ಕಲಬುರಗಿ : ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವಾತ್ ಅವರ ಹೇಳಿಕೆ ನನಗೆ ನೋವುಂಟು ಮಾಡಿದೆ ಎಂದು ಕಲಬುರಗಿಯಲ್ಲಿ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರತಿಯೊಂದು ಮಸೀದಿಯಲ್ಲಿ ಲಿಂಗ ಹುಡುಕುವ ಅವಶ್ಯಕತೆ ಇಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾಗವತ್ ಅವರು ಯಾವ ಹಿನ್ನಲೆಯಲ್ಲಿ ಈ ಹೇಳಿಕೆ ನೀಡಿದಾರೋ ಅರ್ಥವಾಗುತ್ತಿಲ್ಲ.ಆದರೆ, ಇಡೀ ದೇಶದಲ್ಲಿ ಹಿಂದೂ ಸಮಾಜ ಜಾಗೃತಿಯಾಗಿದೆ ಎಂದರು.
ಇನ್ನು 96 ವರ್ಷಗಳಿಂದ ಆರ್‌ಎಸ್‌ಎಸ್ ಪರಿಶ್ರಮ ಪಟ್ಟಿದ್ದರಿಂದ ದೇಶದಲ್ಲಿ ಹಿಂದೂ ಸಂಘಟನೆಗಳು ಜಾಗೃತಿಯಾಗಿವೆ. ನಾವುಗಳು ಕಳೆದುಕೊಂಡಿರೋ ಹಿಂದೂ ದೇಗುಲಗಳನ್ನ ಮರಳಿ ಪಡೆಯುವ ಹೋರಾಟ ಹತ್ತಿಕ್ಕುವ ಕೆಲಸ ನಡೆಯುತ್ತಿದೆ ಎಂದು ಗುಡುಗಿದರು.
ಅಷ್ಟೆಅಲ್ಲದೇ ಅವರ ಈ ಹೇಳಿಕೆ ನನಗೆ ನೋವುಂಟು ಮಾಡಿದೆ. ಅವರು ಈ ರೀತಿಯಲ್ಲಿ ಹೇಳಿಕೆ ನೀಡಬಾರದಿತ್ತು. ಹಿಂದುತ್ವಕ್ಕಾಗಿ ಹೋರಾಟ ಮಾಡುತ್ತಿರುವರನ್ನ ಪ್ರೋತ್ಸಾಹಿಸಬೇಕು ವಿನಾಃ, ತಡೆಯುವ ಕೆಲಸ ಮಾಡಬಾರದು ಎಂದು ಕಿಡಿಕಾರಿದರು.