Monday, December 23, 2024

ಮೂರು ನಾಮ ಹಾಕಿ ಎಂಟ್ರಿ ಕೊಟ್ಟ ರಿಯಲ್ ಸ್ಟಾರ್

ಇಡೀ ಭಾರತೀಯ ಚಿತ್ರರಂಗದಲ್ಲೇ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ ಚತುರ, ಕಿಲಾಡಿ ಡೈರೆಕ್ಟರ್, ವರ್ಸಟೈಲ್ ಆ್ಯಕ್ಟರ್ ಅಂದ್ರೆ ಒನ್ ಅಂಡ್ ಓನ್ಲಿ ಉಪ್ಪಿ. ತರ್ಲೆ ನನ್ಮಗ, ಆಪರೇಷನ್ ಅಂತ, ಶ್..!, ಓಂ ಸಿನಿಮಾಗಳನ್ನ ಸುಮ್ಮನೇ ಮೆಲುಕು ಹಾಕಿದ್ರೆ ಸಾಕು, ಉಪ್ಪಿ ಕ್ರಿಯೇಟಿವಿಟಿ, ಅವ್ರ ಮೇಕಿಂಗ್ ಸ್ಟೈಲ್ ಗಮ್ಮತ್ತು ಗೊತ್ತಾಗುತ್ತೆ.

2015ರಲ್ಲಿ ತೆರೆ ಕಂಡ ಉಪ್ಪಿ 2 ನಂತ್ರ ಬುದ್ದಿವಂತನ ನಿರ್ದೇಶನದಲ್ಲಿ ಯಾವ ಸಿನಿಮಾ ಕೂಡ ತೆರೆಗೆ ಬರಲಿಲ್ಲ. ಅವ್ರು ಎಲ್ಲೇ ಹೋಗಲಿ, ಬರಲಿ ಡೈ ಹಾರ್ಡ್ ಫ್ಯಾನ್ಸ್ ಮಾತ್ರ ಉಪ್ಪಿ ಸರ್ ಡೈರೆಕ್ಷನ್ ಮಾಡಿ ಅಂತ ದುಂಬಾಲು ಹಾಕ್ತಿದ್ರು. ಇದೀಗ ಉಪ್ಪಿಯ ಕೋಟ್ಯಂತರ ಅಭಿಮಾನಿಗಳ ಕನಸು ನನಸಾಗಿದೆ. ಹಾಲು ಕುಡಿದಷ್ಟೇ ಆನಂದವಾಗಿದೆ. ಉಪ್ಪಿ ಡೈರೆಕ್ಷನ್ ಮಾಡ್ತಿರೋ ಹೊಸ ಚಿತ್ರದ ಮುಹೂರ್ತ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಅದ್ಧೂರಿಯಾಗಿ ನೆರೆವೇರಿದೆ.

ಈ ಶುಭ ಸಮಾರಂಭಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಸೆಂಚುರಿ ಸ್ಟಾರ್ ಶಿವಣ್ಣ, ಗೀತಾ ಶಿವರಾಜ್​ಕುಮಾರ್​​ಡಾಲಿ ಧನಂಜಯ, ಆರ್.ಚಂದ್ರು, ವಸಿಷ್ಠ ಸಿಂಹ ಸೇರಿದಂತೆ ಗಣ್ಯಾತಿಗಣ್ಯರು ಸಾಕ್ಷಿಯಾದ್ರು. ಕಿಕ್ಕಿರಿದು ಸೇರಿದ್ದ ಅಭಿಮಾನಿ ಸಾಗರದ ನಡುವೆ ಉಪ್ಪಿಯ ಎಂಟ್ರಿಯೇ ಸಖತ್ ಮಜಭೂತಾಗಿತ್ತು. ಕಿಚ್ಚ ಸುದೀಪ್ ಕ್ಲಾಪ್ ಮಾಡಿ, ರೇಸ್ ಓಡೋಕೆ ಉಪ್ಪಿಯ ಕುದುರೆ ರೆಡಿಯಾಗಿದೆ. ಬೇಗ ಸಿನಿಮಾ ರಿಲೀಸ್ ಆಗಲಿ ಅಂದ್ರು ಕಿಚ್ಚ.

ಕನ್ನಡ ಸಿನಿಮಾಗಳಿಗೆ ತುಂಬು ಹೃದಯದಿಂದ ಹರಸೋ ಸನ್ ಆಫ್ ಬಂಗಾರದ ಮನುಷ್ಯ ಡಾ. ಶಿವಣ್ಣ ಕೂಡ ಉಪ್ಪಿಯನ್ನ ಕೊಂಡಾಡಿದ್ರು. ಉಪ್ಪಿ ನಾನು ಬಾಯ್ ಫ್ರೆಂಡ್ ಗರ್ಲ್ ಫ್ರೆಂಡ್ ಇದ್ದಂಗೆ .ಅವರು ನಿರ್ದೇಶನ ಮಾಡ್ತಾ ಇದ್ರೆ ಸೆನ್ಸೇಷನ್ ಅಂದ್ರು ಸ್ಯಾಂಡಲ್‌ವುಡ್‌ ಲೀಡರ್.

ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಆಗ್ತಿರೋ ಈ ಸಿನಿಮಾನ ಟಗರು, ಸಲಗ ಖ್ಯಾತಿಯ ಕೆ.ಪಿ. ಶ್ರೀಕಾಂತ್ ಹಾಗೂ ಲಹರಿ ಸಂಸ್ಥೆ ನಿರ್ಮಾಣ ಮಾಡ್ತಿದೆ. ಬುದ್ಧಿವಂತನ ಈ ಬಾರಿಯ ಆಟ ಹೇಗಿರಲಿದೆ..? ಕೊಂಬಿರೋ ಕುದುರೆ ಮೇಲೆ ಯಾವಾಗ? ಎಲ್ಲಿಗೆ..? ಏನು..? ಎತ್ತ ಅನ್ನೋದನ್ನ ನಿರೀಕ್ಷಿಸಬೇಕಿದೆ.

RELATED ARTICLES

Related Articles

TRENDING ARTICLES