Monday, December 23, 2024

ದಸರಾಗೆ ಕಾಂತಾರ ಜಬರ್ದಸ್ತ್ ಜಂಬೂ ಸವಾರಿ..!

ರಿಷಬ್​ ಸಿನಿಮಾಗಳಂದ್ರೆ ಮುಲಾಜಿಲ್ಲದೇ ಥಿಯೇಟರ್​ಗೆ ಹೋಗಬಹುದು. ಏನೋ ಫ್ರೆಶ್​​ನೆಸ್​​​, ಹೊಸ ಕಥೆ, ಹೊಸ ವಿಚಾರಗಳ ಕಲಸಿಟ್ಟ ಸಿಹಿ ಹೂರಣ. ಇನ್ನೂ, ಅವ್ರ ಕರಾವಳಿ ಕಥೆ ಕಾಂತಾರ ಚಿತ್ರ ಕೂಡ ಸದ್ಯದ್ರಲ್ಲೇ ತೆರೆಗೆ ಬರೋಕೆ ತುದಿಗಾಲಲ್ಲಿ ನಿಂತಿದೆ. ಕಂಬಳ ಪ್ರಿಯರಿಗೆ ಈ ಗುಡ್​ ನ್ಯೂಸ್​​ ಕೇಳಿ ಸಖತ್​ ಥ್ರಿಲ್ ಆಗಿದೆ.

  • ದಸರಾಗೆ ಸಿಲ್ವರ್​ ಸ್ಕ್ರೀನ್​ ಮೇಲೆ ‘ಕಾಂತಾರ’ ಕಮಿಂಗ್​​
  • ಕರಾವಳಿ ಗಂಡು ಕಲೆ ಕಂಬಳ ಸವಾರಿಗೆ ರಿಷಭ್​​ ರೆಡಿ..!
  • ಕಂಬಳ ಕಲಿತು ಕೋಣ ಓಡಿಸ್ತಾರೆ ರಿಷಭ್​ ಶೆಟ್ಟಿ..!
  • ದಸರಾ ಸಡಗರದ ಜೊತೆಗೆ ಕಂಬಳದ ಕಾಡ್ಗಿಚ್ಚು

ಶೆಟ್ರ ಗ್ಯಾಂಗ್​ ಬತ್ತಳಿಕೆಯಿಂದ ಒಂದೊಂದೇ ಸಿನಿಮಾಗಳು ತೆರೆಗೆ ಬರ್ತಾ ಇದೆ. ಅವ್ರ ಸಿನಿಮಾಗಳನ್ನು ಎಂಜಾಯ್​ ಮಾಡೋದೆ ಒಂದು ಆನಂದ. ರಿಷಭ್​​ ಶೆಟ್ಟಿ ಆ್ಯಕ್ಷನ್​ ಕಟ್​ ಹೇಳಿರೋ ಕಾಂತಾರ ಚಿತ್ರ, ದಿನಕಳೆದಂತೆ ಹೈಪ್​ ಕ್ರಿಯೇಟ್​ ಮಾಡ್ತಿದೆ. ಸಿಂಗಲ್​​ ಟೀಸರ್​, ಪೋಸ್ಟರ್​ ಮೂಲಕವೇ ಭೇಜಾನ್​ ಸೌಂಡ್ ಮಾಡ್ತಿರೋ ಕಾಂತಾರ ಹೊಸ ಅಪ್​ಡೇಟ್​ ಕೊಟ್ಟಿದೆ. ರಿಲೀಸ್​ ಡೇಟ್​ ಅನೌನ್ಸ್​ ಮಾಡಿ ಚಿತ್ರಪ್ರೇಮಿಗಳ ಎದೆಗೆ ಸೋನೆ ಮಳೆ ಸುರಿಸಿದೆ.

ಕರಾವಳಿಯ ಸಂಸ್ಕೃತಿ, ಕಲೆ, ಜೀವನ, ಉಡುಪು ಎಲ್ಲವೂ ಮಡಚಿಟ್ಟ ಭಾವಗಳ ಆಕಾಶ. ಮಗೆದಷ್ಟು ಕೂತೂಹಲ. ಅಲ್ಲಿನ ಜನಜೀವನದಲ್ಲಿ ಬೆರೆತು ಹೋದ ಕಂಬಳ ಕುರಿತಾದ ಸಿನಿಮಾ ಕಾಂತಾರ. ಕಂಬಳ ಕ್ರೀಡೆಯನ್ನ ಉಸಿರಾಗಿಸಿಕೊಂಡಿರುವ ಮಂಗಳೂರಿನ ಚಿತ್ರಕಥೆಯನ್ನು ಈ ಸಿನಿಮಾದಲ್ಲಿ ಕಣ್ಣಿಗೆ ಕಟ್ಟಿದಂತೆ  ತೋರಿಸೋಕೆ ರಿಷಭ್​ ಹೊರಟಿದ್ದಾರೆ. ಸೆಪ್ಟೆಂಬರ್​ 30ಕ್ಕೆ ಕಾಂತಾರ ಚಿತ್ರ  ತೆರೆಗೆ ಬರೋದಾಗಿ ಅನೌನ್ಸ್ ಮಾಡಿದೆ.

