Thursday, January 23, 2025

ದಾಂಪತ್ಯ ಜೀವನಕ್ಕೆ ಕಾಲಿಟ್ಟ ದೀಪಕ್-ಜಯಾ

ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ದೀಪಕ್ ಚಹರ್ ತಮ್ಮ ದೀರ್ಘಕಾಲದ ಗೆಳತಿ ಜಯಾ ಭಾರದ್ವಾಜ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಆಗ್ರಾದ ವಾಯುವಿಹಾರ್ ನಿವಾಸಿಗಳಾದ ದೀಪಕ್ ಚಹರ್ ಮತ್ತು ಜಯಾ ಅವರ ವಿವಾಹವು ಫತೇಹಾಬಾದ್ ರಸ್ತೆಯಲ್ಲಿರುವ ಜೇಪೀ ಪ್ಯಾಲೇಸ್ ಹೋಟೆಲ್​​ನಲ್ಲಿ ಅದ್ದೂರಿಯಾಗಿ ನೆರವೇರಿತು. ದೀಪಕ್ ವಿವಾಹ ಸಂಭ್ರಮದ ಮಹೋತ್ಸವದಲ್ಲಿ ಮಹೇಂದ್ರ ಸಿಂಗ್ ಧೋನಿ, ಕೆ.ಎಲ್.ರಾಹುಲ್, ರೋಹಿತ್ ಶರ್ಮಾ ಸೇರಿದಂತೆ ಹಲವು ಸ್ಟಾರ್ ಕ್ರಿಕೆಟರ್ಸ್, ಸೆಲೆಬ್ರೆಟಿಸ್ ಮತ್ತು ಸ್ನೇಹಿತರು​ ಭಾಗಿಯಾಗಿದ್ರು. ಜೊತೆಗೆ ಇಡೀ ಕುಟುಂಬ ವರ್ಗವೇ ಸಿಕ್ಕಾಪಟ್ಟೆ ಎಂಜಾಯ್ ಮಾಡ್ತಾ ಕಲರ್​​ಫುಲ್ ಆಗಿ ಮದುವೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

RELATED ARTICLES

Related Articles

TRENDING ARTICLES