Wednesday, January 22, 2025

ಮೋದಿ ಮೋಸ ಮಾಡಿದ್ದಾರೆ : ಎಂ. ಲಕ್ಷ್ಮಣ್

ಮೈಸೂರು: ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ , ನಮ್ಮ ಅಭ್ಯರ್ಥಿ ಗೆದ್ದರೆ ಮೈಸೂರನ್ನು ಪ್ಯಾರಿಸ್ ಮಾಡುತ್ತೇನೆ ಎಂದು ಮೋದಿ ಹೇಳಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆಗ್ರಹಿಸಿದ್ದಾರೆ.

ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಸುಳ್ಳು ಪಿಹೆಚ್ಡಿ ಹೋಲ್ಡರ್ಸ್ ಪ್ರಹ್ಲಾದ್ ಜೋಷಿ, ಪ್ರತಾಪ್ ಸಿಂಹ ಉತ್ತರಿಸಲಿ. 2014 ರಲ್ಲಿ ಮೈಸೂರಿನ ಮಹಾರಾಜ ಗ್ರೌಂಡ್ ನಲ್ಲಿ ಮೈಸೂರನ್ನು ಬಿಗ್ಗರ್ ವಿಲೇಜ್ ಎಂದು ಹೇಳಿದ್ದರು. ಮೋದಿ ಹೇಳಿರುವ ವಿಡಿಯೋ ನಮ್ಮ ಬಳಿಯೂ ಇದೆ. ಪ್ಯಾರಿಸ್ ಮಾಡಲು ಮೈಸೂರಿಗೆ ಮೋದಿ ಅವರ 8ವರ್ಷದ ಕೊಡುಗೆ ಏನು ಎಂದು ಹೇಳಲಿ ಎಂದರು.

ಇನ್ನು, ಮೈಸೂರು ಬೆಂಗಳೂರು ರಸ್ತೆ ಮೋದಿ ಕೊಡುಗೆ ಎಂದು ಹೇಳಿಕೊಳ್ಳುತ್ತಿದ್ದಾರೆ , ಸ್ಪೀಚ್ ಅಂಡ್ ಹಿಯರಿಂಗ್ 150 ಕೋಟಿ ಕೊಟ್ಟಿದ್ದೀನಿ ಎನ್ನುತ್ತಾರೆ. ಇದೆಲ್ಲ ಸುಳ್ಳು ಮಾಹಿತಿಗಳು, ಮೈಸೂರಿಗೆ ಯೋಗ ಮಾಡಲು ಬರುವ ಮೋದಿ ಉತ್ತರಿಸಬೇಕು. ಈ ಬಗ್ಗೆ ಮೋದಿ ಅವರು ಅಥವಾ ರಾಜ್ಯದ ಮತ್ತೊಬ್ಬ ಮೋದಿ ಪ್ರಹ್ಲಾದ್ ಜೋಷಿ ಹಾಗೂ ಪ್ರತಾಪ್ ಸಿಂಹ ಉತ್ತರಿಸಲಿ. ಸುಳ್ಳು ಹೇಳುವುದರಲ್ಲಿ ಈ ನಾಯಕರು ಪಿಹೆಚ್ಡಿ ಮಾಡಿದ್ದಾರೆ. ಅಭಿವೃದ್ದಿ ವಿಚಾರದಲ್ಲಿ ಮೈಸೂರು 10ವರ್ಷ ಹಿಂದಕ್ಕೆ ಹೋಗಿದೆ. ಈ ಭಾಗದ ಜನಕ್ಕೆ ಮೋದಿ ಮೋಸ ಮಾಡಿದ್ದಾರೆ ಎಂದು ಹೇಳಿದರು.

ಅದಲ್ಲದೇ, ಇದೀಗ ಮೋದಿ ಪ್ಯಾರಿಸ್ ಮಾಡುತ್ತೇನೆ ಎಂದು ಮೋದಿ ಹೇಳೆಯಿಲ್ಲ ಎಂದು ಪ್ರತಾಪ್ ಸಿಂಹ ಸಮರ್ಥಿಸಿಕೊಳ್ಳುತ್ತಿದ್ದಾರೆ. ಸದ್ಯ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿರುವ ಅಂಶಗಳನ್ನೇ ಹೇಳಿಲ್ಲ ಎಂದು ಹೇಳುತ್ತಾರೆ. ಸುಳ್ಳು ಹೇಳುವುದೇ ಅಭ್ಯಾಸವಾಗಿದೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಂ. ಲಕ್ಷ್ಮಣ್ ವಾಗ್ದಾಳಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES