ಗುಜರಾತ್ : ಇದು ಅಪರೂಪದಲ್ಲಿ ಅಪರೂಪದ ಮದುವೆ ವರನೂ ಇಲ್ಲ. ವಧು ಮಾತ್ರ ಹಸೆಮಣೆಯಲ್ಲಿರ್ತಾಳೆ ಇದು ಭಾರತದ ಮೊಟ್ಟ ಮೊದಲ ಸೋಲೋ ಮದುವೆಯಾಗಿದೆ.
ಗುಜರಾತ್‌ನ ವಡೋದರದ ಯುವತಿ ಕ್ಷಮಾ ಬಿಂಧು ವರನಿಲ್ಲದೆ ಮದುವೆಯಾಗಲಿ ಸಿದ್ದಳಾಗಿದ್ದಾಳೆ. ಅಂದಹಾಗೆ ಮದುವೆ ಕಾರ್ಯಕ್ರಮ ಸರಳವಾಗಿ ನಡೆಯಲಿದೆ. ಈ ವಿಶಿಷ್ಟ ವಿವಾಹ ಸಮಾರಂಭ ಜೂನ್ 11 ರಂದು ನಡೆಯಲಿದೆ. ಅದಲ್ಲದೇ ಈಕೆ ತಂದೆ-ತಾಯಿಯ ಅಪ್ಪಣೆಯನ್ನೂ ಪಡೆದಿದ್ದಾಳಂತೆ. ಬಂಧು ಬಳಗ ಸೇರಿ ಸ್ನೇಹಿತರು ಕೂಡ ಇರ್ತಾರಂತೆ. ಮೆಹಂದಿ, ರಿಸೆಪ್ಷನ್ ಎಲ್ಲಾ ಸಂಪ್ರದಾಯವೂ ಮಾಮೂಲಿನಂತೆ ನಡೆಯಲಿದೆ. 24 ವರ್ಷದ ವಿಶಿಷ್ಠ ರೀತಿ ಮದುವೆಯಿಂದ ಕ್ಷಮಾ ಬಿಂಧು ದೇಶದ ಗಮನ ಸೆಳೆದಿದ್ದಾಳೆ.
ಸದ್ಯಕ್ಕೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಕ್ಷಮಾ ಬಿಂದು ಈ ಸ್ವಯಂ ವಿವಾಹದ ಬಗ್ಗೆ ಆನ್ಲೈನ್ನಲ್ಲಿ ಓದಿದ್ದರಂತೆ. ಆದರೆ ದೇಶದ ಎಲ್ಲಿಯೂ ಈ ರೀತಿ ನಡೆದಿರುವ ಬಗ್ಗೆ ಹುಡುಕಾಡಿದರೂ ತಿಳಿಯಲಿಲ್ಲ. ಬಹುಶಃ ಸ್ವಯಂ ಪ್ರೀತಿಯ ಕುರಿತಾಗಿ ತಾನೇ ಒಂದು ಉದಾಹರಣೆಯಾಗಿ ನಿಲ್ಲುತ್ತೇನೆ ಎನ್ನುತ್ತಾರೆ ಕ್ಷಮಾ.