Monday, December 23, 2024

ಟಗರು ಕಾಂಬೋ ಶಿವಣ್ಣ- ಡಾಲಿ ಮತ್ತೊಮ್ಮೆ ಗುಟುರು

ಬೈರಾಗಿ.. ಪಕ್ಕಾ ನಾಟಿ ಸ್ಟೈಲ್ ಸಿನಿಮಾ. ಅದ್ರಲ್ಲೂ ಶಿವಣ್ಣನ ಘಾಟಿ ಸ್ಟೆಪ್ಸ್​ ಸಿಕ್ಕಾಪಟ್ಟೆ ಧೂಳೆಬ್ಬಿಸ್ತಿವೆ. ಟಗರು ನಂತ್ರ ಶಿವಣ್ಣ- ಡಾಲಿ ಕಾಂಬೋನ ಈ ಸಿನಿಮಾದ ಆಲ್ಬಮ್ ದಿನದಿಂದ ದಿನಕ್ಕೆ ಸಖತ್ ಸದ್ದು ಮಾಡ್ತಿದೆ. ರಿಧಮ್ ಆಫ್ ಶಿವಪ್ಪನಿಗೆ ಸ್ಯಾಂಡಲ್​ವುಡ್ ಅಧ್ಯಕ್ಷನ ಕಂಠ ಬಿದ್ದಿದೆ. ಅದನ್ನ ನಾವು ಹೇಳೋದಕ್ಕಿಂತ ನೀವೇ ಕಣ್ತುಂಬಿಕೊಳ್ಳಿ.

  • ನಾ ನಿಮ್ಮ ಹೆಡ್​ ಮಾಸ್ಟರ್ ಅಂದಿದ್ಯಾರಿಗೆ ಬೈರಾಗಿ..?
  • ರಿಧಮ್ ಆಫ್ ಶಿವಪ್ಪನಿಗೆ ಅಧ್ಯಕ್ಷ ಶರಣ್ ಗಾಯನ..!
  • ಪ್ರಮೋದ್ ಮರವಂತೆ ಸಾಹಿತ್ಯ.. ಅನೂಪ್ ಸಂಗೀತ

ಲಿವಿಂಗ್ ಲೆಜೆಂಡ್, ಕರುನಾಡ ಚಕ್ರವರ್ತಿ ಡಾ. ಶಿವರಾಜ್​ಕುಮಾರ್ ನಟನೆಯ ಬಹುನಿರೀಕ್ಷಿತ  123ನೇ ಸಿನಿಮಾ ಬೈರಾಗಿ ರಿಲೀಸ್​ ಅಂಚಿಗೆ ಬಂದು ನಿಂತಿದೆ. ಭಜರಂಗಿ 2 ಬಳಿಕ ಶಿವಣ್ಣ ನಟನೆಯ ವಿಭಿನ್ನ ಜಾನರ್​ನ ಸಿನಿಮಾ ಇದಾಗಿದ್ದು, ಇಲ್ಲಿ ಟಗರು ನಂತ್ರ ಮತ್ತೊಮ್ಮೆ ಡಾಲಿ ಧನಂಜಯ ಹಾಗೂ ಶಿವಣ್ಣ ಜೋಡಿ ಮೋಡಿ ಮಾಡಲಿದೆ. ಟೀಸರ್​ಗಳಿಂದ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದ ಬೈರಾಗಿ, ಇದೀಗ ಮ್ಯೂಸಿಕಲ್ ಆಲ್ಬಮ್​ನಿಂದ ಹಲ್​ಚಲ್ ಎಬ್ಬಿಸ್ತಿದೆ.

