ಚಿತ್ರದುರ್ಗ: ಕಳೆದ ಮಾರ್ಚ 12 ರಂದು ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿ ಗ್ರಾಮದಲ್ಲಿ ರಸ್ತೆ ಪಕ್ಕದಲ್ಲಿ ನಿಲ್ಲಿಸಿರುವ ಟ್ರಾಕ್ಟರ್ ಮತ್ತು ಟ್ರೈಲರ್ ನ್ನು ಮಧ್ಯೆ ರಾತ್ರಿ ಕದ್ದೊಯ್ಯದ ಕಳ್ಳರ ಪತ್ತೆಗಾಗಿ ಚಳ್ಳಕೆರೆ ನಗರ ಠಾಣೆ ಪೊಲೀಸ್ರು ಬಲೆ ಬಿಸಿದ್ದರು ಎನ್ನಲಾಗಿದೆ.
ಇದರಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸ್ ಇನ್ಸ್ಪೆಕ್ಟರ್ ಜೆ.ತಿಪ್ಪೇಸ್ವಾಮಿ, ಪಿಎಸ್ಐ ಕೆ.ಸತೀಶ್ ನಾಯ್ಕ್ ಹಾಗೂ ಶ್ರೀನಿವಾಸ್, ಹಾಲೇಶ್, ಸತೀಶ್, ಮಂಜುನಾಥ್ ಮುಡುಕೆ, ಸಿಬ್ಬಂದಿಯ ತಂಡ ಕಳ್ಳರಿಗಾಗಿ ಬಲೆ ಬೀಸಿದ್ದರು.
ಸದರಿ ಕಾರ್ಯಚರಣೆಯಲ್ಲಿರುವಾಗ ಚಳ್ಳಕೆರೆ ತಾಲೂಕಿನ ಕುರುಡಿಹಳ್ಳಿ ಬಸ್ ನಿಲ್ದಾಣದ ಬಳಿ ಅನುಮಾನಸ್ಪಾದವಾಗಿ ತಿರುಗಾಡುವ ವಿಜಯ್ , ಪುಟ್ಟು, ಸಂತೋಷ್ ಎಂಬ ಮೂರು ಜನ ಕಳ್ಳರನ್ನು ಠಾಣೆಗೆ ಕರೆತಂದು ವಿಚಾರಿಸಿದರೆ ಮತ್ತೆ ಕಾಂತರಾಜ್, ಸುನಿಲ್ , ವಿನಯ್ ಎಂಬ ಇನ್ನೂ ಮೂರು ಜನ ಸೇರಿ ಒಟ್ಟು ಆರು ಮಂದಿ ಸೇರಿ ವಿವಿಧ ಕಡೆಗಳಲ್ಲಿ ಟ್ರ್ಯಾಕ್ಟರ್ ಹಾಗೂ ಟ್ರೈಲರ್ ಗಳನ್ನು ಕಳ್ಳತನ ಮಾಡಿರುವ ಬಗ್ಗೆ ತಪ್ಪು ಒಪ್ಪಿಕೊಂಡಿರುತ್ತಾರೆ.
ಸುಮಾರು 9 ಲಕ್ಷ ರೂಪಾಯಿ ಬೆಲೆ ಬಾಳುವ ಟ್ರಾಕ್ಟರ್ ಸಮೆತ ವಶಪಡಿಸಿಕೊಂಡ ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೆ.ಪರಶುರಾಮ್ , ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಸ್ವಾಮಿ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.