Thursday, January 9, 2025

ಮೊಬೈಲ್ ಕೊಡಿಸಲಿಲ್ಲ ಎಂದು ತಾಯಿಯನ್ನೇ ಕೊಲೆ ಮಾಡಿದ ಪಾಪಿ ಮಗ

ಬೆಂಗಳೂರು : ಮೊಬೈಲ್ ಕೊಡಿಸಲಿಲ್ಲ ಎಂದು ತಾಯಿಯನ್ನೇ ಕೊಲೆ ಮಾಡಿರುವ ಘಟನೆ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಜೂ 1ರಂದು, ದೀಪಕ್ ತನ್ನ ತಾಯಿ ಫಾತಿಮಾ ಮೇರಿಯನ್ನು ಹೊಸ ಮೊಬೈಲ್​ ಕೊಡಿಸುವಂತೆ ಕೇಳಿದ್ದಾನೆ. ಆದರೆ, ಆರ್ಥಿಕ ಪರಿಸ್ಥಿತಿಯಿಂದಾಗಿ ಅವರ ತಾಯಿ ಮೊಬೈಲ್ ಫೋನ್ ಕೊಡಿಸಲು ಸಾಧ್ಯವಾಗಲಿಲ್ಲ. ಈ ವೇಳೆ ಮಾತಿನ ಚಕಮಕಿಯಾಗಿ, ಜಗಳವಾಗಿದೆ.

ಈ ವೇಳೆ ತಾಯಿಯ ಸೀರೆಯಿಂದಲೇ ಉಸಿರುಗಟ್ಟಿಸಿ ಹಲ್ಲೆ ನಡೆಸಿದ್ದಾನೆ.  ಸ್ಥಳದಲ್ಲೇ ಫಾತಿಮಾ ಮೇರಿ ಕುಸಿದು ಬಿದ್ದಿದ್ದಾರೆ.

ಸದ್ಯ ಆರೋಪಿ ದೀಪಕ್​​ನನ್ನು ಬಂಧಿಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES