Monday, December 23, 2024

ಹಾಸನ ಜಿಲ್ಲೆಯಲ್ಲಿ ದುರಂತ ಅಂತ್ಯ ಕಂಡ ಲವ್‌ ಸ್ಟೋರಿ

ಹಾಸನ : ಮದುವೆ ನಿರಾಕರಿಸಿದ್ದಕ್ಕೆ ಪ್ರೇಮಿ ಆತ್ಮಹತ್ಯೆ ಮಾಡಿದ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಹಾಲೇಬೇಲೂರು ಗ್ರಾಮದಲ್ಲಿ ನಡೆದಿದೆ.

ಅನಿಲ್ (24) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಭಗ್ನಪ್ರೇಮಿ ಎಂಟು ವರ್ಷಗಳಿಂದ ಅನಿಲ್ ಹಾಗೂ ಭಾವನ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಗೆ ನಿರಾಕರಿಸಿದ್ದ ಭಾವನಾ ಪೋಷಕರು ಇದರಿಂದ ಮನನೊಂದು ಶುಕ್ರವಾರ ಬೆಳಗ್ಗೆ ಭಾವನ ಮನೆ ಮುಂದೆಯೇ‌ ಅನಿಲ್ ವಿಷ ಸೇವಿಸಿದ್ದಾನೆ. ಚಿಕಿತ್ಸೆಗಾಗಿ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾನೆ.

ಅನಿಲ್ ಸಾವಿಗೆ ಭಾವನ ಹಾಗೂ ಪೋಷಕರೇ ಕಾರಣವೆಂದು ಆರೋಪ ಮಾಡಿದ್ದು, ಗ್ರಾಮದಲ್ಲಿ ಫ್ಲೆಕ್ಸ್ ಹಾಕಿಸಿ ಯುವತಿ ಹಾಗೂ ಆಕೆಯ ಪೋಷಕರ ಮೇಲೆ ಮೃತನ ಸ್ನೇಹಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

RELATED ARTICLES

Related Articles

TRENDING ARTICLES