ಕರ್ನಾಟಕಕ್ಕೆ ಕಂಟಕವಾಗಿದ್ದ ಮಹಾರಾಷ್ಟ್ರದಲ್ಲಿ ಮತ್ತೆ ಕೊರೋನಾ ಅಬ್ಬರಿಸಲು ಶುರುಮಾಡಿದೆ. 4 ತಿಂಗಳಲ್ಲೇ ಅತ್ಯಧಿಕ ಕೇಸ್ಗಳು ಗುರುವಾರ ದಾಖಲಾಗಿದೆ.
ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ 1045 ಕೇಸ್ಗಳು ಪತ್ತೆಯಾಗಿದೆ. ದಿಢೀರ್ ಕೇಸ್ಗಳು ಹೆಚ್ಚಳವಾಗಿರುವ ಹಿನ್ನಲೆಯಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಕೋವಿಡ್ ಟಾಸ್ಕ್ ಪೋರ್ಸ್ ಸಭೆ ನಡೆಸಿದ್ರು. ಮೇ 1ರಂದು 169 ಕೇಸ್ಗಳಿತ್ತು ಆದರೆ ಮೇ 31ರ ಒಳಗೆ ಈ ಸಂಖ್ಯೆ 711ಕ್ಕೆ ತಲುಪಿತ್ತು. ಇದುವರೆಗೆ ಮಹಾರಾಷ್ಟ್ರದಲ್ಲಿ ಒಟ್ಟು 9354 ಕೊರೊನಾ ಸಕ್ರಿಯ ಪ್ರಕರಣಗಳಿದ್ದು, ಮುಂಬೈವೊಂದರಲ್ಲೇ ಶೇ. 64ರಷ್ಟು ಕೇಸ್ ಗಳು ಪತ್ತೆಯಾಗಿವೆ.
ಇದೇ ವೇಳೆ ಕೊರೊನಾ ಕೇಸ್ಗಳ ಹೆಚ್ಚಳದ ಬಗ್ಗೆ ಎಚ್ಚರಿಸಿದ್ದು, ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸಲಹೆ ಕೊಟ್ಟಿದ್ದಾರೆ.