Sunday, January 19, 2025

ಬಿಎಂಟಿಸಿ 3ನೇ ಬ್ಯಾಚ್ ಎಲೆಕ್ಟ್ರಿಕ್ ಬಸ್ ಖರೀದಿಗೆ ಅಸ್ತು..!

ಬೆಂಗಳೂರು: ಇಕೋ ಫ್ರೆಂಡ್ಲಿ ಬಸ್ ರಸ್ತೆಗಿಳಿಸ್ತೀವಿ. ಮಾಲಿನ್ಯವನ್ನ ಝೀರೋ ಮಾಡ್ತಿವಿ ಅಂತ ಬಿಎಂಟಿಸಿ ಕೋಟಿ ಕೋಟಿ ಸುರಿದು ಎಲೆಕ್ಟ್ರಿಬಸ್ ರಸ್ತೆಗಿಳಿಸಿದೆ. ಖಾಸಗಿ ಕಂಪನಿ ಜೊತೆಗೆ ಒಡಂಬಡಿಕೆ ಮಾಡಿಕೊಂಡು ಬಸ್ ನಿರ್ವಹಣೆಯನ್ನ ಆ ಕಂಪನಿಗೆ ವಹಿಸಿಕೊಟ್ಟಿದೆ. ಹೇಳೋಕೆ ಎಲೆಕ್ಟ್ರಿಕ್ ಬಸ್, ಮೆಂಟೇನೆನ್ಸ್ ಖಾಸಗಿ ಕಂಪನಿಯದ್ದು. ಅವ್ರಿಗೆ ಕಿಲೋಮೀಟರ್ ಲೆಕ್ಕದಲ್ಲಿ ಕಾಸು ಕೊಟ್ರಾಯ್ತು. ಬಂದ ಕಲೆಕ್ಷನ್ ಎಣಿಸಿ ಖಾಜಾನೆ ತುಂಬಿಸಿಕೊಂಡ್ರಾಯ್ತು ಅಂತ ನಿಗಮದ ಅಧಿಕಾರಿಗಳು ಲೆಕ್ಕಾಚಾರ ಹಾಕಿದ್ರು. ಅಲ್ಲದೇ ಈ ಖಾಸಗಿ ಕಂಪನಿಗಳ ಜೊತೆಗಿನ ಗುತ್ತಿಗೆ ಬಗ್ಗೆ ಕಲ್ಲರ್ ಕಲ್ಲರ್ ಕತೆಯ್ನೂ ಹೇಳ್ತಿದ್ರು. ಆದ್ರೆ ಈ ಗುತ್ತಿಗೆ ಬಸ್ಗಳ ನಿಜ ಬಣ್ಣ ಅದಾಗ್ಲೇ ಬಯಲಾಗಿದೆ. ಸ್ವತಹ ಬಿಎಂಟಿಸಿಯೇ ಇನ್ಮುಂದೆ ಗುತ್ತಿಗೆ ಆಧಾರದ ಬಸ್ ಸಹವಾಸ ಬೇಡ ಅಂತ ಸರ್ಕಾರಕ್ಕೆ ಮನಮರಿಕೆಯನ್ನೂ ಮಾಡಿಕೊಂಡಿದೆ. ಹೀಗಿದ್ರೂ ಸರ್ಕಾರ ಮೂರನೇ ಬ್ಯಾಚ್ನಲ್ಲಿ 830 ಬಸ್ ಖರೀದಿ ಒಪ್ಪಂದ ಫೈನಲ್ ಮಾಡಿದೆ. ಸರ್ಕಾರದ ಈ ನಿರ್ಧಾರ ಬಿಎಂಟಿಸಿಯನ್ನ ಶಾಶ್ವತವಾಗಿ ಮುಳುಗಿಸೋ ಆತಂಕ ವ್ಯಕ್ತ ಹೆಚ್ಚಿಸಿದೆ.

