Sunday, January 19, 2025

ಮದುವೆಯಾದ 5 ದಿನದಲ್ಲಿಯೇ ಮಗಳನ್ನ ಕಿಡ್ಯ್ನಾಪ್ ಮಾಡಿದ ಪೋಷಕರು

ಬೆಂಗಳೂರು :ಪ್ರೀತಿಸಿ ಮದುವೆಯಾದ ನಂತರವೂ ಮದುಮಗಳನ್ನು ಆಕೆಯ ಪಾಲಕರು ಅಪಹರಿಸಿರುವ ಘಟನೆ ಬ್ಯಾಡರಹಳ್ಳಿಯ ವಿದ್ಯಾಮಾನ್ಯ ನಗರದಲ್ಲಿ ನಡೆದಿದೆ.

ಮದುಮಗನ ಅಕ್ಕನ ಮನೆಯಲ್ಲಿದ್ದ ನವದಂಪತಿಯ ಮೇಲೆ ದಾಳಿ ಮಾಡಿ ಮದುಮಗಳನ್ನು ಆಕೆಯ ಪಾಲಕರೇ ಅಪಹರಿಸಿದ್ದಾರೆ. ಕಳೆದ ಮೇ. 25 ರಂದು ಜಲಜಾ ಎಂಬಾಕೆ ಗಂಗಾಧರ್​ನೊಂದಿಗೆ ದೇವಸ್ಥಾನದಲ್ಲಿ ಮದುವೆಯಾಗಿ, 30ರಂದು ನೆಲಮಂಗಲದ ನೋಂದಣಾಧಿಕಾರಿಗಳ ಕಚೇರಿಯಲ್ಲಿ ತಮ್ಮ ವಿವಾಹವನ್ನು ನೋಂದಣಿ ಮಾಡಿಸಿದ್ದಾರೆ.

ಗಂಗಾಧರ್ ಹಾಗೂ ಜಲಜಾ ಇಬ್ಬರು ನೆಲಮಂಗಲ ತಾಲೂಕಿನ ವೀರಸಾಗರ ನಿವಾಸಿಗಳು. ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಆದರೆ, ಮದುವೆಗೆ ಹುಡುಗಿಯ ಮನೆಯವರ ಒಪ್ಪಿಗೆ ಇರಲಿಲ್ಲ. ಆದರೂ ಪೋಷಕರನ್ನು ಎದುರು ಹಾಕಿಕೊಂಡು ತನ್ನ ಪ್ರಿಯಕರನನ್ನು ವರಿಸಿದ್ದಳು.

ಇದಾದ ಬಳಿಕ ನವದಂಪತಿ ಗಂಗಾಧರ್​ ಅಕ್ಕನ ಮನೆಯಲ್ಲಿ ಉಳಿದಿದ್ದರು. ಬ್ಯಾಡರಹಳ್ಳಿ ಪೊಲೀಸರ ಹೆಸರೇಳಿಕೊಂಡು ಸುಮಾರು 20 ಜನರ ಗ್ಯಾಂಗ್‌ ಬ್ಯಾಡರಹಳ್ಳಿಯ ವಿದ್ಯಾಮಾನ್ಯ ನಗರದಲ್ಲಿರುವ ಗಂಗಾಧರ್​ ಅಕ್ಕನ ಮನೆಯ ಮೇಲೆ ಏಕಾಏಕಿ ದಾಳಿ ಮಾಡಿದೆ. ಈ ವೇಳೆ ತಡೆಯಲು ಬಂದ ಎಲ್ಲರ ಮೇಲೆ ಹಲ್ಲೆ ಮಾಡಿ ಜಲಜಾಳನ್ನು ಅಲ್ಲಿಂದ ಅಪಹರಿಸಿದ್ದಾರೆ.

ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಈ ಘಟನೆ ನಡೆದಿದೆ.

RELATED ARTICLES

Related Articles

TRENDING ARTICLES