ಜಮ್ಮು-ಕಾಶ್ಮೀರ : ದಿನೇ ದಿನೇ ಭಯೋತ್ಪಾದಕರ ದಾಳಿ ದಿನೇ ದಿನೇ ಹೆಚ್ಚಳವಾಗ್ತಾನೆ ಇದೆ. ಇದ್ರಿಂದ ಆತಂಕಗೊಂಡಿರುವ ಹಿಂದೂಗಳು ಮತ್ತೊಂದು ಸುತ್ತಿನ ವಲಸೆಗೆ ರೆಡಿಯಾಗಿದ್ದಾರೆ. ಕಣಿವೆ ರಾಜ್ಯದಲ್ಲಿ ಭಯೋತ್ಪಾದಕರು ಕರಿನೆರಳು ಆವರಿಸಿದೆ. ಪ್ರಧಾನಿ ಪರಿಹಾರ ಪ್ಯಾಕೇಜ್ ಅಡಿಯಲ್ಲಿ ಕೆಲಸ ಮಾಡುತ್ತಿರುವವರ ಮಹಾ ವಲಸೆ ಶುರುವಾಗಿದೆ. ಈಗಾಗಲೇ ಕಾಶ್ಮೀರ ತೊರೆದು ಜಮ್ಮು ತಲುಪಿದ್ದಾರೆ ನೂರಾರು ಸರ್ಕಾರಿ ನೌಕರರು.
ಕಾಶ್ಮೀರದಲ್ಲಿ ಸತತ ಉಗ್ರರ ದಾಳಿಯಿಂದ ಪರಿಸ್ಥಿತಿ ಹದಗೆಟ್ಟಿದ್ದು, 65 ಸರಕಾರಿ ಉದ್ಯೋಗಿಗಳು ಕುಟುಂಬ ಸಮೇತ ಶ್ರೀನಗರ ತೊರೆದಿರುವ ಮಾಹಿತಿ ಲಭ್ಯವಾಗಿದೆ. ಇಲ್ಲಿ ಭದ್ರತಾ ಸಿಬ್ಬಂದಿಯೂ ಸುರಕ್ಷಿತವಾಗಿಲ್ಲ ಎನ್ನುತ್ತಿದ್ದಾರೆ ಸ್ಥಳೀಯರು. ಈ ಪರಿಸ್ಥಿತಿಯಲ್ಲಿ ನಾಗರಿಕರು ಹೇಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಾರೆ ಎಂಬ ಆತಂಕ ಹೆಚ್ಚಾಗಿದ್ದು, ಸ್ಥಳೀಯ ಪೊಲೀಸರು ಕಾಶ್ಮೀರಿ ಪಂಡಿತರ ಶಿಬಿರಗಳನ್ನು ಸೀಲ್ ಮಾಡಿದ್ದಾರೆ.
ಒಂದು ವಾರದಲ್ಲಿ 3 ಸಾವಿರಕ್ಕೂ ಹೆಚ್ಚು ಕಾಶ್ಮೀರಿ ಪಂಡಿತರು, ಹಿಂದೂಗಳ ಮಹಾವಲಸೆಯಾಗಿದೆ. 1990ರ ದಶಕಕ್ಕಿಂತ ಇಂದಿನ ಕಾಶ್ಮೀರ ಹೆಚ್ಚು ಅಪಾಯಾರಿಯಾಗಿದೆ ಅನ್ನೋ ಆತಂಕ ಹೆಚ್ಚಾಗುತ್ತಲೇ ಇದೆ. ಈ ವರ್ಷದ ಜನವರಿಯಿಂದ ಇಲ್ಲಿಯವರೆಗೂ ಒಟ್ಟು 17 ಹಿಂದೂಗಳನ್ನು ಹತ್ಯೆ ಮಾಡಲಾಗಿದೆ.
ಇತ್ತೀಚೆಗೆ ರಜನಿ ಬಾಲಾ ಎಂಬ ಶಾಲಾ ಶಿಕ್ಷಕಿಯನ್ನು ಹತ್ಯೆ ಮಾಡಲಾಗಿತ್ತು. ಕಳೆದ ವಾರ ಬುದ್ಗಾಮ್‌ನ ಚದೂರ ಪ್ರದೇಶದಲ್ಲಿ ಲಷ್ಕರ್ – ಎ-ತೋಯ್ಬಾ ಉಗ್ರರ ಗುಂಡಿನ ದಾಳಿ ನಡೆಸಿದ್ರು. ಈ ದಾಳಿಯಲ್ಲಿ ಟಿವಿ ನಿರೂಪಕಿ ಅಮ್ರೀನ್ ಭಟ್ ಸಾವನ್ನಪ್ಪಿದ್ರು. ಮೇ 12ರಂದು ಬದ್ಗಾಮ್ ಜಿಲ್ಲೆಯಲ್ಲಿ ಕಂದಾಯ ಇಲಾಖೆ ನೌಕರ ರಾಹುಲ್ ಭಟ್ ಹತ್ಯೆ ಮಾಡಲಾಗಿತ್ತು. ಇದೀಗ ಕುಲ್ಗಾಮ್ ಜಿಲ್ಲೆಯಲ್ಲಿ ರಾಜಸ್ಥಾನ ಮೂಲಕ ಬ್ಯಾಂಕ್ ಮ್ಯಾನೇಜರ್ ವಿಜಯ ಕುಮಾರ್ ಹತ್ಯೆ ಮಾಡಲಾಗಿದೆ. ಬ್ಯಾಂಕ್‌ಗೆ ನುಗ್ಗಿ ಶೂಟ್ ಮಾಡಿದ ಉಗ್ರನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಾಶ್ಮೀರದಲ್ಲಿ ನಡೆಯುತ್ತಿರುವ ಸರಣಿ ಹತ್ಯೆಗಳ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಜೊತೆ ಸಭೆ ನಡೆಸಿದರು. ಈ ವೇಳೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಕೂಡ ಸಭೆಯಲ್ಲಿ ಪಾಲ್ಗೊಂಡಿದ್ದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಅಮಿತ್ ಶಾ ಸುಮಾರು ಒಂದು ಗಂಟೆಗಳ ಕಾಲ ಸಭೆ ನಡೆಸಿದರು.