Monday, December 23, 2024

ಅತ್ತೆಯನ್ನೇ ಕೊಂದ ಪಾಪಿ ಅಳಿಯ

ಯಾದಗಿರಿ : ನಗರದ ಚಟಾನ್ ಏರಿಯಾದ ನಿವಾಸಿಯಾಗಿರುವ ಈ ರಶೀದಾ ಬೇಗಂ ಇಂದು ಬೆಳಗ್ಗೆ ಹೆಣವಾಗಿ ಬಿದ್ದಿದ್ದಾಳೆ. ಕೊಂದಿದ್ದು ಬೇರೇ ಯಾರು ಅಲ್ಲ ಅಳಿಯ. ಅಳಿಯ ರಫೀಕ್ ಇಂದು ಬೆಳಗ್ಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಇನ್ನು ಘಟನೆ ನಡೆದ ಕೂಡ್ಲೆ ಸ್ಥಳದಲ್ಲೇ ಇದ್ದ ಸ್ಥಳೀಯರು ಇನ್ನು ಉಸಿರಾಡುತ್ತಿದ್ದ ರಶೀದಾಳನ್ನ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಆದ್ರೆ ಆಸ್ಪತ್ರೆಗೆ ದಾಖಲಿಸುವ ಮುನ್ನವೇ ರಶೀದಾ ಮಾರ್ಗ ಮಧ್ಯದಲ್ಲೇ ಉಸಿರು ನಿಲ್ಲಿಸಿದ್ದಾಳೆ ಮಹಾರಾಷ್ಟ್ರದ ಮುಂಬೈ ಮೂಲದ ರಫೀಕ್ ಕಳೆದ 8 ವರ್ಷದ ಹಿಂದೆ ಕೊಲೆಯಾದ ರಶೀದಾ ಮಗಳನ್ನು ಮದುವೆಯಾಗಿದ್ದ. ಇಂದು ಬೆಳಗ್ಗೆ ಮುಂಬೈನಿಂದ ಬಂದಿದ್ದೇ ತಡ,ಅತ್ತೆಯೊಂದಿಗೆ ಜಗಳಕ್ಕೆ ನಿಂತಿದ್ದಾನೆ.ಈ ಜಗಳ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯವಾಗಿದೆ.

ಮುಂಬೈಯಲ್ಲಿ ಏನೂ ಕೆಲಸ ಮಾಡದ ಈತ ತನ್ನ ತವರು ಮನೆಯಿಂದ ಹಣ ತೆಗೆದು ಕೊಂಡು ಬಾ ಎಂದು ಹೆಂಡತಿಯನ್ನು ಪೀಡಿಸುತ್ತಿದ್ದ, ಈತನ ಕಾಟ ತಾಳಲಾರದೇ ಆಕೆ 20 ದಿನಗಳ ಹಿಂದಷ್ಟೇ ತನ್ನ ತಾಯಿ ಮನೆಗೆ ಬಂದಿದ್ದಾಳೆ. ಇಂದು ಬಂದ ಆರೋಪಿ ರಫೀಕ್ ಹೆಂಡತಿ ಸಮ್ರೀನಾಳನ್ನು ನನ್ನ ಜತೆ ಕಳುಹಿಸಿ, ಹಾಗೆ ಹಣ ನೀಡಬೇಕೆಂದು ಒತ್ತಾಯಿಸಿದ್ದಾನೆ. ಇದಕ್ಕೆ ಒಪ್ಪದ ಹಿನ್ನಲೆಯಲ್ಲಿ ರಶೀದಾಳನ್ನು ಕೊಲೆ ಮಾಡಿದ್ದಾನೆ.

ಅಷ್ಟಕ್ಕೂ ಆರಂಭದಲ್ಲಿ ರಶೀದಾ ಮಗಳು ಮತ್ತು ಅಳಿಯನ ಸಂಸಾರ ಚನ್ನಾಗಿಯೇ ನಡೆಯುತ್ತಿತ್ತು. ಇಬ್ಬರು ದಂಪತಿಗಳಿಗೆ ಇಬ್ಬರು ಮುದ್ದಾದ ಮಕ್ಕಳು ಕೂಡ ಇದ್ದಾರೆ. ಆದ್ರೆ ಮದುವೆಯಾಗಿ ಆರು ವರ್ಷಗಳ ಬಳಿಕ ರಶೀದಾ ಮಗಳು ಹಾಗೂ ಅಳಿಯ ಮದ್ಯೆ ಕಲಹ ಆರಂಭವಾಗಿದೆ. ಮೊದ್ಲೆ ರಫೀಕ್ ದುಡಿದು ತಂದು ಹಾಕುವವನಲ್ಲ. ಕೆಲಸ‌ ಮಾಡದೆ ಹೆಂಡ್ತಿ ಮಕ್ಕಳನ್ನ ಸಾಕದೆ ಕಂಡ ಕಂಡವರ ಬಳಿ ಸಾಲ‌ ಮಾಡಿ ಕುಡಿಯೋದು ಗಾಂಜಾ ಹೊಡೆಯುವ ಕೆಲಸ ಮಾಡ್ತಾಯಿದ್ದ. ಇದೆ ಇದೆ ಕಾರಣಕ್ಕೆ ರಫೀಕ್ ಮತ್ತು ಪತ್ನಿ ಸಮ್ರೀನ್ ಮಧ್ಯೆ ಜಗಳ ಆಗ್ತಾಯಿತ್ತು. ಇನ್ನು ರಫೀಕ್ ಗೆ ಸಾಲ ಕೊಟ್ಟವರ ಕಾಟ ಕೊಡಲು ಆರಂಭಸಿದ್ರು. ಸಾಲಗಾರರ ಕಾಟ‌ ಹೆಚ್ಚಾಗುತ್ತಿದಂತೆ ರಫೀಕ್ ತನ್ ಪತ್ನಿಯನ್ನ ಸಾಲಗಾರರ ಜೊತೆ ಮಲಗುವಂತೆ ಒತ್ತಾಯ ಮಾಡುತ್ತಿದ್ನಂತೆ

ಒಟ್ನಲ್ಲಿ ಮದುವೆ ಆಗಿ ಎಲ್ಲರಂತೆ ಮೈ ಬಗ್ಸಿ ದುಡಿದು ಹೆಂಡತಿ ಮಕ್ಕಳನ್ನ ಸಾಕಿದ್ರೆ ಇವತ್ತು ಈ ಕೊಲೆನೇ ನಡೀತಿರ್ಲಿಲ್ಲ. ಸದ್ಯ ಯಾದಗಿರಿ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೊಲೆಗಾರ ರಫೀಕ್​ಗಾಗಿ ತಲಾಷ್ ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES