Monday, December 23, 2024

ಮೋದಿ ಸಾಧನೆ ಜನರಿಗೆ ತಿಳಿಸೋದು ಪಕ್ಷದ ಕರ್ತವ್ಯ : ಸಚಿವ ಕೆ. ಗೋಪಾಲಯ್ಯ

ಹಾಸನ : ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ ಸಾಧನೆಯನ್ನು ಜನರಿಗೆ ತಿಳಿಸುವುದು ಪಕ್ಷದ ಕರ್ತವ್ಯವಾಗಿದೆ ಎಂದು ಹಾಸನದಲ್ಲಿ ಸಚಿವ ಕೆ. ಗೋಪಾಲಯ್ಯ ಹೇಳಿದರು.

ಕೇಂದ್ರದ ಬಿಜೆಪಿ ಸರ್ಕಾರ 8 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸರ್ಕಾರದ ಸಾಧನೆ ಬಗ್ಗೆ ಹಾಸನದ ಬಿಜೆಪಿ ಕಛೇರಿಯಲ್ಲಿ ಶಾಸಕ ಪ್ರೀತಂಗೌಡ ಜೊತೆ ಜಂಟಿಯಾಗಿ ಸುದ್ದಿಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಮೋದಿಯವರ ಎಂಟು ವರ್ಷ ಆಡಳಿತ ನಡೆಸಿದ್ದಾರೆ. ಹೀಗಾಗಿ ಅವರು ಮಾಡಿರೋ ಸಾಧನೆಯನ್ನು ಜನರಿಗೆ ತಿಳಿಸೋದು ಪಕ್ಷದ ಕರ್ತವ್ಯವಾಗಿದೆ ಎಂದರು.

2014 ರಲ್ಲಿ ಎನ್.ಡಿ.ಎ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂತು. ಐದು ವರ್ಷ ಸುದೀರ್ಘ ಆಡಳಿತದ ಬಳಿಕ 282 ಇದ್ದ ಸಂಸತ್ ಸ್ಥಾನ 306 ಕ್ಕೆ ಏರಿಗೆ ಆಗುತ್ತದೆ. ಮೂರು ದಶಕದ ನಂತರ ಕೇಂದ್ರದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡರು.

ಇನ್ನು ಮೋದಿವರು ಬಡತನದ ಹಿನ್ನೆಲೆಯಲ್ಲಿ ಹುಟ್ಟಿದವರು, ಹೀಗಾಗಿ ಅವರು ಭ್ರಷ್ಟಾಚಾರ ರಹಿತ ಅಡಳಿತ ನೀಡಿದ್ದಾರೆ. ರೈತರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಚಿಂತನೆ ಮಾಡಿದೆ, ತೋಟಗಾರಿಕೆ ಬೆಳೆಗೆ ಉತ್ತೇಜನ ನೀಡಿದೆ. ಆಹಾರ ಧಾನ್ಯಗಳ ಉತ್ಪಾದನೆ 315 ಮಿಲಿಯನ್ ಟನ್ ಇದೆ.  ಭತ್ತದ ಬೆಂಬಲ ಬೆಲೆ 1310 ಇದ್ದದ್ದನ್ನು 1940 ಕ್ಕೆ ಏರಿಕೆ ಮಾಡಿದ್ದಾರೆ. ರಾಗಿಗೆ 1650 ಇದ್ದ ಬೆಲೆಯನ್ನು 3375 ಏರಿಕೆ ಮಾಡಿದ್ದು ನರೇಂದ್ರ ಮೊದಿಯವರ ಸರ್ಕಾರದ ಸಾಧನೆಯಾಗಿದೆ ಎಂದರು.

ಅಷ್ಟೆಅಲ್ಲದೇ ಮೋದಿಯವರು ಪ್ರಧಾನಿಯಾದ ಬಳಿಕ ಆಯುಷ್ಮಾನ್, ಭಾರತ್ ಯೋಜನೆ ಜಾರಿಮಾಡಿ ಹತ್ತು ಕೋಟಿ ಜನರಿಗೆ ನೆರವಾಗಿದೆ. ಉಜ್ವಲ್ ಯೋಜನೆ ಮೂಲಕ ದೇಶದ ಎಂಟು ಕೋಟಿ ಮಹಿಳೆಯರಿಗೆ ನೆರವಾಗಿದೆ. ಜನಧನ್ ಯೋಜನೆ ಮೂಲಕವೂ ಬಡವರಿಗೆ ನೇರವಾಗಿದೆ.  ಖಾತೆಗೆ ಹಣ ಸಂದಾಯ ಮಾಡಿ ಜನರಿಗೆ ನೆರವಾಗಿದ್ದಾರೆ ಎಂದು ಬಿಜೆಪಿ ಸರ್ಕಾರದ ಸಾಧನೆಯನ್ನು ಸಚಿವ ಗೋಪಾಲಯ್ಯ ಕೊಂಡಾಡಿದರು.

RELATED ARTICLES

Related Articles

TRENDING ARTICLES