ಭಾರತೀಯ ಚಿತ್ರರಂಗದಲ್ಲೇ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾಗಿ ಧೂಳೆಬ್ಬಿಸಿರೋ ಹೊಂಬಾಳೆ ಬ್ಯಾನರ್​ ಕಾಂತಾರ ಚಿತ್ರ ನಿರ್ಮಾಣ ಮಾಡ್ತಿದೆ. ಅದ್ಧೂರಿ ಸಿನಿಮಾಗಳನ್ನೇ ನೀಡಿರುವ ಹೊಂಬಾಳೆ ಟೀಂ ರಿಷಭ್​ ಶೆಟ್ಟಿಯ ಕೈಯಲ್ಲಿ ಈ ಸಿನಿಮಾ ನೀಡಿದೆ. ಭರವಸೆಯ ಕಿಚ್ಚು ಹಚ್ಚಿರೋ ಈ ಚಿತ್ರದ ಮೇಲೆ  ನಿರೀಕ್ಷೆ ಕೂಡ ದುಪ್ಪಟ್ಟಾಗಿದೆ. ಸಿಂಗಲ್​ ಟೀಸರ್​ ಅನ್ನ ಚಿತ್ರರಸಿಕರು ರಿಪೀಟ್​ ಮೋಡ್​ನಲ್ಲಿ ನೋಡಿರೋದೆ ಇದಕ್ಕೆ ಸಾಕ್ಷಿ.

ಚಿತ್ರಕ್ಕಾಗಿ ಸ್ವತಃ ಕಂಬಳ ಕಲಿತಿದ್ದಾರೆ ರಿಷಬ್​​. ಸಸ್ಪೆನ್ಸ್​ ಥ್ರಿಲ್ಲರ್​​ ಇರೋ ಹಳ್ಳಿಗಾಡಿನ ಕಥೆಯಿದು. ವರ್ಸಟೈಲ್​ ನಟ ಅಚ್ಯುತ್​​ ಕುಮಾರ್​​, ಪ್ರಮೋದ್ ಶೆಟ್ಟಿ, ಸಪ್ತಮಿ ಗೌಡ, ಕಿಶೋರ್​ ಸೇರಿದಂತೆ ಕಲಾವಿದರ ದಂಡೇ ಚಿತ್ರದಲ್ಲಿದೆ. ಬಿ.ಅಜನೀಶ್​ ಲೋಕನಾಥ್​ ಸಂಗೀತ ಆಲಾಪನೆ ಮೋಡಿ ಮಾಡಲಿದೆ. ಈ ಚಿತ್ರ ರಿಷಭ್​ ಸಿನಿಕರಿಯರ್​ನಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಠಿ ಮಾಡಲಿದೆ.

ಕರಾವಳಿಯ ಕ್ರೀಡೆಯನ್ನು ಪ್ರಪಂಚಕ್ಕೆ ತಿಳಿಸೋಕೆ ಹೊರಟಿರುವ ರಿಷಭ್​, ಮೊದಲ ಬಾರಿ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಚಿತ್ರದ ರಿಲೀಸ್ ಡೇಟ್​ ಅನೌನ್ಸ್ ಮಾಡಿರೋ ಚಿತ್ರತಂಡ ದಸರಾ ಉಡುಗೊರೆಯನ್ನು ಕೊಟ್ಟಿದೆ. ಹರಿಕಥೆ ಅಲ್ಲ ಗಿರಿಕಥೆ ಚಿತ್ರದ  ಬ್ಯುಸಿ ನಡುವೆ ಕಾಂತಾರ ಕಾತರ ಕೂಡ ಹೆಚ್ಚಾಗಿದೆ.ಅರವಿಂದ್​ ಎಸ್​ ಕಶ್ಯಪ್​  ಕ್ಯಾಮೆರಾ ಕಣ್ಣು ಚಿತ್ರಕ್ಕೆ ಪ್ಲಸ್​ ಆಗಲಿದೆ. ಅಜನೀಶ್​ ಲೋಕನಾಥ್​ ಸಂಗೀತ ಇಂಪಾಗಿರಲಿದೆ. ಒಟ್ನಲ್ಲಿ ರಿಷಭ್​ ಸಿನಿಮಾಗೆ ಆಲ್​ ದಿ ಬೆಸ್ಟ್​ ಹೇಳೋಣ.

ರಾಕೇಶ್​​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES