Monday, December 23, 2024

ರೈತರಿಂದ ಶಾಸಕರ ಮನೆಗೆ ದಿಢೀರ್ ಮುತ್ತಿಗೆ

ಧಾರವಾಡ : ಸೊಸೈಟಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ರಸಗೊಬ್ಬರವೇ ಸಿಗುತ್ತಿಲ್ಲ ಎಂದು ರೈತರು ಧಾರವಾಡದಲ್ಲಿರುವ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್​ ಅವರ ಮನೆಗೆ ದಿಢೀರ್​ ಮುತ್ತಿಗೆ ಹಾಕಿದ್ದಾರೆ.

ಸದ್ಯ ಬಿತ್ತನೆ ಕಾರ್ಯ ಆರಂಭವಾಗಿದ್ದು,ಬಿತ್ತನೆಗೆ ಪೂರಕವಾದ DAP ಗೊಬ್ಬರವೇ ಧಾರವಾಡದ ಸುತ್ತ ಮುತ್ತ ಎಲ್ಲೂ ಸಿಗುತ್ತಿಲ್ಲ. ಕೃಷಿ ಇಲಾಖೆ ಅಧಿಕಾರಿಗಳನ್ನು ಹೋಗಿ ಕೇಳಿದರೆ ಬರೀ ಹಾರಿಕೆ ಉತ್ತರ ಕೊಡುತ್ತಿದ್ದಾರೆ ಎಂದು ಕಿಡಿಕಾರಿದರು.

ಇನ್ನು ಶಾಸಕರು ಸರ್ಕಾರದಲ್ಲಿದ್ದಾರೆ. ಹೀಗಾಗಿ ಅವರು ಈ ಸಮಸ್ಯೆ ಬಗೆಹರಿಸಬೇಕು ಎಂದು ರೈತರು ಮನವಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES