Wednesday, January 22, 2025

ಸಿದ್ದರಾಮಯ್ಯ ಮೈಸೂರಿನವರು ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತದೆ: ಪ್ರತಾಪ್ ಸಿಂಹ

ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಮ್ಮೂರಿನವರು ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತದೆ ಎಂದು ವಿಪಕ್ಷ ನಾಯಕ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

ಮೋದಿ 8 ವರ್ಷದ ಸಾಧನೆ ಬಗ್ಗೆ ಲೇವಡಿ ಹಿನ್ನಲೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ತಾಲೂಕು ಕೋರ್ಟ್​ನಲ್ಲಿ ಪ್ರಾಕ್ಟಿಸ್ಟ್ ಮಾಡಿದ್ದ ಅವರಿಗೆ ಎಕಾನಮಿ ಹೇಗೆ ಅರ್ಥ ಆಗುತ್ತದೆ. ಅಲ್ಲದೇ ಅವರು ಯಾವುದೋ ಒಂದು ಲಾ ಕಾಲೇಜಿನಲ್ಲಿ ಲಾ ಓದಿದವರಿಗೆ ದೇಶದ ಎಕಾನಮಿ ಅರ್ಥ ಆಗೋದು ಆದರು ಹೇಗೆ ? ಎಂದು ವ್ಯಂಗ್ಯವಾಡಿದರು.

ಇನ್ನು ಅನ್ನ ಭಾಗ್ಯ ಕೊಟ್ಟೆ, ಅನ್ನ ಭಾಗ್ಯ ಕೊಟ್ಟೆ ಅನ್ನೋ ಅವರು ಸ್ವಂತ ದುಡ್ಡಿನಿಂದ ನಾಡಿನ ಜನತೆಗೆ ಕೊಟ್ಟಿದ್ದಾರ ? 13 ಬಜೆಟ್ ಬಿಡುಗಡೆ ಮಾಡಿದ್ದ ವ್ಯಕ್ತಿ ಈ ರೀತಿಯ ಅಸಂಬಂಧ ಹೇಳಿಕೆ ನಿಡ್ತಾರೆ ? ಮೈಸೂರಿನಿಂದ ಇಂತಹ ಒಬ್ಬ ವಿಚಾರ ಹೀನ ವ್ಯಕ್ತಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು ಎಂದರೆ ಅವಮಾನದ ಸಂಗತಿ. ಅಲ್ಲದೇ ಇವರು ನಮ್ಮೂರಿನವರು ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತದೆ ಎಂದು ಕಿಡಿಕಾಡಿದರು.

ಮಹಾರಾಜರು ದೇವರಾಜ ಮಾರುಕಟ್ಟೆಯನ್ನ ಸ್ವಂತ ದುಡ್ಡಿನಿಂದ ಮಾಡಿದರಾ ಎಂದು ಪ್ರಶ್ನೆ ಮಾಡಿದ್ರು? ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಸ್ವಂತ ದುಡ್ಡಿನಲ್ಲಿ ಕರ್ನಾಟಕಕ್ಕೆ ಏನು ಮಾಡಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಗುಡುಗಿದರು.

RELATED ARTICLES

Related Articles

TRENDING ARTICLES