Monday, December 23, 2024

ಸಿದ್ದರಾಮಯ್ಯ ಸ್ವಾತಂತ್ರ್ಯ ಹೋರಾಟಗಾರರೇ? : ಸಚಿವ‌ ನಾರಾಯಣಸ್ವಾಮಿ

ಚಿತ್ರದುರ್ಗ : RSS ಮುಖ್ಯಸ್ಥ ಮೋಹನ್ ಭಾಗವತ್ ಅವರು, ಈ ದೇಶದ ಸ್ವಾಸ್ಥ್ಯ ಕೆಡಬಾರದು ಎಂದು ಈಶ್ವರ, ಶಿವನ ದೇಗುಲಗಳನ್ನು ಮಸೀದಿಗಳಲ್ಲಿ ಹುಡುಕುವುದು ಸಂಸ್ಕಾರ ಅಲ್ಲ ಎಂಬ ಉದ್ದೇಶದಿಂದ ಹೇಳಿದ್ದಾರೆ ಎಂದು ಕೇಂದ್ರ ಸಚಿವ‌ ಎ.ನಾರಾಯಣಸ್ವಾಮಿ ಅವರನ್ನ  ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದೆ. ಆರ್‌ಎಸ್ ಎಸ್ ಸಿದ್ಧಾಂತವನ್ನು ವಿರೋಧಿಸುತ್ತಿದೆ. ಆದರೆ, ಇವೆಲ್ಲವನ್ನೂ ಮೆಟ್ಟಿ ನಿಲ್ಲುವ ಶಕ್ತಿ ಬಿಜೆಪಿಗೆ ಇದೆ ಎಂದರು.

ಇನ್ನು ಹೆಡ್ಗೆವಾರ್ ಸ್ವತಂತ್ರ್ತ ಹೋರಾಟಗಾರರೇ ಎಂಬ ವಿಪಕ್ಷ ನಾಯಕರ ಪ್ರಶ್ನೆಗೆ ಉತ್ತರಿಸಿ, ಇವರೇನು ಸ್ವತಂತ್ರ್ಯ ಹೋರಾಟಗಾರರೇ?, ಗುಂಡಿಗೆ ಎದೆ ಕೊಟ್ಟಿದ್ದಾರೆಯೇ? ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷರಿಗೆ ಹೆಡಗೆವಾರ್ ಪಠ್ಯ ಬೇಕೆನಿಸಿದೆ, ಸೇರಿಸಿದ್ದಾರೆ. ಸಿಎಂ, ಶಿಕ್ಷಣ ಸಚಿವರು ಈ ವಿಷಯದಲ್ಲಿ ಸ್ಪಷ್ಟವಾದ ತೀರ್ಮಾನ ಕೈಗೊಳ್ಳುತ್ತಾರೆ. ಸಿದ್ಧರಾಮಯ್ಯ ಆಡಳಿತದಲ್ಲಿ ಟೂರಿಸಂ ನೆಪದಲ್ಲಿ ಮಕ್ಕಳ ಇಬ್ಬಾಗ.
ಆಗ ರಾಜ್ಯದಲ್ಲಿ ಅಶಾಂತಿ ಸೃಷ್ಠಿ ಎಂದು ಅನ್ನಿಸಿಲ್ಲವೇ? ಎಂದು ಸಿದ್ದರಾಮಯ್ಯ ಪ್ರಶ್ನೆಗೆ ತಿರುಗೇಟು ನೀಡಿದ್ದಾರೆ.

ಹಿಂದೂ ಸಂಘಟನೆಗಳಿಂದಲೇ ಮಸೀದಿಗಳಲ್ಲಿ ಮಂದಿರ ಹುಡುಕುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಮೂಲಕ ಇತಿಹಾಸ ಮೆಲುಕು ಹಾಕುತ್ತಿದ್ದಾರೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES