Wednesday, January 22, 2025

ಪುರಿ ಜಗನ್ನಾಥ ಉತ್ಖನನ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ನವದೆಹಲಿ : ಪುರಿಯ ಜಗನ್ನಾಥ ಮಂದಿರದಲ್ಲಿ ಒಡಿಶಾ ಸರ್ಕಾರ ನಡೆಸುತ್ತಿರುವ ಉತ್ಖನನ ಹಾಗೂ ನಿರ್ಮಾಣ ಕಾಮಗಾರಿ ಅಕ್ರಮವಾದುದ್ದು ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ.

ವೈಯಕ್ತಿಕ ಹಿತಾಸಕ್ತಿಗಳು ಹಾಗೂ ಪ್ರಚಾರಕ್ಕಾಗಿ ಪಿಐಎಲ್ ಗಳನ್ನು ದಾಖಲಿಸುವ ಪರಿಪಾಠಕ್ಕೆ ಸುಪ್ರೀಂ ಕೋರ್ಟ್ ಕೆಂಡಾಮಂಡಲವಾಗಿದ್ದು ಈ ರೀತಿ ಕೋರ್ಟ್ ನ ಸಮಯ ವ್ಯರ್ಥ ಮಾಡುತ್ತಿರುವ ಅರ್ಜಿದಾರರನ್ನು ತರಾತೆಗೆ ತೆಗೆದುಕೊಂಡಿದೆ. ನ್ಯಾ.ಬಿಆರ್ ಗವಾಯಿ ಹಾಗೂ ಹಿಮಾಕೊಹ್ಲಿ ಅವರಿದ್ದ ಪೀಠ ಎರಡು ಪಿಐಎಲ್ ಗಳನ್ನು ವಜಾಗೊಳಿಸಿದ್ದು, ಇಬ್ಬರೂ ಅರ್ಜಿದಾರರಿಗೆ ತಲಾ 1 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಇತ್ತೀಚಿನ ದಿನಗಳಲ್ಲಿ ಅಣಬೆಗಳಂತೆ ಪಿಐಎಲ್ ಗಳು ಹುಟ್ಟಿಕೊಳ್ಳುತ್ತಿವೆ. ಈ ಪೈಕಿ ಹಲವು ಅರ್ಜಿಗಳು ಒಂದೋ ವೈಯಕ್ತಿಕ ಹಿತಾಸಕ್ತಿಗಾಗಿ ಆಗಿರುತ್ತವೆ ಅಥವಾ ಪ್ರಚಾರದ ಉದ್ದೇಶವನ್ನು ಹೊಂದಿರುತ್ತವೆ. ಇಂತಹ ಅರ್ಜಿಗಳಿಗೆ ಕೋರ್ಟ್ ನ ಅಸಮ್ಮತಿ ಇದೆ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.

RELATED ARTICLES

Related Articles

TRENDING ARTICLES