Monday, December 23, 2024

ಕನಸಿನ ಮೂಟೆಯೊಂದಿಗೆ ಕನಸಿನ ರಾಣಿ ಬೌನ್ಸ್ ಬ್ಯಾಕ್

ಕನಸಿನ ರಾಣಿ ಮಾಲಾಶ್ರೀಯ ಕನಸುಗಳು ಒಮ್ಮೆ ಅಲ್ಲ, ಎರಡೆರಡು ಬಾರಿ ನುಚ್ಚಿ ನೂರಾಯ್ತು. ವಿಧಿ ಕೂಡ ಅವ್ರ ಮನಸ್ಸನ್ನ ಚುಚ್ಚಿ ಚುಚ್ಚಿ ಘಾಸಿಗೊಳಿಸಿತು. ಜೀವದ ಗೆಳೆಯ, ಜೀವಕೊಟ್ಟವ ಇಬ್ಬರನ್ನೂ ಕಿತ್ತುಕೊಂಡಾಗ ಜೀವನಾನೇ ಬೇಡ ಅಂದುಕೊಂಡವ್ರು ಬೆಂಕಿ ಚೆಂಡಿನಂತೆ ಪುಟಿದೆದ್ದಿದ್ದಾರೆ. ಯೆಸ್.. ಮತ್ತಷ್ಟು ದೊಡ್ಡ ಕನಸಿನ ಮೂಟೆಯೊಂದಿಗೆ ಬೌನ್ಸ್​ಬ್ಯಾಕ್ ಆಗಿದ್ದಾರೆ. ಅದ್ಹೇಗೆ ಅನ್ನೋದ್ರ ಇಂಟರೆಸ್ಟಿಂಗ್ ಸ್ಟೋರಿ ನಿಮಗಾಗಿ ಕಾಯ್ತಿದೆ ನೋಡಿ.

  • ಆ್ಯಕ್ಷನ್​ ಥ್ರಿಲ್ಲರ್​​ ಸಿನಿಮಾಗೆ ಆರ್ಮಿ ಡಾಕ್ಟರ್​ ಆದ ದುರ್ಗಿ

ಕನ್ನಡ ಸಿನಿಮಾಗಳ ಇತಿಹಾಸವನ್ನ ಮೆಲುಕು ಹಾಕಿ ನೋಡಿದ್ರೆ ರೆಬೆಲ್​​ ಕ್ವೀನ್​, ಕನಸಿನ ರಾಣಿ ಮಾಲಾಶ್ರೀ ಪಾತ್ರ ತುಂಬಾ ದೊಡ್ಡದು. ದಂತದ ಗೊಂಬೆಯಂತೆ ಪಳ ಪಳ ಹೊಳೀತಿದ್ದ ಮಾಲಾಶ್ರೀ ಅವ್ರ ಸಿನಿಮಾಗಳು ಅಂದ್ರೆ ಕಣ್ಣಿಗೆ ಹಬ್ಬವೋ ಹಬ್ಬ. ಅವಳ ನ್ಯಾಚುರಲ್​ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗ್ತಾರೆ. ಡ್ಯಾನ್ಸ್​ ಇರಲಿ, ಎಮೋಷನ್ಸ್​ ಇರಲಿ ಮಾಲಾಶ್ರೀಗೆ ನೀರು ಕುಡಿದಷ್ಟೇ ಸುಲಭ.

ರಾಮಾಚಾರಿ, ಬೆಳ್ಳಿ ಕಾಲುಂಗುರ, ನಂಜುಂಡಿ ಕಲ್ಯಾಣ ಚಿತ್ರಗಳಲ್ಲಿನ ಅಭಿನಯಕ್ಕೆ ಆಕೆಗೆ ಆಕೆಯೇ ಸಾಟಿ. ಬಣ್ಣ ಹಚ್ಚಿದ್ರೆ ಕಲೆಯೊಳಗೆ ಮುಳುಗಿ, ಕಳೆದೇ ಹೋಗ್ತಿದ್ರು ಮಾಲಾಶ್ರೀ. ರೆಬೆಲ್​​ ಪಾತ್ರಗಳಲ್ಲಿ ರೌಡಿಗಳ ರುಂಡ ಚೆಂಡಾಡೋ ದುರ್ಗಿಯಾಗಿ ಈಕೆಯ ಸಿನಿಮಾಗಳು ಇನ್ನು ನೂರು ವರ್ಷ ಕಳೆದ್ರೂ ಅನ್​ಬೀಟಬಲ್​​​.

