ವಿಜಯಪುರ: ಪದವೀಧರ ಕ್ಷೇತ್ರದ ಅಭ್ಯರ್ಥಿ ಹನುಮಂತ ನಿರಾಣಿ, ಶಿಕ್ಷಕ ಕ್ಷೇತ್ರದ ಅರುಣ್ ಶಹಾಪುರ ಮತ್ತೆ ಆಯ್ಕೆಯಾಗುತ್ತಾರೆ ಎಂದು ವಿಜಯಪುರದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಹೇಳಿದ್ದಾರೆ.
ವಾಯವ್ಯ ಪದವೀಧರ, ಶಿಕ್ಷಕ ಕ್ಷೇತ್ರದ ಎಲೆಕ್ಷನ್ ನಲ್ಲಿ ಬೆಳಗಾವಿಯಲ್ಲಿ ಬಿಜೆಪಿಗೆ ಬೆಂಬಲ ಸಿಗದ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ಸಂಪೂರ್ಣ ಬಲಿಷ್ಠವಾಗಿ ಬೆಳೆದಿದೆ. ಆ ಪ್ರಶ್ನೆಯೇ ಉದ್ಭವವಾಗಲ್ಲ. ಬೆಳಗಾವಿ ಯಾವಾಗಲೂ ಬಿಜೆಪಿಗೆ ಸಂಪೂರ್ಣ ಬೆಂಬಲ ಕೊಟ್ಟಿದೆ. ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಸಮಸ್ಯೆಯಿಲ್ಲ. ಅತೀ ಹೆಚ್ಚಿನ ಸಂಖ್ಯೆಯಲ್ಲಿ ವಿಶೇಷವಾಗಿ ಬೆಳಗಾವಿಯಲ್ಲಿ ಬೆಂಬಲ ಸಿಗಲಿದೆ ಎಂದರು.
ಇನ್ನು, ರಾಜ್ಯದಲ್ಲಿ ಬಿಜೆಪಿ ಪರ ಅಲೆಯಿದೆ. ರಾಜ್ಯದ ಮನೆ ಮನೆಯಲ್ಲೂ ಬಿಜೆಪಿ ಬೆಂಬಲ ಸಿಗುತ್ತಿದೆ. ವಾಯವ್ಯ ಪದವೀಧರ ಶಿಕ್ಷಕ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲ್ಲುತ್ತಾರೆ. ಪದವೀಧರ ಕ್ಷೇತ್ರದ ಅಭ್ಯರ್ಥಿ ಹನುಮಂತ ನಿರಾಣಿ, ಶಿಕ್ಷಕ ಕ್ಷೇತ್ರದ ಅರುಣ್ ಶಹಾಪುರ ಮತ್ತೆ ಆಯ್ಕೆಯಾಗುತ್ತಾರೆ. ಇಬ್ಬರು ನಮ್ಮ ಸ್ನೇಹಿತರು, ಸ್ನೇಹಿತರ ಪರವಾಗಿ ಪ್ರಚಾರಕ್ಕೆ ಬರದಿರುವೆ. ಇದೊಂದು ಸಂದರ್ಭ ನಮ್ಮ ಸಂಬಂಧ ಗಟ್ಟಿಗೊಳಿಸೋಕೆ ಎಂದು ಹೇಳಿದರು.