ಹುಬ್ಬಳ್ಳಿ : ಬಿಜೆಪಿ ಸೋಲಿಸುವುದು ನಮ್ಮ ತೀರ್ಮಾನ, ಕಾಂಗ್ರೆಸ್ ಪಕ್ಷವು ಯಾರನ್ನ ಸೋಲಿಸಬೇಕು ಎಂದು ತೀರ್ಮಾನಿಸಲಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.
ಇಂದು ಹುಬ್ಬಳ್ಳಿಯ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಶ್ರೀಶೈಲ ಗಡದಿನ್ನಿ ಅವರನ್ನ ಅಭ್ಯರ್ಥಿ ಮಾಡಿದ್ದು ಅವರ ಪರ 2 ದಿನ ಮತ ಯಾಚನೆ ಮಾಡುತ್ತೇನೆ. ಬಸವರಾಜ ಹೊರಟ್ಟಿ ಶಾಲೆಗಳಿಗೆ ಅನುದಾನ ಕೊಡಿಸುವಲ್ಲಿ ಯಶಸ್ವಿ ಆಗಿಲ್ಲಾ, ನಾನು ಸರ್ಕಾರದಲ್ಲಿ ಇದ್ದಾಗ ಎಲ್ಲಾ ಅನುದಾನ ಮಾಡಿದ್ದೇನೆ. ರಾಜ್ಯ ಸಭೆ ಚುನಾವಣೆ ಸಲುವಾಗಿ ನಾನು ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರ ಜೊತೆ ಚರ್ಚೆ ಮಾಡಿಲ್ಲ. ನನಗೆ ರಾಜ್ಯ ಸಭೆ ಚುನಾವಣೆ ವಿಷಯಕ್ಕೆ ತಳಮಳ, ನಡಗು ಇಲ್ಲವೇ ಇಲ್ಲಾ ಎಂದರು.
ಕಾಂಗ್ರೆಸ್ ನಾಯಕರ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಅವರು ನಮ್ಮ ಪಕ್ಷದ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ನಮ್ಮ 32 ಶಾಸಕರಲ್ಲಿ ಮೂರ್ನಾಲ್ಕು ಜನರಿಗೆ ಅಸಮಾಧಾನ ಇರಬಹುದು, ಆದರೂ ಅವೆಲ್ಲ ಮತಗಳು ನಮ್ಮ ಪಕ್ಷಕ್ಕೆ ಬರುತ್ತೇವೆ. 2016 ರಲ್ಲಿ ಕ್ರಾಸ್ ಓಟ್ ಮಾಡಿದಂತೆ ಮತ್ತೆ ಮಾಡುತ್ತೇವೆ ಎಂದು ತಿಳಿದರೆ ಅದು ಸಾಧ್ಯವಿಲ್ಲ ಎಂದು ತಿಳಿಸಿದರು.
4ನೇ ಸ್ಥಾನಕ್ಕೆ ಬಿಜೆಪಿಗೆ 32, ಕಾಂಗ್ರೆಸ್ಗೆ 24 ಮತ ಬರುತ್ತವೆ. ಈ ಲೆಕ್ಕಾಚಾರ ನಾನು ಮಾಡಿದ್ದೇನೆ, ಕಾಂಗ್ರೆಸ್ ಅಭ್ಯರ್ಥಿ ಎಲಿಮಿನೇಟ್ ಆಗುತ್ತಾರೆ. ದೇವೇಗೌಡರು ರಾಜ್ಯಸಭೆಗೆ ಸ್ಪರ್ದಿಸಿದ್ದಾಗ ರಾಷ್ಟ್ರ ಮಟ್ಟದಲ್ಲಿ ನಿರ್ಧಾರ ಮಾಡಿ ಎರಡು ಪಕ್ಷ ಅಭ್ಯರ್ಥಿ ಹಾಕಿಲ್ಲ.ಸಿದ್ದರಾಮಯ್ಯ ಒಂದು ಕಲ್ಲಿನಿಂದ ಎರಡು ಹಕ್ಕಿ ಹೊಡೆಯಲ್ಲ, ಅವರೇ ಹೊಡೆದುಕೊಳ್ಳುತ್ತಾರೆ. ಬಿಜೆಪಿ B ಟೀಮ್ ಯಾವುದು..? ಅದರ ನಾಯಕ ಯಾರು ಎನ್ನುವುದು 10ನೆ ತಾರೀಕುನಂದು ಹೊರಗೆ ಬರುತ್ತವೆ ಎಂದು ತಿಳಿಸಿದರು.
ನಮ್ಮ ಗೆಲವು-ಸೋಲು ಎರಡು ಒಂದು ರೀತಿ ಶಕ್ತಿ ಹಾಗೂ ಅಸ್ತ್ರವಾಗಿದೆ, ನಾವು ಗೆಲ್ಲುವ ವಿಶ್ವಾಸ ಇದೆ. 100/200 ಕೋಟಿ ಅನುದಾನ ನೀಡುವ ನೆಪದಲ್ಲಿ ಬಿಜೆಪಿ ಕ್ರಾಸ್ ಓಟ್ ಮಾಡಿಸುವ ಯತ್ನ ಮಾಡುತ್ತಿದೆ. ರಾಜ್ಯಸಭೆ ಚುನಾವಣೆ ನನಗೆ ಮುಖ್ಯವಲ್ಲ, 2023 ಸಾರ್ವತ್ರಿಕ ಚುನಾವಣೆ ನನ್ನ ಮುಖ್ಯ ಗುರಿ. ಮುಂದಿನ ದಿನಗಳಲ್ಲಿ ಪಂಚ ರತ್ನ ರಥ ಯಾತ್ರೆ ಮಾಡಿ ಗ್ರಾಮ ವಾಸ್ತವ್ಯ ಮಾಡುತ್ತೇನೆ ಎಂದು ಹೆಚ್ಡಿಕೆ ಪಕ್ಷದ ಬಗ್ಗೆ ಹೇಳಿದರು.