Tuesday, November 5, 2024

ಪಠ್ಯದಲ್ಲಿ ಸತ್ಯ ಇರ್ಬೇಕು, ಐಡಿಯಾಲಜಿ ಇರ್ಬಾರ್ದು: ಸಾಹಿತಿ ಎಸ್.ಎಲ್. ಭೈರಪ್ಪ

ಮೈಸೂರು :ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ಸದ್ಯಕ್ಕಂತೂ ಮುಗಿಯುವಂತೆ ಕಾಣ್ತಾನೆ ಇಲ್ಲ. ಮಕ್ಕಳ ಹಿತದೃಷ್ಟಿಯಿಂದ ಮೈಸೂರು ರಾಜವಂಶಸ್ಥ ಯಧುವೀರ್ ಒಡೆಯರ್ ರೈಟ್ ಬೇಡ.. ಲೆಫ್ಟ್ ಬೇಡ.. ಸತ್ಯ ಹೇಳುವಂತಿರಲಿ ಎಂದಿದ್ರು. ಆದ್ರೀಗ ನಾಡಿನ ಹಿರಿಯ ಸಾಹಿತಿ ಅಂತ ಕರೆಸಿಕೊಳ್ಳುವ ಡಾ.ಎಸ್.ಎಲ್. ಭೈರಪ್ಪ ಮಾತ್ರ ಪಠ್ಯ ಪುಸ್ತಕ ಪರಿಷ್ಕರಣೆ ಬಗ್ಗೆ ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ.

ಪಠ್ಯದಲ್ಲಿ ಸತ್ಯ ಇರಬೇಕು. ನಿಮ್ಮ ಐಡಿಯಾಲಜಿಗಳು ಇರಬಾರದು. ಹೀಗೆ ಹೇಳಿದ್ದು ನಾಡಿನ ಹಿರಿಯ ಸಾಹಿತಿ, ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಡಾ.ಎಸ್.ಎಲ್.ಭೈರಪ್ಪ. ಮೈಸೂರಿನ ತಮ್ಮ ನಿವಾಸದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಕುರಿತು ಮಾತನಾಡಿದ ಅವರು, ಪಠ್ಯ ಪುಸ್ತಕದಲ್ಲಿ ಪ್ರಾಮಾಣಿಕವಾದದ್ದು. ಯಾವುದು? ಪಠ್ಯದಲ್ಲಿ ಸತ್ಯವಿರಬೇಕು. ನಿಮ್ಮ ಐಡಿಯಾಲಜಿಗಳು ಇರಬಾರದದು ಅಂತಾ ಹೇಳಿದ್ರು. ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ನನ್ನದು ಯಾವುದೇ ನಿಲುವನ್ನು ಪ್ರಕಟಿಸುತ್ತಿಲ್ಲ. ಇಂದಿರಾಗಾಂಧಿ ಕಾಲದಲ್ಲೂ ಪಠ್ಯಪುಸ್ತಕ ಪರಿಷ್ಕರಣೆ ಆಗಿತ್ತು. ಆಗ ನನ್ನನ್ನು ಪರಿಷ್ಕರಣೆ ಸಮಿತಿಯಿಂದ ಹೊರಗಿಟ್ಟಿದ್ದರು. ಸತ್ಯವನ್ನು ಹೇಳಬೇಕು ಎಂದಿದ್ದಕ್ಕೆ ನನ್ನನ್ನು ಹೊರಗಿಟ್ಟರು. ಆಗಲೂ ಅವರಿಗೆ ಬೇಕಾದವರನ್ನು ಸೇರಿಸಿಕೊಂಡು ಪಠ್ಯ ರಚನೆ ಮಾಡಿದ್ದರು. ಆವತ್ತಿನ ಬಹುತೇಕ ಕಾಂಗ್ರೆಸ್ ಸರ್ಕಾರದ ರಾಜ್ಯಗಳು ಪಠ್ಯವನ್ನು ಒಪ್ಪಿಕೊಂಡು ಅಂತಾ ಅಸಮಾಧಾನ ವ್ಯಕ್ತಪಡಿಸಿದ್ರು.

