Sunday, January 19, 2025

ಸಿದ್ದರಾಮಯ್ಯನವರ ಸರ್ಟಿಫಿಕೇಟ್ RSSಗೆ ಅವಶ್ಯಕತೆಯಿಲ್ಲ : ಸಿ.ಟಿ. ರವಿ

ಹಾಸನ : ಪ್ರಕೃತಿ ವಿಕೋಪಗಳು ಸಂಭವಿಸಿದಾಗ, ಅಪಘಾತಗಳು ಸಂಭವಿಸಿದಾಗ ಮೊದಲು ಜನರ ನೆರವಿಗೆ ಧಾವಿಸಿದ್ದು ಆರ್ ಎಸ್ ಎಸ್ ನವರು ಎಂದು ಹಾಸನದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.

ಆರ್ ಎಸ್ ಎಸ್ ವಿರುದ್ಧ ಸಿದ್ದರಾಮಯ್ಯ ಸರಣಿ ಟ್ವಿಟ್ ವಿಚಾರವಾಗಿ ಮಾತನಾಡಿದ ಅವರು, ಅವರ ಟ್ವಿಟ್ ನ ಪ್ರತಿಯೊಂದಕ್ಕೂ ಉತ್ತರ ಕೊಟ್ಟಿದ್ದೇನೆ. ಆರ್ ಎಸ್‌ ಎಸ್ ನ ಸ್ವಯಂ ಸೇವಕನಾಗಿ ಉತ್ತರ ಕೊಟ್ಟಿದ್ದೇನೆ. ಪ್ರಕೃತಿ ವಿಕೋಪಗಳು ಸಂಭವಿಸಿದಾಗ, ಅಪಘಾತಗಳು ಸಂಭವಿಸಿದಾಗ ಮೊದಲು ಜನರ ನೆರವಿಗೆ ಧಾವಿಸಿದ್ದು ಆರ್ ಎಸ್ ಎಸ್​​ನವರು ಎಂದರು.

ಇನ್ನು, 1948 ರಲ್ಲಿ ಪಾಕಿಸ್ತಾನ ಕಾಶ್ಮಿರದ ಮೇಲೆ ಆಕ್ರಮಣ‌ ಮಾಡಿದಾಗ ಅಲ್ಲಿ ಹಿಮದಿಂದ ಆವೃತವಾದ ವಿಮಾನನಿಲ್ದಾಣವನ್ನ ತೆರವುಗೊಳಿಸಿ, ಸೈನಿಕರಿಗೆ ಸರಕು ಸರಂಜಾಮುಗಳನ್ನು ಹೊತ್ತಕೊಂಡು ಹೋಗಿ ನೆರವಿಗೆ ನಿಂತಿದ್ದು ಆರ್ ಎಸ್ ಎಸ್. 1963 ರ ರಿಪಬ್ಲಿಕ್ ಡೇ ಪೆರೇಡ್ ನಲ್ಲಿ ಆರ್ ಎಸ್ ಎಸ್ ಗೆ ಒಂದೇ ಒಂದು ಖಾಸಗಿ ಸಂಘಟನೆಗೆ ಪಥಸಂಚಲನಕ್ಕೆ ಅವಕಾಶ ಮಾಡಿಕೊಟ್ಟಿದ್ರು ಆರ್ ಎಸ್‌‌ಎಸ್ ಏನು ಅಂತಾ ತನ್ನ ದೇಶಭಕ್ತಿಯ ಮೂಲಕ ಸಾಭೀತುಪಡಿಸಿದೆ. ಸಿದ್ದರಾಮಯ್ಯ ನವರ ಸರ್ಟಿಫಿಕೇಟ್ ನ ಆರ್ ಎಸ್ ಎಸ್ ಗೆ ಅವಶ್ಯಕತೆಯಿಲ್ಲ. ನಾವು ಆರ್ ಎಸ್‌ಎಸ್ ನ ಮುಗಿಸ್ತೇವೆ ಅಂದೋರ ಕಥೆಯೆಲ್ಲ ಮುಗಿದು ಹೋಗಿದೆ. ಅವರ ಅಸ್ತಿತ್ವವನ್ನ ಕಳೆದುಕೊಂಡಿದ್ದಾರೆ ಈ ದೇಶದ ರಾಷ್ಟ್ರಪತಿ, ಉಪರಾಷ್ಟಪತಿ, ಲೋಕಸಭೆಯ ಉಪಾಧ್ಯಕ್ಷ, ದೇಶದ ಪ್ರಧಾನ ಮಂತ್ರಿ, ಗೃಹಸಚಿವ, ರಕ್ಷಣಾ ಸಚಿವ ಇವೆರಲ್ಲಾ ಎರ್ ಎಸ್ ಎಸ್ ನ ಸ್ವಯಂ ಸೇವಕರು ಎಂದು ಹೇಳಿದರು.

ಅದಲ್ಲದೇ, ಆರ್ ಎಸ್ ಎಸ್ ಗೆ ಪ್ರಶ್ನೆ ಕೇಳಿದ್ರೆ ಬಿಜೆಪಿಯವರು ಯಾಕೆ ಉತ್ತರ ಕೊಡಬೇಕು ಅಂತಾರೆ. ನಾನು ಸ್ವಯಂಸೇವಕನಾಗಿ ಉತ್ತರ ಕೊಡುತ್ತಿದ್ದೇನೆ. ನಾವು ಅದೇ‌ ಮಾತನ್ನ ಸಿದ್ದರಾಮಯ್ಯ ನವರಿಗೆ ಕೇಳೋದಕ್ಕೆ ಬಯಸುತ್ತೇನೆ. ಎ.ಒ. ಹ್ಯೂಂ ಕಾಂಗ್ರೆಸ್ ಸ್ಥಾಪಿಸಿದ್ದು, ಅವರು ಯಾರು, ಈ ದೇಶದವನಾ..? ಇವತ್ತು ಕಾಂಗ್ರೆಸ್ ನ ನೇತೃತ್ವ ವಹಿಸಿರೋ ಸೋನಿಯಾಗಾಂಧಿ ಮೂಲ ಕೇಳಿದ್ರು ಉರಿ ಅತ್ತುತ್ತೆ ಇವರಿಗೆ ಈಗಿರೋ ಕಾಂಗ್ರೆಸ್ ಒಂದೊಂದು ನಡೆಯೂ ಸಂಶಯಕ್ಕೆ ಆಸ್ಪದ ಕೊಡುತ್ತೆ ಎಂದರು.

RELATED ARTICLES

Related Articles

TRENDING ARTICLES