Wednesday, January 22, 2025

ಸೋನಿಯಾ ಗಾಂಧಿಗೆ ಕೊರೋನಾ

ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ನ್ಯಾಷನಲ್ ಹೆರಾಲ್ಡ್ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಜೂನ್ 8ರಂದು ಅವರು ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸಬೇಕಿತ್ತು. ಸೋನಿಯಾ ಗಾಂಧಿಗೆ ನಿನ್ನೆ ಕೊವಿಡ್ ಲಕ್ಷಣಗಳು ಕಂಡು ಬಂದಿವೆ. ಹೀಗಾಗಿ ಅವರು ಐಸೋಲೇಟ್ ಆಗಿದ್ದಾರೆ.

ಕಳೆದ ವಾರ ಸರಣಿ ಸಭೆಗಳನ್ನು ನಡೆಸಿದ್ದ ಸೋನಿಯಾ ಗಾಂಧಿಗೆ ತುಸು ಬಳಲಿಕೆಯೂ ಕಾಣಿಸಿಕೊಂಡಿತ್ತು .‘ನಿನ್ನೆ ಸಂಜೆ ಕೆಲವರಲ್ಲಿ ಕೊವಿಡ್ ಸೋಂಕು ದೃಢಪಟ್ಟಿದೆ. ಸೋನಿಯಾ ಅವರಿಗೂ ಸಣ್ಣಗೆ ಜ್ವರ ಬಂದಿತ್ತು. ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರು ಐಸೊಲೇಷನ್​ಗೆ ಮುಂದಾಗಿದ್ದಾರೆ.  ವೈದ್ಯಕೀಯ ಚಿಕಿತ್ಸೆ  ಪಡೆದುಕೊಳ್ಳುತ್ತಿದ್ದು,  ಗುಣಮುಖರಾಗುತ್ತಿದ್ದಾರೆ’ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದ್ದಾರೆ.

RELATED ARTICLES

Related Articles

TRENDING ARTICLES