ಮೊದಲ ಬ್ಯಾಚ್ನಲ್ಲಿ ಎನ್ಟಿಪಿಸಿಯಿಂದ ಗುತ್ತಿಗೆ ಆಧಾರದಲ್ಲಿ ಖರೀದಿಸಿದ 90 ಬಸ್ಗಳೇ ಲಾಸಾಗ್ತಿದೆ ಅಂತ ಗೊತ್ತಿದ್ದೂ ಎರಡನೇ ಬ್ಯಾಚ್ನಲ್ಲಿ 300 ಬಸ್ ಖರೀದಿಗೆ ಸರ್ಕಾರ ಅನುಮತಿಕೊಟ್ಟಿತ್ತು. ಈ 300 ಎಲೆಕ್ಟ್ರಿಕ್ ಬಸ್ಗಳು ಇನ್ನೇನು ಒಂದೆರಡು ತಿಂಗಳಲ್ಲಿ ಬಿಎಂಟಿಸಿಯ ಕೈಸೇರೋ ಸಾಧ್ಯತೆಯೂ ಇದೆ. ಹೀಗಿರುವಾಗ್ಲೇ ಮತ್ತೆ ಎಲೆಕ್ಟ್ರಿಕ್ ಬಸ್ ಖರೀದಿ ಫೈನಲ್ ಆಗಿದೆ. ಕೇಂದ್ರಸರ್ಕಾರ ಸಬ್ಸಿಡಿ ಕೊಟ್ಟಿದೆ ಅನ್ನೋ ಕಾರಣ ನೀಡಿ ಮತ್ತೆ 830 ಎಲೆಕ್ಟ್ರಿಕ್ ಬಸ್ ಖರೀದಿಗೆ ನಿರ್ಧರಿಸಲಾಗಿದೆ. ಈ ಬಾರಿ ಟಾಟಾ ಕಂಪನಿ ಜೊತೆಗೆ ಒಪ್ಪಂದ ಫೈನಲ್ ಆಗಿದೆ. ಹಿಂದಿನಂತೆ ಗುತ್ತಿಗೆ ಆಧಾರದಲ್ಲೇ ಬಸ್ ರಸ್ತೆಗಿಳಿಯುತ್ತಿದೆ. ಬಿಎಂಟಿಸಿಯೇ ಈ ಹಿಂದೆ ಗುತ್ತಿಗೆ ಆಧಾರದಲ್ಲಿ ಬಸ್ ಬೇಡ, ಕೇಂದ್ರ ಸರ್ಕಾರ ಕೊಡುವ 50 ಲಕ್ಷ, ಹಾಗೂ ರಾಜ್ಯ ಸರ್ಕಾರದ 33 ಲಕ್ಷ ಹಣವನ್ನು ಬಿಎಂಟಿಸಿಗೆ ನೀಡಿದ್ರೆ ನಾವೇ ಬಸ್ ಖರೀದಿಸ್ತೀವಿ ಎಂದಿತ್ತು. ಆದ್ರೆ, ಇದಕ್ಕೆ ಸಾರಿಗೆ ಇಲಾಖೆ ಒಪ್ಪದೇ ಖಾಸಗಿಯವರ ಜೊತೆ ಗುತ್ತಿಗೆ ಬಸ್ ಖರೀದಿಗೆ ಮುಂದಾಗಿರೋದು ಈಗ ಹಲವು ಅನುಮಾನಕ್ಕೆ ದಾರಿ ಮಾಡಿ ಕೊಡ್ತಿದೆ.

ಎಲೆಕ್ಟ್ರಿಕ್ ಬಸ್‌ ಬಿಳಿಯಾನೆ..!
ಒಟ್ಟು ಎಲೆಕ್ಟ್ರಿಕ್ ಬಸ್ – 90
ಕಿ.ಮೀ.ಗೆ ಬಿಎಂಟಿಸಿ ಪಾವತಿಸೋ ಹಣ 51.ರೂ 60 ಪೈಸೆ
ಒಂದು ಬಸ್‌ನ ಕನಿಷ್ಠ ಕಿ.ಮೀ. ಒಪ್ಪಂದ- 180 ಕಿ.ಮೀ.
ದಿನಕ್ಕೆ ಒಂದು ಬಸ್‌ಗೆ ಪಾವತಿಸಬೇಕಾದ ಹಣ  9.288ರೂ.
ಪ್ರತಿ ಬಸ್‌ನಿಂದ ಬರ್ತಿರೋ ಆದಾಯ 5,868 ರೂ.
ಪ್ರತಿ ಬಸ್‌ನಿಂದ ದಿನಕ್ಕಾಗೋ ನಷ್ಟ – 3420 ರೂ.
ಪ್ರತಿ ಕಿ.ಮೀ.ಗೆ ಆಗ್ತಿರೋ ನಷ್ಟ 19 ರೂ.

