ ಇಟ್ಟು ನೀರು ತರಬೇಕು ಕುಡಿಯುವ ನೀರಿನಲ್ಲಿ ಸಾಕಷ್ಟು ಕ್ರಿಮಿ ಕೀಟಗಳು ಇದ್ದು ಊರಿನ ಜನರ ಆರೋಗ್ಯದ ಮೇಲೆ ಬಹಳ ದುಷ್ಪರಿಣಾಮ ಬೀರುತ್ತಿದೆ. ಗ್ರಾಮ ಪಂಚಾಯತಿಗೆ ಆಯ್ಕೆಯಾದ ಜನಪ್ರತಿನಿಧಿಗಳು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ.

ಚುನಾವಣೆ ಬಂದಾಗ ಮಾತ್ರ ಜನಪ್ರತಿನಿಧಿಗಳಿಗೆ ಗ್ರಾಮದ ಜನತೆ ,ಗ್ರಾಮ ನೆನಪಾಗೊದು ಈ ಗ್ರಾಮಕ್ಕೆ ಸರಿಯಾದ ಸಾರಿಗೆ ಸಂಪರ್ಕ ಇಲ್ಲ , ಗ್ರಾಮದ ಆಯ್ದ ಭಾಗಗಳಲ್ಲಿ ಅವ್ಯವಸ್ಥೆಯಿಂದ ಗಲಿಜುಗಳಿಂದ ಆವರಿಸಿದೆ.

RELATED ARTICLES

Related Articles

TRENDING ARTICLES