ರಾತ್ರೋ ರಾತ್ರೋ ಇಡೀ ಜಗತ್ತೇ ತಿರುಗಿ ನೋಡುವಂತೆ ಹಾಡಿದ ಗಾಯಕ ಭುವನ್ ಬದ್ಯಕರ್, ಕಡ್ಲೆಕಾಯಿ ವ್ಯಾಪಾರಕ್ಕೆ ಹಾಡಿದ ಹಾಡು ಸೂಪರ್ ಡೂಪರ್ ಹಿಟ್ ಆಗಿತ್ತು. ಈಗ ಅದೇ ಗಾಯಕ ಕನ್ನಡ ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ ಅನ್ನೋದು ಇಂಟ್ರೆಸ್ಟಿಂಗ್ ಸುದ್ದಿಯಾಗಿದೆ.
ಗಾಯಕ ಭುವನ್ ಬದ್ಯಕರ್ ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟಿದ್ದು, ಗಜಾನನ & ಗ್ಯಾಂಗ್ ಚಿತ್ರತಂಡ ಅವ್ರನ್ನ ತಲಾಷ್ ಮಾಡಿ ತಮ್ಮ ಸಿನಿಮಾದ ಪ್ರಚಾರಕ್ಕೆ ಹಾಡನ್ನ ಹಾಡಿಸಿದ್ದಾರೆ. ನಿರ್ಮಾಪಕ ನಾಗೇಶ್ ಕುಮಾರ್ ತಮ್ಮ ಸಿನಿಮಾ ಪ್ರಚಾರಕ್ಕೆ ಇಂಥದೊಂದು ಪ್ಲಾನ್ ಮಾಡಿದ್ದು, ಅವ್ರೇ ಕಷ್ಟ ಪಟ್ಟು ಭುವನ್ ಅವ್ರನ್ನ ಹುಡುಕಿದ್ದಾರೆ. ಬಂಗಾಳಿ ಭಾಷೆ ಬಿಟ್ಟು ಮತ್ಯಾವುದೇ ಭಾಷೆಯ ಬಗ್ಗೆ ಜ್ಞಾನ ಇಲ್ಲದ ಭುವನ್ ಮೊದಲಿಗೆ ನನಗೆ ಸಾಧ್ಯವಿಲ್ಲ. ಹಾಡೋಲ್ಲ ಎಂದಿದ್ರಂತೆ. ಆದ್ರೆ ಛಲ ಬಿಡದೇ ನಾಗೇಶ್ ಕುಮಾರ್ ಸತತ ಪ್ರಯತ್ನದ ಮೂಲಕ ತಮಗೆ ಬೇಕಾದಂತೆ ಅವರ ಬಳಿ ಹಾಡು ಹಾಡಿಸಿದ್ದಾರೆ. ಸದ್ಯ ಈ ಹಾಡು ಸಖತ್ ವೈರಲ್ ಆಗ್ತಿದ್ದು ಸಿನಿಮಾತಂಡದ ವಿಭಿನ್ನ ಪ್ರಯತ್ನಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.