ಢಾಕಾ: ಬಾಂಗ್ಲಾದೇಶದ ಖಾಸಗಿ ಕಂಟೇನರ್ ಡಿಪೋ ಒಂದರಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು ಕನಿಷ್ಠ 37 ಮಂದಿ ಮೃತಪಟ್ಟು, 450ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ.
ಶನಿವಾರ ರಾತ್ರಿ 9ಕ್ಕೆ ಚಿತ್ತಗಾಂವ್‌ನ ಸೀತಾಕುಂದ ಉಪಾಜಿಲ ಆಡಳಿತ ವಿಭಾಗದ ಕದಮ್‌ರಸೂಲ್ ಪ್ರದೇಶದಲ್ಲಿರುವ ‘ಬಿಎಂ ಕಂಟೇನರ್ ಡಿಪೋ’ದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ರಾತ್ರಿ 11.45ರ ಸುಮಾರಿಗೆ ಭಾರಿ ಸ್ಫೋಟ ಸಂಭವಿಸಿದೆ. ಇನ್ನು ಅಗ್ನಿ ಅವಘಡದಲ್ಲಿ ಕನಿಷ್ಠ 35 ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಇನ್ನು ಕಂಟೇನರ್‌ನಲ್ಲಿ ಕೆಮಿಕಲ್ ಇದ್ದಿದ್ದರಿಂದ ಒಂದರಿಂದ ಮತ್ತೊಂದಕ್ಕೆ ಬೆಂಕಿ ಹೊತ್ತಿಕೊಂಡು, ಸುತ್ತಲೂ ಆವರಿಸಿದೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ನೂರಾರು ಮಂದಿ ಗಾಯಗೊಂಡಿದ್ದಾರೆ.
ಇನ್ನು ಗಾಯಗೊಂಡ ‘450ಕ್ಕೂ ಹೆಚ್ಚು ಜನರಲ್ಲಿ, ಕನಿಷ್ಠ 350 ಜನರನ್ನು ಚಿತ್ತಗಾಂವ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬೇರೆ ಆಸ್ಪತ್ರೆಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿರಬಹುದು’ ಎಂದು ಚಿತ್ತಗಾಂವ್‌ನ ‘ರೆಡ್ ಕ್ರೆಸೆಂಟ್ ಯೂತ್’ ಎನ್‌ಜಿಒದ ಆರೋಗ್ಯ ಮತ್ತು ಸೇವೆ ವಿಭಾಗದ ಮುಖ್ಯಸ್ಥ ಇಸ್ತಾಕುಲ್ ಇಸ್ಲಾಂ ಹೇಳಿದ್ದಾರೆ.
ಅಷ್ಟೆ ಅಲ್ಲದೇ ಅಗ್ನಿಶಾಮಕ ಮೂವರು ಸಿಬ್ಬಂದಿಯೂ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಸ್ಫೋಟವು ನೆರೆಹೊರೆಯವರನ್ನು ಬೆಚ್ಚಿಬೀಳಿಸಿದ್ದು, ಡಿಪೋ ಸಮೀಪದ ಮನೆಗಳಿಗೂ ಹಾನಿಯಾಗಿರುವುದಾಗಿ ವರದಿಗಳು ಪ್ರಕಟವಾಗಿವೆ.
At least 37 killed, over 450 injured in Bangladesh container depot fire
Read @ANI Story |https://t.co/ic1MPuGOlx#Bangladesh #Bangladeshfire pic.twitter.com/cofIiSy5g3
— ANI Digital (@ani_digital) June 5, 2022