ಮುಂಬೈ : ಐಪಿಎಲ್ 2022ರ 15ನೇ ಸೀಸನ್ ಮುಗಿಯುತ್ತಿದ್ದಂತೆ ಸೌರವ್ ಗಂಗೂಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸೂಚನೆ ನೀಡಿದ್ದಾರೆ.
ಗಂಗೂಲಿ ಮಾಡಿರುವ ಟ್ವೀಟ್ ಇದೀಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಹೌದು, ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಸೂಚನೆ ನೀಡಿದ್ದು, ಇನ್ನು ಅಧಿಕೃತವಾಗಿ ರಾಜೀನಾಮೆ ಕೊಡುವುದೊದಮೆ ಬಾಕಿ ಉಳಿದಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ಗಂಗೂಲಿ ಯಾವುದೇ ಪ್ರತಿಕ್ರಿಯೆ ಈವರೆಗೂ ನೀಡಿಲ್ಲ. ಒಮ್ಮೆ ಏನಾದರೂ ರಾಜೀನಾಮೆ ನೀಡಿದ್ದಲ್ಲಿ ಬಿಸಿಸಿಐನ ನೂತನ ಅಧ್ಯಕ್ಷರು ಯಾರಾಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಗಂಗೂಲಿ ಅವರು 2019 ರ ಅಕ್ಟೋಬರ್‌ನಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಅದಕ್ಕೂ ಮೊದಲು ಅವರು ಬಂಗಾಳ ಕ್ರಿಕೆಟ್ ಸಂಸ್ಥೆಯ ಮುಖ್ಯಸ್ಥರಾಗಿದ್ದರು. ಇನ್ನು, ಟ್ವೀಟ್ ಮಾಡುವ ಮೂಲಕ ಬಿಸಿಸಿಐ ಗೆ ರಾಜೀನಾಮೆ ಕೋಡುವ ಸುಳಿವನ್ನು ಕೊಟ್ರಾ ದಾದಾ ಎಂಬ ಅನುಮಾನ ಮೂಡಿದ್ದು, ರಾಜಕೀಯಕ್ಕೆ ಪ್ರವೇಶಿಸುತ್ತಾರೋ ಎಂಬ ಅನುಮಾನಾ ವ್ಯಕ್ತವಾಗುತ್ತಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ‘1992ರಲ್ಲಿ ನನ್ನ ಕ್ರಿಕೆಟ್ ಪಯಣ ಆರಂಭಿಸಿದ್ದು 2022ಕ್ಕೆ 30 ವರ್ಷಗಳು ಪುರೈಸಲಿದೆ. ಅಲ್ಲಿಂದ ಇಲ್ಲಿಯವರೆಗೆ ಕ್ರಿಕೆಟ್ ನನ್ನ ಜೀವನಕ್ಕೆ ತುಂಬಾ ನೀಡಿದೆ ಎಂದಿದ್ದಾರೆ.. ಆದ್ರೆ, ರಾಜೀನಾಮೆ ನೀಡಿಲ್ಲ ಎಂದು ಗಂಗೂಲಿ ಸ್ಪಷ್ಟಪಡಿಸಿದ್ದಾರೆ.