Monday, December 23, 2024

ಲವ್ ಫೇಲ್ಯೂರ್ ಬಗ್ಗೆ ಮೌನ ಮುರಿದ್ರು ರಕ್ಷಿತ್ ಶೆಟ್ಟಿ

ರಕ್ಷಿತ್ ಶೆಟ್ಟಿ.. ಕರಾವಳಿಯ ಮುದ್ದು ಪೋರ, ಟೀನೇಜ್​ ಹುಡ್ಗೀರ ಹೃದಯ ಕದ್ದ ಚೋರ. ಕಣ್ಣಲ್ಲೇ ಕೊಲ್ಲೋ ಹ್ಯಾಂಡ್ಸಮ್​​ ಹೀರೋ ರಕ್ಷಿತ್​​ ಮೇಲೆ ಮೊದಲ ನೋಟದಲ್ಲೇ ಪ್ರೀತಿ ಹುಟ್ಟೋದು ಸಹಜ. ನ್ಯಾಷನಲ್ ಕ್ರಶ್ ರಶ್ಮಿಕಾಗೂ ಅದೇ ಆಗಿತ್ತು. ಆದ್ರೆ ಕಾರಣಾಂತರಗಳಿಂದ ಅದು ಎಂಗೇಜ್​ಮೆಂಟ್​ಗೇನೇ ಮುರಿದುಬಿತ್ತು. ಇದೀಗ ರಕ್ಷಿತ್​​- ರಶ್ಮಿಕಾರ ಆ ಬ್ರೇಕಪ್ ಗುಟ್ಟು ರಟ್ಟಾಗಿದೆ.

  • ಲವ್ ಫೇಲ್ಯೂರ್ ಬಗ್ಗೆ ಮೌನ ಮುರಿದ್ರು ರಕ್ಷಿತ್ ಶೆಟ್ಟಿ
  • ಶೆಟ್ರ ಸಕ್ಸಸ್​​ಗೆ ಬ್ರೇಕಪ್​ ಕಾರಣ ಎಂದ್ರು ಕ್ರೇಜಿಸ್ಟಾರ್​​​..!

ರಕ್ಷಿತ್​​ ಹೆಸರು ಕೇಳ್ತಾ ಇದ್ರೇ ಕಾಲೇಜ್​ ಹುಡ್ಗೀರ ಎದೆಯಲ್ಲಿ ಮೋಡ ಇಲ್ಲದೇನೇ ಮಳೆ ಸುರಿಯುತ್ತೆ. ಬಿಸಿಲಲ್ಲೂ ತಂಗಾಳಿ ಬೀಸುತ್ತೆ. ಶೆಟ್ರ ಆ್ಯಕ್ಟಿಂಗ್​​, ಮ್ಯಾನರಿಸಂ, ಸ್ಟೈಲ್​​​ಗೆ  ಎಲ್ರೂ ಫಿದಾ ಆಗ್ತಾರೆ. ಅವರ ಟ್ಯಾಲೆಂಟ್​ ಬಗ್ಗೆ ಅವ್ರ ಸಿನಿಮಾಗಳೇ ಹೇಳುತ್ವೆ ಅಲ್ವಾ..? ಅವರ ಜೀವನದ ಲವ್​ ಬ್ರೇಕಪ್​​ ಸಖತ್​ ಸೌಂಡ್​​ ಮಾಡ್ತು. ರಕ್ಷಿತ್​​, ರಶ್ಮಿಕಾ  ಪ್ಯಾರ್​ ಕಹಾನಿ ಎಂಗೇಜ್​ಮೆಂಟ್​​ ಮುಗಿಸಿ ಮದ್ವೆ ಹಂತಕ್ಕೆ ಹೋಗಿತ್ತು. ಆದ್ರೆ ಈ ಪ್ರಣಯ ಪಕ್ಷಿಗಳು ಬೇಗ ದೂರಾಗಿ ಬಿಟ್ವು. ಕಿರಿಕ್ ಪರ್ಟಿ ಜೋಡಿ ಕಿರಿಕ್​ಗಳಿಂದಲೇ ಬೇರ್ಪಡುವಂತಾಯ್ತು.

ರಕ್ಷಿತ್​​ ಬ್ರೇಕಪ್​ ಬಗ್ಗೆ ಫ್ಯಾನ್ಸ್​​​ ಮಂಕಾಗಿದ್ದನ್ನ  ನೆನಪು ಮಾಡ್ಕೋಳೋಕೆ ನೋವಾಗುತ್ತೆ.  ಆದ್ರೆ ಶೆಟ್ರು ಮಾತ್ರ ಎಲ್ಲೂ ಓಪನ್​​ ಆಗಿ ಇದ್ರ ಬಗ್ಗೆ ಇಲ್ಲಿವರೆಗೂ ಮಾತನಾಡಲೇ ಇಲ್ಲ. ಇದೀಗ  ಕ್ರೇಜಿಸ್ಟಾರ್​ ಎದುರು ತಮ್ಮ ಮನದಾಳದ  ನೋವನ್ನ ಬಿಚ್ಚಿಟ್ಟಿದ್ದಾರೆ. ಪ್ರೇಮಲೋಕದ ರಣಧೀರನ ಎದುರು ಆ ಗುಟ್ಟನ್ನ ಬಹಿರಂಗಪಡಿಸಿದ್ದಾರೆ. ಯೆಸ್​​​. ಈ ಸರ್ಪ್ರೈಸಿಂಗ್​​ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದು ನಮ್ಮ ಆಂಕರ್​ ಅನುಶ್ರೀ ನಡೆಸಿದ ವಿಶೇಷ ಸಂದರ್ಶನ. ಜೊತೆಗೆ, ಶೆಟ್ರ ಸಕ್ಸಸ್​​ ಸೀಕ್ರೆಟ್​​ ಕೂಡ ಕ್ರೇಜಿಸ್ಟಾರ್​ ರಿವೀಲ್​ ಮಾಡ್ಬಿಟ್ರು.

