ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಈ ಬಾರಿ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ನಡೆದ ರಾಜ್ಯ ಚುನಾವಣೆಯಲ್ಲಿ ಸೋತ ಬಳಿಕ ಚಂಪಾವತ್‍ನಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪುಷ್ಕರ್ ಸಿಂಗ್ ಧಮಿ ಅವರು ಕಾಂಗ್ರೆಸ್ ಅಭ್ಯರ್ಥಿ ನಿರ್ಮಲಾ ಗಹ್ತೋಡಿ ಅವರನ್ನು 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ.
ಧಾಮಿ 54,000 ಮತಗಳನ್ನು ಪಡೆದರೆ, ಗಹತೋಡಿ ಕೇವಲ 3,607 ಮತಗಳನ್ನು ಪಡೆದಿದ್ದಾರೆ.ರಾಜ್ಯದ ಕುಮಾನ್ ಪ್ರದೇಶದಲ್ಲಿ ಕಾಂಗ್ರೆಸ್‍ನ ನಿರ್ಮಲಾ ಗೆಹ್ತೋಡಿ ಅವರೊಂದಿಗೆ ಪುಷ್ಕರ್ ಸಿಂಗ್ ಧಮಿ ನೇರವಾಗಿ ಸ್ಪರ್ಧಿಸಿದ್ದರು. ಮತ್ತೊಂದೆಡೆ ಸಮಾಜವಾದಿ ಪಕ್ಷದ ಮನೋಜ್ ಕುಮಾರ್ ಭಟ್ ಮತ್ತು ಸ್ವತಂತ್ರ ಅಭ್ಯರ್ಥಿ ಹಿಮಶು ಗಡ್ಕೋಟಿ ಚುನಾವಣಾ ಕಣದಲ್ಲಿದ್ದರು.
ಸದ್ಯ ಗೆಲುವಿನ ಅಲೆಯಲ್ಲಿರುವ ಪುಷ್ಕರ್ ಸಿಂಗ್ ಅವರು, ಈ ಕುರಿತಂತೆ ಹಿಂದಿಯಲ್ಲಿ ಟ್ವೀಟ್ ಮಾಡಿದ್ದು, ಚಂಪಾವತ್ ಜನರೇ, ನನಗೆ ಮಾತುಗಳೇ ಬರದಂತಾಗಿದೆ. ನಿಮ್ಮ ಮತಗಳ ಮೂಲಕ ನನಗೆ ಸಿಕ್ಕಿರುವ ಪ್ರೀತಿ ಆಶೀರ್ವಾದವನ್ನು ನೋಡಿ ನಾನು ಭಾವುಕನಾಗಿದ್ದೇನೆ ಎಂದು ಧನ್ಯವಾದ ತಿಳಿಸಿದ್ದಾರೆ.