Thursday, January 23, 2025

ದುಷ್ಕರ್ಮಿಗಳ ಗುಂಡಿಗೆ ಕಾಡಾನೆ ಬಲಿ

ಹಾಸನ : ಮಾನವ ಕಾಡುಪ್ರಾಣಿಗಳ ಸಂಘರ್ಷಕ್ಕೆ ಮತ್ತೊಂದು ಕಾಡಾನೆ ಬಲಿ. ಬೆಳೆ ನಾಶ ಮಾಡುತ್ತವೆಂದು ಕಾಡಾನೆಯನ್ನು ಗುಂಡಿಟ್ಟುಕೊಂದ ದುಷ್ಕರ್ಮಿಗಳು. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ಭದ್ರಾ ವೈಲ್ಡ್ ಲೈಫ್ ವೈದ್ಯರು ಭೇಟಿ ಹೌದು ಇಂತಹದ್ದೊಂದು‌ ಘಟನೆ ನಡೆದಿರೋದು ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಗಾರ್ಗಿಹಳ್ಳಿ ಗ್ರಾಮದ ಸಮೀಪ.

18 ವರ್ಷದ ಕಾಡಾನೆಯೊಂದು ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದೆ. ಸ್ಥಳಕ್ಕೆ DFO ಬಸವರಾಜು ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.. ಕಾಡಾನೆ ಸಾವಿಗೆ ನಿಖರವಾದ ಕಾರಣವನ್ನ ತಕ್ಷಣವೇ ಹೇಳೋದಕ್ಕೆ‌ ಸಾಧ್ಯವಿಲ್ಲ, ಮರಣೋತ್ತರ ಪರೀಕ್ಷ‌ ನಡೆಸಲಾಗಿದೆ. ಅದರ ವರದಿ ಬಂದ ನಂತರವೇ ಗೊತ್ತಾಗಲಿದೆ.

ಇನ್ನು‌ ಸ್ಥಳಕ್ಕೆ ಭದ್ರಾ ಅಭಯಾರಣ್ಯ ವಿಭಾಗದಿಂದ ವೈದ್ಯರ ತಂಡ ಭೇಟಿ ಮಾಡಿ, ಪರಿಶೀಲನೆ ನಡೆಸಿದ್ರು. ಸ್ಥಳದಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಿ, ಸರ್ಕಾರದ ನಿಯಮದಂತೆ ಅಲ್ಲಿಯೇ ಅಂತ್ಯಸಂಸ್ಕಾರ ನಡೆಸಿದ್ರು. ಇನ್ನು ಸ್ಥಳಿಯರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

RELATED ARTICLES

Related Articles

TRENDING ARTICLES