ಸೆಲೆಬ್ರಿಟಿಗಳ ಜೊತೆ  ಅನುಶ್ರೀ ಫುಲ್​ ಆಫ್​ ಎನರ್ಜಿ, ಫುಲ್​ ಆಫ್​ ಆಕ್ಟಿವ್​ ಆಗಿ ಇಂಟರ್​ವ್ಯೂ  ಮಾಡ್ತಾರೆ. ಇತ್ತೀಚೆಗೆ ಎಕ್ಸ್​ಕ್ಲ್ಯೂಸಿವ್​ ಆಗಿ ಕನಸುಗಾರ ರವಿಚಂದ್ರನ್​ ಹಾಗೂ ರಕ್ಷಿತ್​ ಶೆಟ್ಟಿಗೆ ಆಂಕರ್ ಅನುಶ್ರಿ  ಸಂದರ್ಶನ ಮಾಡಿದ್ದಾರೆ. ಈ ವೀಡಿಯೋ ಸಿಕ್ಕಾ ಪಟ್ಟೆ ತರಲೆ ತಮಾಷೆ ಹರಟೆ ಜೊತೆ ಸಖತ್​ ಫನ್ನಿಯಾಗಿ ಮೂಡಿ ಬಂದಿದೆ. ಜೊತೆಗೆ ರಕ್ಷಿತ್​​, ರವಿಚಂದ್ರನ್​ ತಮ್ಮ ಜೀವನದ ಏಳು ಬೀಳುಗಳನ್ನು ಹಂಚಿಕೊಂಡಿದ್ದಾರೆ.

ಪ್ರೇಮಲೋಕ ಸಿನಿಮಾನ ಬೇರೆ ಹೀರೋಗೆ ಮತ್ತೆ  ಮಾಡೋಕೆ ಬಿಡಲ್ವಂತೆ ಕ್ರೇಜಿಸ್ಟಾರ್​​. ಯಾಕಂದ್ರೆ ಯಾರಿಗೂ ಪ್ರೀತಿ ಮಾಡೋಕೆ ಬರಲ್ಲ. ರಕ್ಷಿತ್​ ಶೆಟ್ಟಿಗೂ ಪ್ರೀತಿ ಮಾಡೋಕೆ ಬರಲ್ಲ ಎಂದ್ರು.  ಇದ್ರ ಜೊತೆಗೆ ರಕ್ಷಿತ್​​ ಸಕ್ಸಸ್​ ಆಗಿರೋದಕ್ಕೆ ಕಾರಣ ಲವ್​ ಬ್ರೇಕಪ್​ ಅನ್ನೋ ಟಾಪ್​ ಸೀಕ್ರೆಟ್​ ಕೂಡ ಬಿಚ್ಚಿಟ್ರು. ಈ ಮಾತಿಗೆ ರಕ್ಷಿತ್​, ಆಂಕರ್​ ಅನುಶ್ರೀ ಬಿದ್ದು ಬಿದ್ದು ನಕ್ಕರು. ಜೊತೆಗೆ ಈ ಮಾತು ನೆರೆದಿದ್ದ ಪ್ರೇಕ್ಷಕರನ್ನ ಸಹ ನಗೆಗಡಲಲ್ಲಿ ತೇಲಿಸಿತು.

ರವಿ ಸರ್​ ಮಾತಿಗೆ ರಿಯಾಕ್ಟ್​ ಮಾಡಿದ ರಕ್ಷಿತ್​​​. ಖಂಡಿತ ಕಾಲೇಜ್​ ಡೇಸ್​​ನಲ್ಲಿ ಲವ್​ ಫೇಲ್ಯೂರ್​ ಆಗಿದೆ. ನಂಗೂ ರಶ್ಮಿಕಾಗೂ ಲವ್​ ಫೇಲ್ಯೂರ್​ ಆಗಿಲ್ಲ ಅಂತಾ ಪರೋಕ್ಷವಾಗಿ ಉತ್ತರಿಸಿದ್ರು. ಈ ಶೋ ಪೂರ್ತಿ ಅನೇಕ ಪ್ರಶ್ನೆಗಳಿಗೆ ರವಿಚಂದ್ರನ್​​, ರಕ್ಷಿತ್​ ಉತ್ತರ ಕೊಟ್ರು. ಎಲ್ಲವೂ ಇಂಟ್ರೆಸ್ಟಿಂಗ್​ ಆಗಿದೆ. ಈ ಫನ್ನಿ ಸಂದರ್ಶನವನ್ನ ಮತ್ತೆ ಮತ್ತೆ ನೋಡಬೇಕು ಅನಿಸುತ್ತೆ.

ರಾಕೇಶ್​​ ಆರುಂಡಿ , ಫಿಲ್ಮ್ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES