Friday, December 27, 2024

ಸುಮಾ-ರೇಖಾ ನಡುವಿನ ಮತ್ತೊಂದು ಆಡಿಯೋ ಸ್ಫೋಟ..!

ಬೆಂಗಳೂರು : ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಕೇಸ್ ದಿನಕ್ಕೊಂದು ತಿರುವು. ಕ್ಷಣಕ್ಕೊಂದು ಟ್ವಿಸ್ಟ್​ ಪಡೆದುಕೊಳ್ತಿದೆ. ಫೇಸ್​ಬುಕ್​ನಲ್ಲಿ ಪರಿಚಯವಾದ ರೇಖಾ ಹಾಗೂ ಅನಂತರಾಜು ಲಿವಿಂಗ್​ ರಿಲೇಷನ್ ಶಿಪ್ ಮೂಲಕ ದೈಹಿಕ‌ ಸಂಪರ್ಕದವರೆಗೂ ಬಂದಿತ್ತು. ಅದೇ ಸಂಬಂಧ ಅನಂತರಾಜು ಉಸಿರು ನಿಲ್ಲಿಸೋವರೆಗೂ ಬಂದುಬಿಟ್ಟಿತ್ತು. ಈಗ ಪತ್ನಿ ಸುಮಾ ಹಾಗೂ ರೇಖಾ ನಡುವಿನ ಸಮರ ಶುರುವಾಗಿದೆ.

ಪ್ರತಿ ದಿನ ಸೀರಿಯಲ್ ರೀತಿ ಸಾಗ್ತಿರುವ ಸುಮಾ -ರೇಖಾ ಕದನದ ಒದೊಂದೇ ಆಡಿಯೋ ಪ್ರತಿದಿನ ಲೀಕ್​ ಆಗುತ್ತಿದೆ. ಸುಮಾ ಹಾಗೂ ರೇಖಾ ನಡುವೆ ಫೋನ್​ನಲ್ಲಿ ನಡೆದಿರುವ ಸಂಭಾಷಣೆಯ ಆಡಿಯೋಗಳು ಈಗಾಗಲೇ ಸಖತ್​ ಸದ್ದು ಮಾಡುತ್ತಿವೆ. ಹೀಗಿರುವಾಗಲೇ ಸುಮಾ ಹಾಗೂ ರೇಖಾ ನಡುವಿನ ಮತ್ತೊಂದು ಆಡಿಯೋ ಲೀಕ್​ ಆಗಿದ್ದು, ಅದೂ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಹೌದು, ಅಷ್ಟಕ್ಕೂ ಈಗ ಲೀಕ್​ ಆಗಿರುವ ಆಡಿಯೋದಲ್ಲಿ ರೇಖಾ ಹಾಗೂ ಅನಂತ ರಾಜು ಅವರ ಮಗುವಿನ ಕುರಿತಾದ ವಿಷಯವೊಂದು ಬಹಿರಂಗವಾಗಿದೆ.

6 ವರ್ಷಗಳ ರಿಲೇಶನ್​ಶಿಪ್​ನಲ್ಲಿ ರೇಖಾ ಎರಡು ಸಲ ಗರ್ಭಿಣಿಯಾಗಿದ್ದರಂತೆ. ಈ ವಿಷಯ ಅನಂತರಾಜು ಅವರಿಗೂ ಗೊತ್ತಿತ್ತು. ತನಗೆ ಗಂಡು ಮಗು ಪಡೆಯಬೇಕೆಂಬ ಆಸೆ ಇತ್ತು. ಈ ವಿಷಯವನ್ನು ಸಾಕಷ್ಟು ಸಲ ಅನಂತು ಬಳಿ ಹೇಳಿದ್ದೆ. ಆದರೆ, ಇಬ್ಬರಿಗೂ ಇಬ್ಬರು ಮಕ್ಕಳಿರುವ ಕಾರಣ ಮತ್ತೊಂದು ಮಗುವನ್ನು ನೋಡಿಕೊಳ್ಳಲು ಕಷ್ಟ ಆಗುತ್ತೆ ಅಂತ ಅನಂತು ನಮಗೆ ಮಗು ಬೇಡ ಎಂದಿದ್ದರು. ಎರಡೂ ಸಲ ಗರ್ಭಿಣಿಯಾದಾಗಲೂ ಅನಂತರಾಜು ಅವರಿಗೆ ವಾಟ್ಸ್​ಆ್ಯಪ್​ ನಲ್ಲಿ ಚಾಟ್​ ಮೂಲಕ ವಿಷಯ ತಿಳಿಸಿದ್ದೆ. ಅದು ಈಗಲೂ ಅವರ ಚಾಟ್​ ಹಿಸ್ಟರಿಯಲ್ಲಿ ಹುಡುಕಿದ್ರೆ ಸಿಗುತ್ತೆ ಅಂತ ಈ ಆಡಿಯೋದಲ್ಲಿ ಸುಮಾ ಜತೆ ಮಾತನಾಡುವಾಗ ರೇಖಾ ಕಣ್ಣೀರಿಟ್ಟಿದ್ದಾರೆ .

ಇದು ರೇಖಾ ಮತ್ತು ಸುಮಾ ನಡುವೆ ನಡೆದ ಅಬಾರ್ಷನ್ ನ ಸಂಭಾಷಣೆ.ಸದ್ಯ ಪ್ರಕರಣ ಸಂಬಂಧ. ರೇಖಾ ಮೃತ ಅನಂತರಾಜು ಪತ್ನಿ ಸುಮಾ ಜತೆ ಈ ಹಿಂದೆ ಮಾತನಾಡಿರುವ ಆಡಿಯೋ ಕ್ಲಿಪ್​ಗಳನ್ನು ಪೊಲೀಸ್ರಿಗೆ ನೀಡಿದ್ದಾರೆ.ಅದರ ಜೊತೆಗೆ ತಮ್ಮ ಸಂಬಂಧಿ ಒಬ್ಬರಿಗೂ ಕೊಟ್ಟಿದ್ದಾರಂತೆ.  ಇನ್ನು ಬ್ಯಾಡರಹಳ್ಳಿ ಪೊಲೀಸ್ರು ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಸಂಬಂಧಪಟ್ಟವರ ವಿಚಾರಣೆ ನಡೆಸುತ್ತಿದ್ದಾರೆ. ಇದೇ ಕೇಸ್ ಮತ್ಯಾವ ಹಂತಕ್ಕೆ ಹೋಗಿ ನಿಲ್ಲತ್ತೋ..ಮತ್ಯಾವ ಆಡಿಯೋ ನಾಳೆ ಸ್ಫೋಟವಾಗತ್ತೊ ಗೊತ್ತಿಲ್ಲ

RELATED ARTICLES

Related Articles

TRENDING ARTICLES