ಇನ್ನು ಎಲೆಕ್ಷನ್ ಬಂತು ಅಂದರೆ ಆಯಾ ಸರ್ಕಾರಗಳು ಏನು ಬೇಕಾದರೂ ಮಾಡುತ್ತವೆ ಅಂತಾ ಬೇಸರ ವ್ಯಕ್ತಪಡಿಸಿದ ಭೈರಪ್ಪ, ಪ್ರಜಾಪ್ರಭುತ್ವಕ್ಕಾಗಿ ಎಲೆಕ್ಷನ್ ನಡೆಯಬೇಕು. ಟಿಪ್ಪು ವಿಚಾರದಲ್ಲಿ ಲೆಫ್ಟಿಸ್ಟು, ಮುಸ್ಲಿಂಗಳು ಅವರದ್ದೇ ಐಡಿಯಾಲಜಿ ಮಾಡುತ್ತಾರೆ. ಟಿಪ್ಪುವಿನ ನಿಜ ಸ್ವರೂಪ ಪುಸ್ತಕವನ್ನು ಯಾರೂ ಓದುವುದಿಲ್ಲ. ಆ ಪುಸ್ತಕದಲ್ಲಿ ಶೃಂಗೇರಿಗೆ ಅನುದಾನ ಏಕೆ ಕೊಟ್ಟ ಅಂತಾ ಬರೆದಿದ್ದಾರೆ. ಬ್ರಿಟಿಷರು ನಷ್ಟವನ್ನು ಕಟ್ಟಿಕೊಡುವಂತೆ ಹೇಳಿದ್ದರು. ಹಣ ಇಲ್ಲದ ಕಾರಣಕ್ಕಾಗಿ ಮಕ್ಕಳನ್ನು ಒತ್ತೆಯಿಟ್ಟ ಎಂದು ಸಾಹಿತಿ ಮೇಲುಕೋಟೆ ಹತ್ಯಾಕಾಂಡ, ಕೊಡಗಿನ ಹತ್ಯಾಕಾಂಡವನ್ನ ಭೈರಪ್ಪ ವಿವರಿಸಿದ್ರು.

ಹಿಂದಿನ ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಮಹಾಬಲೇಶ್ವರದಲ್ಲಿ ಇತಿಹಾಸ ಮರೆಮಾಚಲಾಗಿದೆ. ಶಿವಾಜಿ ಕೊಲ್ಲಲು ಬಂದಿದ್ದ ಅಫ್ಜಲ್‌ಖಾನ್‌ನನ್ನು ನಾಯಕನಾಗಿ ಮಾಡಲಾಗಿದೆ. ನಾನು ಆ ಸ್ಥಳಕ್ಕೆ ಭೇಟಿ ಕೊಟ್ಟಿದ್ದೆ. ಅಲ್ಲಿದ್ದ ಗೈಡ್ ಮೊದಲು ನನಗೆ ಸತ್ಯ ಹೇಳಲಿಲ್ಲ. 5 ರೂಪಾಯಿ ಕೊಟ್ಟ ನಂತರ ಘಟನಾ ಸ್ಥಳಕ್ಕೆ ನನ್ನನ್ನು ಕರೆದುಕೊಂಡು ಹೋಗಿದ್ದ. ಅಫ್ಜಲ್ ದಾಳಿ ಬಗ್ಗೆ ಅಲ್ಲಿ ಮೊದಲು ನಾಮ ಫಲಕ ಹಾಕಲಾಗಿತ್ತು. ಸರ್ಕಾರವೇ ನಂತರ ಅದನ್ನು ತೆಗೆದು ಹಾಕಿದೆ. ಇದನ್ನು ಯಾರಿಗೂ ಹೇಳಬೇಡಿ ಎಂದು ಆ ಹುಡುಗ ಕೇಳಿಕೊಂಡ ಎಂದರು..

ಒಟ್ಟಾರೆ ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಎಸ್.ಎಲ್.ಭೈರಪ್ಪ ಅಭಿಪ್ರಾಯಯವನ್ನು ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಇದ್ದ ಸರ್ಕಾರಗಳು ಅವರಿಗೆ ಬೇಕಾದಂತೆ ಪಠ್ಯ ಬದಲಾಯಿಸಿದ್ದಾರೆ ಅದೇ ರೀತಿ ಈ ಸರ್ಕಾರದಲ್ಲೂ ನಡೆಯುತ್ತಿದೆ‌. ಪ್ರತಿಭಟನೆ ಮಾಡುವವರು ಮಾಡ್ಲಿ ಬಿಡಿ ಅನ್ನುವ ಅರ್ಥದಲ್ಲಿ ಈಗಿನ ಪಠ್ಯ ಪರಿಷ್ಕರಣೆ ಸರಿ ಇದೇ ಅಂತಾ ಹೇಳುವ ಮೂಲಕ ಈ ಸರ್ಕಾರದ ಪಠ್ಯ ಪುಸ್ತಕ ಪರಿಷ್ಕರಣೆಯನ್ನು ಪರೋಕ್ಷವಾಗಿ ಬೆಂಬಲಿದ್ದಾರೆ.

RELATED ARTICLES

Related Articles

TRENDING ARTICLES