Thursday, June 13, 2024

ರಿಯಲ್ ಲೈಫಲ್ಲಿ ವಿಲನ್‌ ಆದ ‘ರೀಲ್‌’ ವಿಲನ್‌

ಬೆಂಗಳೂರು: ಖಡಕ್ ಪೊಲೀಸ್ ಆಫೀಸರ್ ನಂತೆ ಡೈಲಾಗ್ ಮೇಲೆ ಡೈಲಾಗ್ ಹೊಡೆದು ಹೇಗೆ ಆಕ್ಟ್ ಮಾಡ್ತಿದ್ದಾನೆ ಅಲ್ವಾ. ಅಂದಹಾಗೇ ಈ ವ್ಯಕ್ತಿಯ ಹೆಸರು ನಾರಾಯಣ. ಸ್ಯಾಂಡಲ್ ವುಡ್ ನಲ್ಲಿ ಹಲವಾರು ಚಿತ್ರಗಳಲ್ಲಿ ಖಳನಟನಾಗಿ ನಟಿಸಿರೋ ಈ ನಾರಾಯಣ, ಅದೆಷ್ಟೋ ಬಾರಿ ಚಿತ್ರದ ನಾಯಕ, ಪೊಲೀಸರಿಂದ ಹೊಡೆತ ತಿಂದು ಜೈಲು ಸೇರಿರಬಹುದು. ಅದ್ರೆ ಈಗ ನಿಜ ಜೀವನದಲ್ಲೂ ಜೈಲು ಸೇರಿದ್ದಾನೆ.

ಈ ಖಳನಟ ನಾರಾಯಣ್ ಮಂಡ್ಯ ಮೂಲದ ವಜ್ರದ ವ್ಯಾಪಾರಿ ಆದರ್ಶ್ ಎಂಬುವರನ್ನ ಕಿಡ್ನಾಪ್ ಮಾಡಿದ ಆರೋಪದಲ್ಲಿ ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ದಾರೆ. ಏಪ್ರಿಲ್ 20 ರಂದು ವಜ್ರದ ವ್ಯಾಪಾರಿ ಆದರ್ಶ್ ಯುಬಿ ಸಿಟಿಯಲ್ಲಿ ಊಟ ಮುಗಿಸಿ ಮನೆಗೆ ಹೊರಟಿದ್ದರಂತೆ. ಶಿವಾನಂದ ಸರ್ಕಲ್ ಬಳಿ ಕಾರು ಅಡ್ಡಗಟ್ಟಿದ ನಾರಾಯಣ್ ಮತ್ತು ಆತನ ಸ್ನೇಹಿತರು, ಕಿಡ್ನಾಪ್ ಮಾಡಿ ಮಂಡ್ಯ ಕಡೆ ತೆರಳಿದ್ದಾರೆ. ಬಳಿಕ ವ್ಯಾಪಾರಿ ಆದರ್ಶ್ ಮನೆಯವರಿಗೆ ಕರೆ ಮಾಡಿ 25 ಲಕ್ಷ ಹಣಕ್ಕೆ ಡಿಮ್ಯಾಂಡ್​ ಮಾಡಿದ್ದಾರೆ. ಕಿಡ್ನಾಪ್ ವಿಚಾರ ತಿಳಿದ ಆದರ್ಶ್ ಮನೆಯವರು ಕೂಡಲೇ ಹಣವೊಂದಿಸಿ ಕೊಟ್ಟಿದ್ದಾರೆ. ಹಣದ ಜೊತೆಗೆ ಖಾಲಿ ಚೆಕ್ ಗಳನ್ನ ಪಡೆದಿದ್ದ ಆರೋಪಿಗಳು, ಆದರ್ಶ್ ನಮಗೆ ಹಣ ನೀಡಬೇಕಿತ್ತು ಅದನ್ನ ಪಡೆದಿದ್ದೇವೆ ಎಂದು ಬಿಂಬಿಸಿದ್ದಾರೆ. ಸದ್ಯ ಖಳನಟ ನಾರಾಯಣ್, ಚಾಲಕ ಉಮೇಶ್ ಹಾಗೂ ನೂತನ್ ಪೊಲೀಸರ ಅತಿಥಿಯಾಗಿದ್ದಾರೆ.

ಇನ್ನೂ ಪ್ರಮುಖ ಆರೋಪಿ ನಾರಾಯಣ್ ಸ್ಯಾಂಡಲ್ ವುಡ್ ಹಲವು ಚಿತ್ರಗಳಲ್ಲಿ ಖಳನಟನಾಗಿ ನಟಿಸಿದ್ದಾನೆ. ಸುದೀಪ್ ಅಭಿನಯದ ವೀರಪರಂಪರೆ, ಮೂರನೇ ಕ್ಲಾಸ್ ಮಂಜ, ಬಿಕಾಂ ಭಾಗ್ಯ ಚಿತ್ರಗಳಲ್ಲೂ ನಟಿಸಿದ್ದನಂತೆ. ಅಲ್ಲದೇ ಈ ಹಿಂದೆ ನಾರಾಯಣ್ ಮೇಲೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಲಿಸ್ಟ್​ ಇದ್ದು, ಎಂಟು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.

ಸದ್ಯ ವಜ್ರದ ವ್ಯಾಪಾರಿ ಕಿಡ್ನಾಪ್ ಕೇಸಲ್ಲಿ ರೀಲ್ ನಲ್ಲಿ ವಿಲನ್ ಪಾತ್ರ ಮಾಡಿದ್ದ ನಾರಾಯಣನನ್ನ ಪೊಲೀಸರು ರಿಯಲ್ ಆಗಿ ಬಂಧಿಸಿ ಜೈಲಿಗಟ್ಟಿದ್ದು, ಪ್ರಕರಣದ ತನಿಖೆ ಮುಂದುವರೆಸಿದ್ದಾರೆ.

RELATED ARTICLES

Related Articles

TRENDING ARTICLES