ನಕರನಖಾ ಸಾಂಗ್ ಸೂಪರ್ ಹಿಟ್ ಆದ ಬೆನ್ನಲ್ಲೇ ವಿಜಯ್ ಮಿಲ್ಟನ್ ನಿರ್ದೇಶನದ ಬೈರಾಗಿ ಆಲ್ಬಮ್​ನ ಮತ್ತೊಂದು ಸಾಂಗ್ ರಿವೀಲ್ ಆಗಿದೆ. ಅದೇ ರಿಧಮ್ ಆಫ್ ಶಿವಪ್ಪ. ಯೆಸ್.. ಇದು ಅನೂಪ್ ಸೀಳಿನ್ ಸಂಗೀತ ಸಂಯೋಜನೆಯ, ಪ್ರಮೋದ್ ಮರವಂತೆ ಸಾಹಿತ್ಯದ ಹಂಡ್ರೆಡ್ ಪರ್ಸೆಂಟ್ ಡ್ಯಾನ್ಸಿಂಗ್ ನಂಬರ್. ರಾಜ ಇರ್ಲಿ, ಮಂತ್ರಿ ಇರ್ಲಿ, ಸಿಎಂ ಇರ್ಲಿ ಯಾರೂ ಕೆಮ್ಮಂಗಿಲ್ಲ. ನಾ ನಿಮ್ಮ ಹೆಡ್​ ಮಾಸ್ಟರ್ ಅಂತ ಶಿವಣ್ಣ ಸ್ಟೆಪ್ ಹಾಕೋ ಪರಿ ನಿಜಕ್ಕೂ ವ್ಹಾವ್ ಅನಿಸುತ್ತೆ.

ವಿಶೇಷ ಅಂದ್ರೆ ಈ ಹಾಡಿಗೆ ಆಫ್ಟರ್ ಎ ಲಾಂಗ್ ಟೈಮ್ ಶಿವಣ್ಣ ಅವ್ರೇ ಹಾಡಿದ್ದಾರೆ. ಅಲ್ಲದೆ, ಸ್ಯಾಂಡಲ್​ವುಡ್ ಅಧ್ಯಕ್ಷ ಶರಣ್ ಕೂಡ ಗಾನ ಬಜಾಯಿಸಿದ್ದಾರೆ. ಇವರಿಬ್ಬರ ಕಾಂಬೋನಲ್ಲಿ ಹಾಡಿನ ಗಮ್ಮತ್ತು ಹೆಚ್ಚಿದ್ದು, ವಿಶ್ಯುವಲ್ ಟ್ರೀಟ್ ಸಿಗೋದು ಪಕ್ಕಾ ಆಗಿದೆ. ಲಿರಿಕಲ್ ವಿಡಿಯೋಗೆ ಅಲ್ಲಲ್ಲಿ ಮೇಕಿಂಗ್ ಝಲಕ್ ಕೂಡ ಬಿದ್ದಿದ್ದು, ಶಿವಣ್ಣ ಜೊತೆ ದಿಯಾ ಫೇಮ್ ಪೃಥ್ವಿ ಅಂಬರ್, ಚಿಕ್ಕಣ್ಣ, ಡಾಲಿ ಕೂಡ ಕಾಣಸಿಗಲಿದ್ದಾರೆ.

ಕೃಷ್ಣ ಸಾರ್ಥಕ್ ನಿರ್ಮಾಣದ ಈ ಸಿನಿಮಾ ಜುಲೈ 1ಕ್ಕೆ ತೆರೆಗೆ ಬರೋ ಯೋಜನೆಯಲ್ಲಿದ್ದು, ಶಿವಣ್ಣ ಕರಿಯರ್​ಗೆ ಇದು ಮತ್ತೊಂದು ಎಕ್ಸ್​ಪೆರಿಮೆಂಟಲ್ ಸಿನಿಮಾ ಆಗಲಿದೆ. ಸ್ಯಾಂಪಲ್ಸ್​ನಿಂದ ಧೂಳೆಬ್ಬಿಸ್ತಿರೋ ಬೈರಾಗಿ, ಬಿ ಮತ್ತು ಸಿ ಸೆಂಟರ್​ಗಳಿಗೆ ಕೇರ್ ಆಫ್ ಅಡ್ರೆಸ್ ಅಗೋದ್ರಲ್ಲಿ ಡೌಟೇ ಇಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES