ನಾವು ಸರ್ಕಾರ ನಡೆಸಿದ್ದೇವೆ. ನಾವು ಯಾವತ್ತು ಪ್ರತಿಭಟನೆ ಹತ್ತಿಕ್ಕಿಲ್ಲ. ನಮಗೆ ಪ್ರಜಾಪ್ರಭುತ್ವ ದಲ್ಲಿ ನಂಬಿಕೆ ಇತ್ತು. ಪ್ರತಿಭಟನೆ ಹತ್ತಿಕ್ಕಿದರೆ ಕಾನೂನು ಸುವ್ಯವಸ್ಥೆ ಇನ್ನಷ್ಟು ಬಿಗಡಾಯಿಸುತ್ತೆ. ಈ ಎಚ್ಚರಿಕೆ ನಾವು ನೀಡ್ತಿವಿ. ಈ ಸರ್ಕಾರಕ್ಕೆ ಕೆಟ್ಟ ಹೆಸರು ಬಂದಿದೆ. ಜನ ಶಾಪ ಹಾಕುತ್ತಿದ್ದಾರೆ ಎಂದು ಹೇಳಿದರು.
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮನೆ ಮುಂದೆ NSUI ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿದರು. ಜೂನ್ 1 ರಂದು NSUI ಅಧ್ಯಕ್ಷ ಕೀರ್ತಿ ಗಣೇಶ್ ನೇತೃತ್ವದಲ್ಲಿ ಶಿಕ್ಷಣ ಸಚಿವ ನಾಗೇಶ್ ಮನೆ ಮುಂದೆ ನಡೆಯುತ್ತದೆ. ಪಠ್ಯ ಪುಸ್ತಕ ಅಕ್ರಮದ ಬಗ್ಗೆ ಹೋರಾಟ ಮಾಡ್ತಾರೆ. ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡಲು ಹಕ್ಕಿದೆ. ಪ್ರತಿಭಟನೆಯಲ್ಲಿ ಚಡ್ಡಿ ಸುಟ್ಟಿದ್ದಾರೆ. RSSನವರು ಆವಾಗ ಚಡ್ಡಿ ಹಾಕ್ತಿದರು. ಈಗ ಪ್ಯಾಂಟ್ ಹಾಕ್ತಿದ್ದಾರೆ . ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದಂತೆ ಪೊಲೀಸರು ಕೇಸ್ ಹಾಕಿದ್ದಾರೆ. ಈ ಹೋಮ್ ಮಿನಿಸ್ಟರು ಎಲ್ಲಿ ಕ್ರಮ ತಗೊಳ್ಳಬೇಕು ಅಲ್ಲಿ ತಗೊಳ್ಳಲ್ಲ. ಎಲ್ಲಿ ಕ್ರಮ ತಗೊಬಾರದೋ ಅಲ್ಲಿ ತಗೊಳ್ತಾರೆ ಎಂದು ಆಕ್ರೋಶ ಹೊರ ಹಾಕಿದರು.