ನಿಜ ಸದ್ಯ ಬಿಎಂಟಿಸಿ NTPC ಕಂಪನಿ ಜೊತೆಗೆ ಸೇರ್ಕೊಂಡು 90 ಎಲೆಕ್ಟ್ರಿಕ್ ಬಸ್ ರಸ್ತೆಗಿಳಿಸಿದೆ. ಆದ್ರೆ, ಎನ್ಟಿಪಿಸಿ ಕಂಪನಿ ಜೊತೆಗೆ ಬಿಎಂಟಿಸಿ ಮಾಡಿಕೊಂಡಿರೋ ಕರಾರು ಈಗ ನಿಗಮಕ್ಕೆ ಮುಳುವಾಗೋ ಎಲ್ಲಾ ಲಕ್ಷಣ ಕಾಣಿಸ್ತಿದೆ. ಕಾರಣ ಏನಂದ್ರೆ ಬಸ್‌ಗೆ ಜನ ಬರ್ಲಿ ಬಾರದಿರ್ಲಿ ಪ್ರತೀ ಕಿಲೋಮೀಟರ್ಗೆ 51 ರೂ 60 ಪೈಸೆ ಯಂತೆ 180 ಕಿಲೋಮೀಟರ್ಗೆ 9.288ರೂಗಳನ್ನ ನಿತ್ಯ  ಎನ್ಟಿಪಿಸಿ ಕಂಪನಿಗೆ ಪಾವತಿ ಮಾಡ್ಬೇಕು. ಆದ್ರೆ ಒಂದು ಎಲೆಕ್ಟ್ರಿಕ್ ಬಸ್ನಿಂದ ಪ್ರತಿನಿತ್ಯ ಟಿಕೆಟ್ ಪೇರ್ ಕಲೆಕ್ಷನ್ ಆಗ್ತಿರೋದು 5,868 ರೂ ಮಾತ್ರ. ಹೀಗಾಗಿ ಪ್ರತಿನಿತ್ಯ  ಒಂದು ಎಲೆಕ್ಟ್ರಿಕ್ ಬಸ್ ರಸ್ತೆಗಿಳಿದ್ರೆ ನಿಗಮಕ್ಕೆ 3420ರೂ ನಷ್ಟವಾಗ್ತಿದೆ.

ಸದ್ಯ ಈ ಮೂರೂ ಕಂಪನಿಗಳ ಜೊತೆಗೆ 10 ವರ್ಷಕ್ಕೆ ಕರಾರು ಮಾಡಿಕೊಳ್ಳಲಾಗಿದೆ. ನಷ್ಟ ಎಷ್ಟೇ ಹೆಚ್ಚಾದ್ರೂ ನಿಗಮ ಮಾತ್ರ ನಿತ್ಯ ಹಣ ಎಣಿಸ್ಲೇ ಬೇಕು. ಮಾರ್ಕೋಪೋಲೋ, ವೋಲ್ವೋ ಬಸ್‌ಗಳಿಂದ ಹೊಡೆತ ತಿಂದಿದ್ದ ನಿಗಮ ಎಚ್ಚೆತ್ತುಕೊಳ್ಳುತ್ತೆ. ಇನ್ಮುಂದೆ ಈ ತಪ್ಪು ಮಾಡೋದಿಲ್ಲ ಎಂದೇ ಎಲ್ಲರೂ ನಿರೀಕ್ಷೆ ಮಾಡಿದ್ರು. ಆದ್ರೆ, ಎಲೆಕ್ಟ್ರಿಕ್ ಬಸ್ ವಿಚಾರದಲ್ಲಿ ಅವಿವೇಕತನದಿಂದಲೋ ಅಥವಾ ಕಮಿಷನ್ ಆಸೆಯಿಂದಲೋ ಈ ಒಪ್ಪಂದ ಮಾಡಿಕೊಳ್ಳಲಾಗಿದೆ.  ಈಗ ಈ ಒಪ್ಪಂದ ನಿಗಮಕ್ಕೆ ಮರಣ ಶಾಸನವಾಗಿ ಮಾರ್ಪಡೋ ಮುನ್ಸೂಚನೆ ಸಿಗ್ತಿದೆ.

RELATED ARTICLES

Related Articles

TRENDING ARTICLES