ಕನ್ನಡ ಚಿತ್ರರಂಗದ ಧೀಮಂತ ನಿರ್ಮಾಪಕ  ಕೋಟಿ ರಾಮು ಅವರ ಅಕಾಲಿಕ ಸಾವಿನಿಂದ ಮಾಲಾಶ್ರೀ ಅಕ್ಷರಶಃ ಕುಗ್ಗಿ ಹೋದ್ರು. ಕೋರೋನಾ ಮಹಾಮಾರಿ, ಕನಸಿನ ರಾಣಿಯ ಪ್ರೀತಿಯ ಪತಿದೇವರನ್ನ ಬಲಿ ತೆಗೆದುಕೊಂಡಿತು. ಸಿನಿಮಾನೇ ಉಸಿರಾಗಿದ್ದ ಮಾಲಾಶ್ರೀಗೆ ಪತಿಯ ಅಗಲಿಕೆ ದೊಡ್ಡ ಪೆಟ್ಟು ಕೊಟ್ಟಿತು. ಇತ್ತ ಅವರ ಸಿನಿಮಾಗಳಿಲ್ಲದೆ ಅಭಿಮಾನಿಗಳಿಗೂ ನಿರಾಸೆಯಾಗಿತ್ತು. ಇದೀಗ ಹಠವಾದಿ ಮಾಲಾಶ್ರೀ ಬೆಂಕಿ ಚೆಂಡಿನಂತೆ ಮತ್ತೆ ಪುಟಿದೆದ್ದು ಬಂದಿದ್ದಾರೆ.

ರಾಮು ಇಲ್ಲದ ಕಷ್ಟಕರ ಜೀವನವನ್ನು ಛಲವಾದಿ ಮಾಲಾಶ್ರೀ ಮೆಟ್ಟಿ ನಿಂತು, ಮತ್ತೆ ಸ್ಯಾಂಡಲ್​​ವುಡ್​ಗೆ ರಣಚೆಂಡಿಯಂತೆ ಎಂಟ್ರಿ ಕೊಡ್ತಿದ್ದಾರೆ. ಆ್ಯಕ್ಷನ್​ ಥ್ರಿಲ್ಲರ್​​ ಕಥೆ ಇರೋ ನೈಟ್​ ಕರ್ಫ್ಯೂ ಚಿತ್ರದಲ್ಲಿ ಆರ್ಮಿ ಡಾಕ್ಟರ್​ ರೋಲ್​ನಲ್ಲಿ ಮಿಂಚ್ತಿದ್ದಾರೆ. ಸಿನಿಮಾ ಮೇಲಿನ ಕಮಿಟ್ಮೆಂಟ್​, ಶ್ರದ್ಧೆಯಿಂದ ಲೇಡಿ ಸೂಪರ್​  ಸ್ಟಾರ್​ ಆಗಿ ಮಿಂಚಿದ್ದ ಮಾಲಾಶ್ರೀಗೆ ಮತ್ತೆ ಈ ಚಿತ್ರದಿಂದ ದೊಡ್ಡ ಬ್ರೇಕ್​ ಸಿಗಲಿ.

ನೈಜ ಕಥೆ ಅಧರಿಸಿದ ಸಿನಿಮಾ ಇದಾಗಿದ್ದು, ರವೀಂದ್ರ ವಂಶಿ ಡೈರೆಕ್ಷನ್​​​ ಮಾಡ್ತಿದ್ದಾರೆ. ಮಾಲಾಶ್ರೀ ಜೊತೆಗೆ ರಂಜಿನಿ ರಾಘವನ್​ ಕೂಡ ನಟಿಸ್ತಿದ್ದಾರೆ. ಪ್ರಮೋದ್ ಶೆಟ್ಟಿ, ರಂಗಾಯಣ ರಘು, ಸಾಧು ಕೋಕಿಲಾ, ವರ್ಧನ್ ಸೇರಿದಂತೆ ಕಲಾವಿದರ ದಂಡೇ ಇದೆ. ಸ್ವರ್ಣಾ ಗಂಗಾ ಬ್ಯಾನರ್​ ಅಡಿಯಲ್ಲಿ ಬಿ.ಎಸ್​​ ಚಂದ್ರಶೇಖರ್​ ನಿರ್ಮಾಣ ಮಾಡ್ತಿದ್ದಾರೆ. ಸಿನಿಮಾ ಶೂಟಿಂಗ್​ ಕಂಪ್ಲೀಟ್​ ಆಗಿದ್ದು, ಟೈಟಲ್​ ಲಾಂಚ್​ ಮಾಡಿ ಕ್ಯೂರಿಯಾಸಿಟಿಯ ಚಿಟ್ಟೆ ಹರಿಬಿಟ್ಟಿದೆ ಚಿತ್ರತಂಡ. ದಂತದ ಗೊಂಬೆ ಮಾಲಾಶ್ರೀಗೆ ಈ ಸಿನಿಮಾ ಸಕ್ಸಸ್​​ ತಂದುಕೊಡಲಿ ಎಂದು ಶುಭ ಹಾರೈಸೋಣ.

ರಾಕೇಶ್​​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES