Wednesday, January 22, 2025

ನಾಲ್ವಡಿ ಕೃಷ್ಣರಾಜ ಒಡೆಯರ್​​ರವರ 138ನೇ ಜನ್ಮೋತ್ಸವ

ಮೈಸೂರು: ಮೈಸೂರು ಸಂಸ್ಥಾನದ 11ನೇ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್​ರವರ 138ನೇ ಜನ್ಮೋತ್ಸವ. ಈ ಹಿನ್ನೆಲೆ ನಗರದ ಫ್ರೀಡಂಪಾರ್ಕ್ ಬಳಿಯಿರೋ ಕರ್ನಾಟಕ ಆರ್ಯವೈಶ್ಯ ಮಹಾಸಭಾ ಆವರಣದಲ್ಲಿ ಮಹಾರಾಜರ ಭಾವಚಿತ್ರವನ್ನು ಅನಾವರಣಗೊಳಿಸಲಾಯಿತು‌.

ವಿಧಾನಪರಿಷತ್‌ನ ಮಾಜಿ ಸಭಾಪತಿ ಡಿಎಚ್ ಶಂಕರಮೂರ್ತಿ ಹಾಗು ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಅಧ್ಯಕ್ಷ ಆರ್ ಪಿ ರವಿಶಂಕರ್ ಮಹಾರಾಜರ ಭಾವಚಿತ್ರವನ್ನು ಅನಾವರಣಗೊಳಿಸಿದರು. ರಾಜ್ಯದ‌ ಪ್ರತಿಯೊಂದು ಜಿಲ್ಲೆಯಿಂದಲೂ ಸಮುದಾಯದ‌ ಮುಖಂಡರು ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆರ್ಯವೈಶ್ಯ ಸಮುದಾಯದ ಅಭಿವೃದ್ದಿ ಹಾಗು ಏಳಿಗೆಗೆ 1922ರಲ್ಲೇ ಬರೊಬ್ಬರಿ 57000 ಚದರದಡಿ ಹಾಗು 10000/- ಸಹಾಯಧನವನ್ನು ಮಹಾರಾಜರು ನೀಡಿದ್ದರು.

ಮಹಾರಾಜರು ಕಾಣಿಕೆಯಾಗಿ ನೀಡಿದ್ದ ಸ್ಥಳದಲ್ಲೇ ಬೃಹತ್ ಹಾಸ್ಟೆಲ್ ತೆರೆಯಲಾಗಿದ್ದು, ನೂರಾರು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯುತ್ತಿದ್ದಾರೆ. ಇನ್ನು, ಮಹಾರಾಜರ ಕಾಣಿಕೆಯನ್ನು ನೂರಾರು ತಲೆಮಾರುಗಳು ಬಂದರೂ ಸ್ಮರಣೆ ಮುಂದುವರೆಯಬೇಕು‌ ಅನ್ನೋ ನಿಟ್ಟಿನಲ್ಲೇ ಭಾವಚಿತ್ರ ಅನಾವರಣಗೊಳಿಸಲಾಗಿದೆ ಎಂದು ಮಹಾಸಭಾದ ಅಧ್ಯಕ್ಷ ಆರ್ ಪು ರವಿಶಂಕರ್ ತಮ್ಮ ಅಭಿಪ್ರಾಯ ಹಂಚಿಕೊಂಡರು.

RELATED ARTICLES

Related Articles

TRENDING ARTICLES