Thursday, April 3, 2025

ವ್ಹೀಲ್​ಚೇರ್ ರೋಮಿಯೋಗೆ ಜಮೀರ್ ಬಹುಪರಾಕ್

ಜಮೀರ್​ ಅಹಮದ್​​ಗೂ ಸಿನಿಮಾ ಇಂಡಸ್ಟ್ರಿಗೂ ಅವಿನಾಭಾವ ಸಂಬಂಧ. ಸಾಕಷ್ಟು ಸ್ಟಾರ್​ಗಳ ಜೊತೆ ನಂಟಿರೋ ಜಮೀರ್, ಸದ್ಯ ಮಗನನ್ನ ಹೀರೋ ಮಾಡ್ತಿದ್ದಾರೆ. ಅಲ್ಲದೆ, ಕಳೆದ ವಾರ ತೆರೆಕಂಡ ವ್ಹೀಲ್​ಚೇರ್ ರೋಮಿಯೋ ನೋಡಿ ಶಹಬ್ಬಾಶ್ ಅಂದಿದ್ದಾರೆ. ಫಸ್ಟ್ ಹಾಫ್ ಮಾತ್ರ ನೋಡಿದ ಜಮೀರ್ ಹೇಳಿದ್ದೇನು ಅಂತೀರಾ..? ನೀವೇ ಓದಿ.

  • ರಾಮ್ ಚೇತನ್ ಅಭಿನಯ ಕೊಂಡಾಡಿದ ರಾಜಕಾರಣಿ

ವ್ಹೀಲ್ ಚೇರ್ ರೋಮಿಯೋ.. ಕಳೆದ ವಾರ ತೆರೆಕಂಡ ಸ್ಯಾಂಡಲ್​ವುಡ್​ನ ವಿನೂತನ ಪ್ರಯೋಗವಿದು. ವಿಮರ್ಶಕರಿಂದಷ್ಟೇ ಅಲ್ಲದೆ ಪ್ರೇಕ್ಷಕರಿಂದಲೂ ಒಳ್ಳೆಯ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬರ್ತಿದೆ. ಕಾರಣ ಚಿತ್ರದ ಕಥೆ, ಪಾತ್ರಗಳು ಹಾಗೂ ವ್ಹಾವ್ ಫೀಲ್ ಕೊಡೋ ಡೈಲಾಗ್ಸ್.

ನಟರಾಜ್ ಗೌಡ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದ್ದು, ನಿರ್ದೇಶಕರೇ ಬರಹಗಾರರಾಗಿದ್ದುಕೊಂಡು ಮತ್ತೊಬ್ಬ ಖ್ಯಾತ ರೈಟರ್ ಗುರು ಕಶ್ಯಪ್ ಕೈಯಲ್ಲಿ ಡೈಲಾಗ್ಸ್ ಬರೆಸಿರೋ ಸಿನಿಮಾ ಇದು. ಕಿರುತೆರೆ ಕಲಾವಿದ ರಾಮ್ ಚೇತನ್ ಹಾಗೂ ಮಯೂರಿ ಜೋಡಿಯಾಗಿ ನಟಿಸಿರೋ ಈ ಚಿತ್ರದಲ್ಲಿ ರಂಗಾಯಣ ರಘು, ಸುಚೇಂದ್ರ ಪ್ರಸಾದ್ ಕೂಡ ಗಮನ ಸೆಳೆಯುತ್ತಿದ್ದಾರೆ.

ರೀಸೆಂಟ್ ಆಗಿ ನಾಯಕನಟ ರಾಮ್ ಚೇತನ್​ಗೂ ಆಪ್ತರಾಗಿರೋ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಸಿನಿಮಾ ನೋಡಿದ್ದಾರೆ. ವ್ಹೀಲ್ ಚೇರ್ ರೋಮಿಯೋ ನೋಡಿ ಫುಲ್ ಫಿದಾ ಆಗಿದ್ದಾರೆ. ಸಿನಿಮಾ ಬಗ್ಗೆ ರಾಮ್ ಚೇತನ್​ಗೂ ಮುನ್ನ ಸಾಕಷ್ಟು ಮಂದಿ ಒಳ್ಳೆಯ ಚಿತ್ರ ಅಂದಿದ್ದರಂತೆ. ಕೆಲಸದ ಒತ್ತಡದಿಂದ ವೀರೇಶ್ ಥಿಯೇಟರ್​ನಲ್ಲಿ ಮೊದಲಾರ್ಧ ನೋಡಿ ನಿರ್ಗಮಿಸಿದ ಜಮೀರ್, ಸಿನಿಮಾದ ಕಥೆ ಹಾಗೂ ನಾಯಕನಟನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ರು.

ಒಟ್ಟಾರೆ ಸದಭಿರುಚಿಯ ಸಿನಿಮಾಗಳನ್ನ ಕನ್ನಡಿಗರು ಕೈಹಿಡಿಯುತ್ತಾರೆ ಅನ್ನೋದನ್ನ ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ. ವ್ಹೀಲ್ ಚೇರ್ ರೋಮಿಯೋ ಜಮೀರ್ ಹೇಳಿದಂತೆ ಹಂಡ್ರೆಡ್ ಪರ್ಸೆಂಟ್ ಫ್ಯಾಮಿಲಿ ಎಂಟರ್​ಟೈನರ್. ಅಲ್ಲದೆ, ವಿಶೇಷ ಚೇತನರ ಜೀವನೋತ್ಸಾಹದ ಜರ್ನಿ. ಸೋ ಮಸ್ಟ್ ನೋಡಲೇಬೇಕಾದ ಚಿತ್ರವಿದು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES